Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ತುಂಬಾ ಸರಳವಾಗಿದೆ ಪನ್ನೀರ್ ಮೊಮೊಸ್ ರೆಸಿಪಿ
ಮೊಮೊಸ್ ನೋಡಿದರೆ ಸಾಕು ಅದನ್ನು ತಿನ್ನಬೇಕೆನಿಸುತ್ತದೆ. ನೀವು ರುಚಿಕರವಾದ ಮೊಮೊಸ್ಗಾಗಿ ಹೊರಗಡೆಯೇ ಹೋಗಿ ತಿನ್ನಬೇಕೆಂದಿಲ್ಲ. ಇವುಗಳನ್ನು ಮನೆಯಲ್ಲಿಯೇ ಮಾಡಬಹುದು.
ಮೊಮೊಸ್ ಇದು ಚೈನೀಸ್ ರೆಸಿಪಿಯಾಗಿದ್ದರೂ ಇಲ್ಲಿ ನಾವು ಅಪ್ಪಟ ನಮ್ಮ ಶೈಲಿಗೆ ತಂದು ಮಾಡಿದ್ದೇವೆ. ಅದಕ್ಕೆ ಬಳಸುವ ಕೆಂಪ ಚಟ್ನಿ ಕೂಡ ಯಾವುದೇ ಸಾಸ್ ಹಾಕದೇ ಟೊಮೆಟೊ ಹಾಕಿ ಮಾಡಲಾಗಿದೆ.

ಈ ಮೊಮೊಸ್ ಅನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇದರಲ್ಲಿ ವೆಜ್, ನಾನ್ವೆಜ್ ತಯಾರಿಸಲಾಗುವುದು. ನಾವಿಲ್ಲಿ ಪನ್ನೀರ್ ಹಾಕಿ ಮಾಡುವ ಮೊಮೊಸ್ ರೆಸಿಪಿ ಶೇರ್ ಮಾಡಿದ್ದೇವೆ ನೋಡಿ.
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
ಕ್ಯಾರೆಟ್ 1/2 ಕಪ್
ಕ್ಯಾಬೇಜ್ 1/2 ಕಪ್
ಬೀನ್ಸ್ 1 ಕಪ್
ಸ್ಪ್ರಿಂಗ್ ಆನಿಯನ್ 1 ಕಪ್
ಈರುಳ್ಳಿ 1/2 ಕಪ್
ಬೆಳ್ಳುಳ್ಳಿ 1/2 ಚಮಚ
ಮೈದಾ 4 ಕಪ್
ಕಾಳು ಮೆಣಸಿನ ಪುಡಿ 1/4 ಚಮಚ
ಪನ್ನೀರ್ 1 ಕಪ್
ಬೆಣ್ಣೆ 1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
-
ಮಾಡುವ ವಿಧಾನ:
* ಪ್ಯಾನ್ಗೆ ಎಣ್ಣೆ ಹಾಕಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಬೆಳ್ಳಿಳ್ಳಿ ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ, ಉಳಿದೆಲ್ಲಾ ಸಾಮಗ್ರಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಫ್ರೈ ಮಾಡಿ ಇಡಿ.
* ಈಗ ಮೈದಾಕ್ಕೆ ರುಚಿಗೆ ತಕ್ಕ ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಹಿಟ್ಟು ಮೃದುವಾದ ಬಳಿಕ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ.
* ಈಗ ಚಪಾತಿಗೆ ಲಟ್ಟಿಸುವ ರೀತಿಯಲ್ಲಿ ತೆಳುವಾಗಿ ಲಟ್ಟಿಸಿ. ಲಟ್ಟಿಸಿದಾಗ ವೃತ್ತಾಕಾರವಾಗಿ ಬಾರದಿದ್ದರೆ ಒಂದು ಕಪ್ ಒತ್ತಿ ಹಿಡಿದು ಅದನ್ನು ರೌಂಡ್ ಶೇಪ್ಗೆ ತನ್ನಿ.
* ಈಗ ನೀವು ಸ್ವಲ್ಪ ಫ್ರೈ ತೆಗೆದು ಲಟ್ಟಿಸಿದ ಹಿಟ್ಟಿನಲ್ಲಿ ಹಾಕಿ ಅದನ್ನು ಸ್ಟೈಲ್ ಆಗಿ ಮಡಚಿ. (ಮಡಚಿವಾಗ ಅದರ ತುದಿ ನಿಧಾನಕ್ಕೆ ಮಡಚಿ, ಮೊಮೊಸ್ ಆಕಾರಕ್ಕೆ ತರಬಹುದು, ಇಲ್ಲ ಎಲ್ಲಾ ಜೊತೆ ಸೇರಿಸಿ ತುದಿಯಲ್ಲಿ ಮೆಲ್ಲನೆ ತಿರುಗಿಸಿದರು ಆಕರ್ಷಕ ಆಕಾರ ಸಿಗುವುದು).
* ನಂತರ ನೀವು ಮೊಮೊಸ್ ಅನ್ನು ಹಬೆಯಲ್ಲಿ 15 ನಿಮಿಷ ಬೇಯಿಸಿ.
* ಈಗ ರೆಡಿಯಾದ ಮೊಮೊಸ್ ಅನ್ನು ಕೆಂಪು ಚಟ್ನಿ ಜೊತೆ ಸವಿಯಿರಿ.
- ಮೊಮೊಸ್ಗೆ ಚಟ್ನಿ ಹೀಗೆ ಮಾಡಿ ಒಂದು ಕಪ್ ನೀರನ್ನು ಕುದಿಸಿ, ನೀರು ಕುದಿ ಬರುವಾಗ 2 ಟೊಮೆಟೊ, 2 ಕೆಂಪು ಮೆಣಸು ಹಾಕಿ (ಒಣ ಮೆಣಸು ಕೂಡ ಹಾಕಬಹುದು) ಬೇಯಿಸಿ. * ಟೊಮೆಟೊ ಬೆಂದ ಮೇಲೆ ಅದರ ನೀರು ಸೋಸಿ, ಟೊಮೆಟೊ ಕತ್ತರಿಸಿ, ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ, ಕಾಳು ಮೆಣಸು,1 ಚಮಚ ಸಕ್ಕರೆ ರುಚಿಗೆ ತಕ್ಕ ಉಪ್ಪು ಹಾಕಿ ನೀರು ಹಾಕದೇ ಗ್ರೈಂಡ್ ಮಾಡಿದರೆ ಮೊಮೊಸ್ ಚಟ್ನಿ ರೆಡಿ.
- ಸರ್ವ್ - 1
- ಕ್ಯಾಲೋರಿ - 58ಕ್ಯಾ
- ಕೊಬ್ಬು - 3ಗ್ರಾಂ
- ಪ್ರೊಟೀನ್ - 3 ಗ್ರಾಂ
- ಕಾರ್ಬ್ಸ್ - 5.29ಗ್ರಾಂ



Click it and Unblock the Notifications