Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಪುಷ್ಪಿತಾ-ಬಾಳೆ ಹೂವಿನ ಖಾದ್ಯ
ಬಾಳೆಹೂವಿನಲ್ಲಿರುವ ಆರೋಗ್ಯಕರ ಗುಣದ ಬಗ್ಗೆ ನೀವು ತಿಳಿದಿರಬಹುದು. ಇದು ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ, ಪೈಲ್ಸ್, ಮಲಬದ್ಧತೆ, ಮಧುಮೇಹಿಗಳಿಗೆ ಬೆಸ್ಟ್ ಆಹಾರ ಇದಾಗಿದೆ. ಇಲ್ಲಿ ನಾವು ಬಾಳೆಹೂವಿನಿಂದ ತಯಾರಿಸುವ ಪುಷ್ಪಿತಾ ಖಾದ್ಯದ ರೆಸಿಪಿ ನೀಡಿದ್ದೇನೆ.
ಬಾಳೆಯಲ್ಲಿ ಊಟ ಬಡಿಸುವುದು ನಮ್ಮ ಸಂಪ್ರದಾಯ. ಇಲ್ಲಿ ನಾವು ಬಾಳೆಹೂ ಮತ್ತು ಬಾಳೆ ಎಲೆ ಎರಡು ಬಳಸಿ ಮಾಡುವ ಆರೋಗ್ಯಕರವಾದ ಹಾಗೂ ರುಚಿಕರವಾದ ಖಾದ್ಯದ ರೆಸಿಪಿ ನೀಡಿದ್ದೇನೆ ನೋಡಿ:
ಬೇಕಾಗುವ ಸಾಮಾಗ್ರಿಗಳು
ಬಾಳೆ ಹೂ 2
ಬೆಳ್ಳುಳ್ಳಿ 4-6 ಚಮಚ(ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸಿನ ಕಾಯಿ 2-3
ಒಣ ಮೆಣಸು 4
ಜೀರಿಗೆ 2 ಚಮಚ
ಕೊತ್ತಂಬರಿ ಬೀಜ 1 ಚಮಚ
ಸೋಂಪು ಅರ್ಧ ಚಮಚ
ಮೆಂತೆ 1/4 ಚಮಚ
ಚಕ್ಕೆ 1
ಅರಿಶಿಣ ಪುಡಿ 1 ಚಮಚ
ಕಲ್ಲುಪ್ಪು
ಬೆಲ್ಲದ ತುರಿ ಅರ್ಧ ಚಮಚ
ತುಪ್ಪ ಅಥವಾ ಬೆಣ್ಣೆ(2 ಚಮಚ)
ನಿಂಬೆ ರಸ

ಮಾಡುವ ವಿಧಾನ
* ಬಾಳೆಹೂವನ್ನು ಸ್ವಚ್ಛ ಮಾಡಿ. ಅಂದವಾದ ಕೆಂಪು ಪದರಗಳನ್ನು ತೆಗೆದು ಹಾಕಿ. ಹೂವಿನಲ್ಲಿರುವ ಕಪ್ಪು-ಕಪ್ಪಾಗಿರುವ ವಸ್ತುಗಳನ್ನು ತೆಗೆದು ಹಾಕಿ.
* ಹೂವಿನ ಪ್ರತಿಯೊಂದು ಎಸಳನ್ನು ಶುದ್ಧ ಮಾಡಿ.
* ನಂತರ ಚಿಕ್ಕದಾಗಿ ಕತ್ತರಿಸಿ.

ಮಾಡುವ ವಿಧಾನ
* ಕತ್ತರಿಸಿದ ಬಾಳೆ ಹೂವನ್ನು ತಕ್ಷಣವೇ ಬಿಸಿ ನೀರಿಗೆ ಹಾಕಿ, ನಂತರ ಅರಿಶಿಣ ಪುಡಿ, ಕಲ್ಲುಪ್ಪು ಮತ್ತು ನಿಂಬೆ ರಸ ಹಾಕಿ 3-4 ಗಂಟೆಗಳ ಕಾಲ ಇಡಿ.
* ನಂತರ ನೀರನ್ನು ಬಸಿದು, ಬಿಸಿ ನೀರನ್ನು ಹಾಕಿ ಸಾಧರಣ ಉರಿಯಲ್ಲಿ 10 ನಿಮಿಷ ಬೇಯಿಸಿ. ಹೂ ಮೃದುವಾಗುವವರೆಗೆ ಬೇಯಿಸಿ. ನಂತರ ನೀರನ್ನು ಬಸಿದು ಹೂವನ್ನು ತಣ್ಣೀರಿನಲ್ಲಿ ಹಾಕಿಡಿ.
* ನಂತರ ಹೂವಿನಿಂದ ನೀರನ್ನು ಹಿಂಡಿ, ಇದರಿಂದ ಹೂವಿನಲ್ಲಿರುವ ಕಹಿಯನ್ನು ಹೋಗಲಾಡಿಸಬಹುದು.

ಮಾಡುವ ವಿಧಾನ
* ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಪೇಸ್ಟ್ ಮಾಡಿ.
* ಮಸಾಲೆ ಸಾಮಾಗ್ರಿಗಳನ್ನು ಹುರಿದು ಪುಡಿ(ಕಲ್ಲಿನಲ್ಲಿ ಪುಡಿ ಮಾಡಿದರೆ ಒಳ್ಳೆಯದು).

ಮಾಡುವ ವಿಧಾನ
* ಪ್ರೆಶರ್ ಕುಕ್ಕರ್ ನಲ್ಲಿ 1 ಚಮಚ ತುಪ್ಪ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.
* ಈಗ ಇಂಗನ್ನು ಹಾಕಿ, ನಂತರ ಹಸಿ ಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್ ಹಾಕಿ.
* ಅರಿಶಿಣ ಪುಡಿ ಹಾಕಿ , ನಂತರ ಕತ್ತರಿಸಿದ ಬಾಳೆ ಹೂವನ್ನು ಹಾಕಿ, ನಂತರ ಸಂಬಾರ ಪದಾರ್ಥಗಳನ್ನು ಸೇರಿಸಿ.

ಮಾಡುವ ವಿಧಾನ
* ಈಗ ಅರ್ಧ ಚಮಚ ಬೆಲ್ಲ ಹಾಕಿ, ಸಿಹಿ ಇಷ್ಟ ಪಡುವವರಾದರೆ 1 ಚಮಚ ಬೆಲ್ಲ ಬೇಕಾದರೂ ಹಾಕಬಹುದು.
* ನಂತರ ಸೌಟ್ ನಿಂದ ಆಡಿಸಿ, ಬಿಸಿ ನೀರು ಹಾಕಿ ಮಿಕ್ಸ್ ಮಾಡಿ ಪ್ರೆಶರ್ ಕುಕ್ಕರ್ ನಲ್ಲಿ ಸಾಧಾರಣ ಉರಿಯಲ್ಲಿ 2 ವಿಶಲ್ ಬರುವವರೆಗೆ ಬೇಯಿಸಿ.

ಮಾಡುವ ವಿಧಾನ
* ನಂತರ ಪ್ರೆಶರ್ ಕುಕ್ಕರ್ ನಿಂದ ಇಳಿಸಿ, ಅದರ ಆವಿ ಹೋದ ಮೇಲೆ ಮುಚ್ಚಳ ಓಪನ್ ಮಾಡಿ, 1/4 ಚಮಚ ರೋಸ್ಟ್ ಮಾಡಿದ ಮಸಾಲೆ ಹಾಕಿ, ಅರ್ಧ ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಿ ಎಲ್ಲಾ ಸರಿಯಾಗಿ ಇದೆಯೇ ಎಂದು ಟೇಸ್ಟ್ ಮಾಡಿ, ಏನಾದರೂ ಕಮ್ಮಿಯಾಗಿದ್ದರೆ ಅದನ್ನು ಸೇರಿಸಿ.

ಮಾಡುವ ವಿಧಾನ
* ನಂತರ ಈ ಮಿಶ್ರಣವನ್ನು ಬಾಳೆ ಎಲೆಯಲ್ಲಿ ಹಾಕಿ ಕಟ್ಟಿ.
* ನಾನ್ ಸ್ಟಿಕ್ ಪ್ಯಾನ್ ಗೆ ತುಪ್ಪ ಸವರಿ ಅದರಲ್ಲಿ ಈ ಬಾಳೆ ಎಲೆಯಿಂದ ಕಟ್ಟಿದ ಮಿಶ್ರಣವನ್ನು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ನಂತರ ಪಾತ್ರೆಯ ಮುಚ್ಚಳ ತೆಗೆದು ಮತ್ತೆ ಮತ್ತೊಮ್ಮೆ ಅದನ್ನು ಮೆಲ್ಲನೆ ಆಡಿಸಿ, ಮತ್ತೆ 5 ನಿಮಿಷ ಬೇಯಿಸಿ.

ಮಾಡುವ ವಿಧಾನ
* ನಂತರ ಬಾಳೆ ಎಲೆಗೆ ಕಟ್ಟಿದ ದಾರವನ್ನು ಬಿಚ್ಚಿ, ಅದರ ಬಿಸಿ ಸ್ವಲ್ಪ ಆರಿದ ಮೇಲೆ ರುಚಿ ಮಾಡಿ.
* ಇಷ್ಟು ಮಾಡಿದರೆ ಸವಿರುಚಿಯ ಪುಷ್ಪಿತಾ ರೆಡಿ.
ಇದನ್ನು ಅನ್ನ, ಚಪಾತಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ.
*ತುಪ್ಪದ ಬದಲು ಆಲೀವ್ ಎಣ್ಣೆಯನ್ನು ಬಳಸಬಹುದು.



Click it and Unblock the Notifications