For Quick Alerts
ALLOW NOTIFICATIONS  
For Daily Alerts

ಬಳ್ಳಿ ಬದನೆ ಮೊಸರು ಗೊಜ್ಜು

Posted By:
|

ಬದನೆಯಂತೆ ಕಂಡರೂ ಬದನೆಕಾಯಿ ಅಲ್ಲ,ಸೀಮೆ ಸೌತೆಯಂತೆ ಕಂಡರೂ ಇದು ಅದಲ್ಲ. ಹಾಗಾದ್ರೆ ಇದ್ಯಾವ ಕಾಯಿ ಗೊತ್ತಾ? ಹೆಚ್ಚಿದರೆ ಹಾಲುಗುಂಬಳದಂತೆ ನೋಡುವುದಕ್ಕೆ ಸೀಮೆಬದನೆಯಂತೆ. ಬಳ್ಳಿಯಲ್ಲಿ ಬೆಳೆಯುವ ಈ ಕಾಯಿಯನ್ನು ಬೀಳು ಬದನೆ ಅಥವಾ ಬಳ್ಳಿ ಬದನೆ ಎಂದು ಕರೆಯಲಾಗುತ್ತದೆ.

Passiflora Quadrangularis Recipe

ಇಂಗ್ಲೀಷಿನಲ್ಲಿ ಈ ಕಾಯಿಯನ್ನು passiflora quadrangularis ಎನ್ನಲಾಗುತ್ತದೆ. ಶ್ರೀಲಂಕಾದ ಮಂದಿ ಹೆಚ್ಚು ಅಡುಗೆಗಳಲ್ಲಿ ಬಳಸುತ್ತಾರೆ. ಹಲ್ವಾ,ಪಲ್ಯ, ಸಾಂಬಾರ್, ಗೊಜ್ಜು, ಸೇರಿದಂತೆ ಅನೇಕ ಖಾದ್ಯಗಳನ್ನು ಇದರಿಂದ‌ ತಯಾರಿಸಬಹುದು. ವಿದೇಶಗಳಲ್ಲಿ ಐಸ್ ಕ್ರೀಮ್ ತಯಾರಿಕೆಯಲ್ಲೂ ಬಳಸಲಾಗುತ್ತದೆ.

ಗ್ರೀನ್ ಹೌಸ್ ಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ. ಯಾವುದಾದರೂ ಮರಕ್ಕೆ ಇಲ್ಲವೆ ಚಪ್ಪರಕ್ಕೆ ಹಬ್ಬಿಸಿ ಇದನ್ನು ಬೆಳೆಸಬಹುದು. ಕಾಯಿ ಬಿಡುವುದಕ್ಕೆ ಸಮಯ ತೆಗೆದುಕೊಳ್ಳಬಹುದು. ಆದರೆ ರುಚಿಗೆ ಕೊರತೆ ಇಲ್ಲ.

ಮೊದಲಿಗೆ ಗಿಡದಲ್ಲಿ ಗಡಿಯಾರದ ಹೂವಿನಂತೆ ನೀಲಿ ಬಣ್ಣದ ಹೂವುಗಳಾಗುತ್ತದೆ. ಕೆಲವೇ ದಿನದಲ್ಲಿ ಹೂವುಗಳಿಂದ ಹಸಿರು ಕಾಯಿಗಳು ಗೋಚರಿಸುತ್ತದೆ. ತೀರಾ ಬೆಳೆದ ಕಾಯಿಗಳು ಕೊನಲಾಗಿರುತ್ತದೆ. ಎಳೆಯ ಕಾಯಿಗಳನ್ನು ಅಡುಗೆಗೆ ಬಳಸಬಹುದು.

ನಾವಿಲ್ಲಿ ಬಳ್ಳಿ ಬದನೆಯ ಮೊಸರು ಗೊಜ್ಜು ಮಾಡುವ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

Passiflora Quadrangularis Recipe/ ಬಳ್ಳಿ ಬದನೆ ಮೊಸರು ಗೊಜ್ಜು
Passiflora Quadrangularis Recipe/ ಬಳ್ಳಿ ಬದನೆ ಮೊಸರು ಗೊಜ್ಜು
Prep Time
5 Mins
Cook Time
5M
Total Time
10 Mins

Recipe By: Sushma

Recipe Type: Gojju

Serves: 3

Ingredients
  • ಬೇಕಾಗುವ ಸಾಮಗ್ರಿಗಳು:

    ಬಳ್ಳಿ ಬದನೆ- ಒಂದು ಕಾಯಿ

    ಹಸಿಮೆಣಸು- ಎರಡರಿಂದ ಮೂರು

    ಉದ್ದಿನಬೇಳೆ- ಒಂದು ಸ್ಪೂನ್

    ಸಾಸಿವೆಕಾಳು- ಒಂದು ಸ್ಪೂನ್

    ಅಡುಗೆ ಎಣ್ಣೆ- ಎರಡು ಸ್ಪೂನ್

    ಕರಿಬೇವಿನಸೊಪ್ಪು ಅಥವಾ ಕೊತ್ತುಂಬರಿ ಸೊಪ್ಪು- ನಾಲ್ಕರಿಂದ‌ ಐದು ಎಸಳು

    ಉಪ್ಪು- ರುಚಿಗೆ ತಕ್ಕಷ್ಟು

    ಮೊಸರು- ಅರ್ಧ ಲೀಟರ್

Red Rice Kanda Poha
How to Prepare
  • ಮಾಡುವ ವಿಧಾನ-

    ಮೊದಲಿಗೆ ಸಿಪ್ಪೆ ತೆಗೆದು ಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.

    ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಮತ್ತು ಸ್ವಲ್ಪ ನೀರು ಸೇರಿಸಿ ಹೆಚ್ಚಿದ ಹೋಳುಗಳನ್ನು ಚೆನ್ನಾಗಿ ಬೇಯಿಸಿ.

    ಬೆಂದ ನಂತರ ಮಿಶ್ರಣವನ್ನು ತಣಿಯಲು ಬಿಡಿ.

    ತಣಿದ ನಂತರ ಮೊಸರು ಸೇರಿಸಿ ನಂತರ ಒಗ್ಗರಣೆ ಮಾಡಬೇಕು.

    ಅಡುಗೆ ಎಣ್ಣೆಗೆ ಸಾಸಿವೆ ಹಾಕಿ, ಉದ್ದಿನಬೇಳೆ ಹಾಕಿ ಕೆಂಬಣ್ಣಕ್ಕೆ ಬಂದಾಗ ಕರಿಬೇವಿನ ಎಸಳು ಮತ್ತು ಒಂದೆರಡು ಕೆಂಪು ಮೆಣಸನ್ನು ಹಾಕಿ ಒಗ್ಗರಣೆ ಮಾಡಿ.

    ರುಚಿರುಚಿಯಾದ ಬಳ್ಳಿಬದನೆಯ ಮೊಸರು ಗೊಜ್ಜು ರೆಡಿ.

    ಅನ್ನದ ಜೊತೆ‌ಗೆ ಕಲಸಿ ಸೇವಿಸಲು ಬಹಳ ರುಚಿಯಾಗಿರುತ್ತದೆ.

Instructions
  • ಆರೋಗ್ಯಕ್ಕೆ ಬಹಳ ಹಿತವಾಗಿರುವ ತರಕಾರಿ ಇದು. ಗ್ಯಾಸ್ಟ್ರಿಕ್‌ ಆಗುವುದಿಲ್ಲ. ಸುಲಭವಾಗಿ ಜೀರ್ಣವಾಗುತ್ತದೆ. ಮಲಭದ್ಧತೆ ಆಗುವುದಿಲ್ಲ. ಶ್ರೀಲಂಕಾದಲ್ಲಿ ಇದನ್ನು ಐಸ್ ಕ್ರೀಮ್ ಗಳ ತಯಾರಿಕೆಯಲ್ಲಿಯೂ ಬಳಸುತ್ತಾರಂತೆ. ದೇಹ ತೂಕ ಇಳಿಸುವುದಕ್ಕೂ ಕೂಡ ಈ ತರಕಾರಿ ನಿಮಗೆ ನೆರವು ನೀಡುತ್ತದೆ. ಶೀತ ಆಗುವುದನ್ನು ಇದು ತಡೆಯುತ್ತದೆ.ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
Nutritional Information
  • ವಿಟಮಿನ್ ಸಿ - (78.67%)
  • ಕಬ್ಬಿಣ - (10.00%)
  • ಪಾಸ್ಪರಸ್ - (2.44%)
  • ವಿಟಮಿನ್ ಬಿ3 - (2.36%)
[ 5 of 5 - 19 Users]
X
Desktop Bottom Promotion