Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಉತ್ತಮ ಕಾಂಬಿನೇಶನ್‌ನ ನವರತ್ನ ಕೂರ್ಮಾ ರೆಸಿಪಿ
ಹೆಚ್ಚಿನ ಸಸ್ಯಾಹಾರಿಗಳಿಗೆ ಪನೀರ್ ಅಚ್ಚುಮೆಚ್ಚು. ಪರ್ಟಿಗಳಲ್ಲಂತೂ ಪನ್ನೀರ್ ಖಾದ್ಯ ಇಲ್ಲದೇ ರಂಗೇರದು ಎಂಬಂತೆ ಜನರು ಇದಕ್ಕೆ ಫಿದಾ ಆಗಿದ್ದಾರೆ. ಆದ್ದರಿಂದ ನಿಮಗಾಗಿ ಇಂದು ರುಚಿಕರವಾದ ಪನೀರ್ ರೆಸಿಪಿಯನ್ನು ನಿಮಗಾಗಿ ಸಿದ್ಧಪಡಿಸುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗುಜರಾತಿ ಶೈಲಿಯಲ್ಲಿ ಮೊಸರು ಗ್ರೇವಿ
ಪನೀರ್ ಮಾತ್ರವಲ್ಲದೆ ಕ್ಯಾರೇಟ್, ಬೀನ್ಸ್, ಕಾಲಿಫ್ಲವರ್ ಹಾಗೂ ಆಲೂಗಡ್ಡೆಗಳಿಂದ ಸಮೃದ್ಧವಾಗಿರುವ ಈ ಕೂರ್ಮಾ ಒಂಭತ್ತು ರತ್ನಗಳೆಂಬ ಹೆಸರಿನಿಂದ ಚಾಲ್ತಿಯಲ್ಲಿದೆ. ಇಲ್ಲಿ ಒಂಭತ್ತಯ ರತ್ನಗಳೆಂದರೆ ಕರಿಯಲ್ಲಿ ಬಳಸುವ ಒಂಭತ್ತು ತರಕಾರಿಗಳು.

ಇವುಗಳನ್ನು ಬಳಸಿಕೊಂಡು ಈ ಆರೋಗ್ಯಪೂರ್ಣ ಕೂರ್ಮಾವನ್ನು ತಯಾರಿಸಲಾಗುತ್ತದೆ. ನಂತರ ಡ್ರೈ ಫ್ರುಟ್ಸ್‌ಗಳಾದ ಗೇರುಬೀಜ ಹಾಗೂ ದ್ರಾಕ್ಷಿಯ ರುಚಿ ಕೂರ್ಮಾವನ್ನು ಮತ್ತಷ್ಟು ಪರ್ಫೆಕ್ಟ್ ಆಗಿಸುತ್ತದೆ.
ಬನ್ನಿ ಈ ಡಿಲೀಶಿಯಸ್ ಪನ್ನೀರ್ ನವರತ್ನ ಕೂರ್ಮಾ ರೆಸಿಪಿಯನ್ನು ನೀವೂ ಸಿದ್ಧಪಡಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಾಜ್ಮಾ ರಸ್ಮಿಸಾ ಗ್ರೇವಿಯ ರೆಸಿಪಿ
ಪ್ರಮಾಣ: 4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ತಗಲುವ ಸಮಯ: 20 ನಿಮಿಷಗಳು
ಸಾಮಾಗ್ರಿಗಳು:
.ಕಾಲಿಫ್ಲವರ್ - (ಸಣ್ಣದು, ಬೇರ್ಪಡಿಸಿರುವುದು)
.ಕ್ಯಾಫ್ಸಿಕಂ - 1 (ಮಧ್ಯಮ ಗಾತ್ರದ್ದು, ಕತ್ತರಿಸಿದ್ದು)
.ಫ್ರೆಂಚ್ ಬೀನ್ಸ್ - 8 - 10 (ತುಂಡರಿಸಿದ್ದು)
.ಕ್ಯಾರೇಟ್ - 2 (ತುಂಡರಿಸಿದ್ದು)
.ಬಟಾಣಿ - 1/2 ಕಪ್
.ಆಲೂಗಡ್ಡೆ - 2 (ಮಧ್ಯಮ ಗಾತ್ರದ್ದು, ಕತ್ತರಿಸಿದ್ದು)
.ಕೋರ್ನ್ - 1/2 ಕಪ್
.ಪನೀರ್ - 250 ಗ್ರಾಂ - (ತೆಳುವಾಗಿ ತುಂಡರಿಸಿದ್ದು)
.ಮಶ್ರೂಮ್ಸ್ - 8-10 (ತುಂಡರಿಸಿದ್ದು)
.ಗೇರುಬೀಜ - 1/2ಕಪ್
.ಈರುಳ್ಳಿ ಪೇಸ್ಟ್ - 2 ಸ್ಪೂನ್
.ಶುಂಠಿ - 1 ಮಧ್ಯಮ ಗಾತ್ರದ್ದು (ಹೆಚ್ಚಿದ್ದು)
.ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
.ಮೊಸರು - 1/2 ಕಪ್
.ಕಾಳುಮೆಣಸಿನ ಹುಡಿ - 1ಸ್ಪೂನ್
.ಗರಂ ಮಸಾಲಾ ಪೌಡರ್ - 1ಸ್ಪೂನ್
.ದಾಲ್ಚೀನಿ - 1
.ಹಸಿರು ಏಲಕ್ಕಿ - 4
.ಲವಂಗ - 5
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 2ಸ್ಪೂನ್
.ನೀರು - 31/2 ಕಪ್
.ತಾಜಾ ಕ್ರೀಂ - 1ಸ್ಪೂನ್ (ಅಲಂಕಾರಕ್ಕಾಗಿ)
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅನ್ನದ ಜೊತೆ ತಿನ್ನಲು ಮೊಟ್ಟೆ ಸಾರು
ಮಾಡುವ ವಿಧಾನ:
1.ಗೇರುಬೀಜವನ್ನು ತುಸು ಬೆಚ್ಚಗಿನ ನೀರಿನಲ್ಲಿ 10 ನಿಮಿಷ ನೆನೆಸಿಡಿ.
2.ನಂತರ ಅದನ್ನು ಮಿಕ್ಸರ್‌ನಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಂಡು ಪಕ್ಕಕ್ಕಿರಿಸಿ.
3.ಮಧ್ಯಮ ಉರಿಯಲ್ಲಿ ಎಲ್ಲಾ ತರಕಾರಿಗಳು ಹಾಗೂ ಕೋರ್ನ್ ಅನ್ನು 3 ಕಪ್ ನೀರಿನಲ್ಲಿ 10 ನಿಮಿಷಗಳ ಕಾಲ ಬೇಯಿಸಿ.
4.ಪೂರ್ತಿ ಆದ ನಂತರ, ಬಿಸಿ ನೀರನ್ನು ಬಸಿಯಿರಿ ಹಾಗೂ ಬೆಂದ ತರಕಾರಿಗಳ ಮೇಲೆ ತಣ್ಣೀರನ್ನು ಹುಯ್ಯಿರಿ.
5.ತರಕಾರಿಗಳಿಂದ ನೀರನ್ನು ಬಸಿದು ಪಕ್ಕದಲ್ಲಿಡಿ.
6.ಪ್ಯಾನ್‌ನಲ್ಲಿ ಎಣ್ಣೆಯಿಟ್ಟು ಕಾಯುತ್ತಿದ್ದಂತೆ ದಾಲ್ಚೀನಿ, ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ. ಸ್ವಲ್ಪ ಸಮಯ ಹುರಿಯಿರಿ.
7.ಪ್ಯಾನ್‌ಗೆ ಈರುಳ್ಳಿ ಪೇಸ್ಟ್ ಅನ್ನು ಹಾಕಿ ಮತ್ತು ಮಧ್ಯಮ ಉರಿಯಲ್ಲಿ 4-5 ನಿಮಿಷಗಳ ಕಾಲ ಬೇಯಿಸಿ.
8.ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪೌಡರ್, ಮೊಸರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
9.ಸೌಟಿನಲ್ಲಿ ಮಿಶ್ರಣವನ್ನು ಚೆನ್ನಾಗಿ ಕಲಸುತ್ತಿರಿ ಇದರಿಂದ ಗಂಟುಗಳುಂಟಾಗುವುದಿಲ್ಲ.
10.ಗೇರುಬೀಜ ಪೇಸ್ಟ್ ಅನ್ನು ಹಾಕಿ ಮತ್ತು 2-3 ನಿಮಿಷ ಹುರಿಯಿರಿ.
11.ಇದೀಗ ಬೇಯಿಸಿದ ತರಕಾರಿಗಳು, ಮಶ್ರೂಮ್, ಉಪ್ಪು ಸೇರಿಸಿ 3-4 ನಿಮಿಷಗಳ ಕಾಲ ಬೇಯಿಸಿ.
12.ಅರ್ಧ ಕಪ್‌ನಷ್ಟು ನೀರು ಹಾಕಿ ಚೆನ್ನಾಗಿ ಕಲಿಸಿ.
13.ಇದೀಗ ಕೊನೆಗೆ ಪನೀರ್ ತುಂಡುಗಳನ್ನು, ಗರಂ ಮಸಾಲಾ ಹಾಕಿ ಮುಚ್ಚಿ ಮತ್ತು 4-5 ನಿಮಿಷಗಳ ಕಾಲ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ.
14.ಒಮ್ಮೆ ಆದ ನಂತರ ಫ್ಲೇಮ್ ನಿಲ್ಲಿಸಿ ಹಾಗೂ ಕ್ರೀಂ ನೊಂದಿಗೆ ಅಲಂಕರಿಸಿ.
ರುಚಿಕರವಾದ ಪನೀರ್ ನವರತ್ನ ಕೂರ್ಮಾ ಬಡಿಸಲು ತಯಾರಾಗಿದೆ. ರೋಟಿ ಅಥವಾ ಪರೋಟಾದೊಂದಿಗೆ ನೀರೂರಿಸುವ ಕೂರ್ಮಾವನ್ನು ಸವಿಯಿರಿ.



Click it and Unblock the Notifications