Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರಂಜಾನ್ ಸ್ಪೆಷಲ್: ನಿಮಿಷಾರ್ಧದಲ್ಲಿ ರುಚಿಕಟ್ಟಾದ ಸಲಾಡ್...
ರಂಜಾನ್ ತಿಂಗಳು ನಡೆಯುತ್ತಿದೆ. ರಂಜಾನ್ ಉಪವಾಸ ಮಾಡುತ್ತಿದ್ದಾಗ ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಈಗ ದಿನಕ್ಕೆ ಎರಡೇ ಹೊತ್ತು ಊಟ ಮಾಡುವ ವ್ರತವಿರುವುದರಿಂದಾಗಿ, ಆರೋಗ್ಯಕರವಾದ ಆಹಾರವನ್ನೆ ಸೇವಿಸುವುದು ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಈ ಸಮಯದಲ್ಲಿ ಮಾಂಸಾಹಾರಿ ತಿಂಡಿಗಳನ್ನೆ ತಯಾರಿಸಲಾಗುತ್ತದೆ. ಹಾಗಾಗಿ ಆರೋಗ್ಯದ ಕುರಿತಾಗಿ ಕಾಳಜಿ ಹೆಚ್ಚು ವಹಿಸಬೇಕಾಗುತ್ತದೆ.
ರಂಜಾನ್‌ಗಾಗಿಯೇ ಒಂದು ವಿಶೇಷವಾದ ಸಲಾಡ್ ಇದೆ. ಅದು ನಿಮ್ಮನ್ನು ಆರೋಗ್ಯಕರವಾಗಿಯೂ ಮತ್ತು ಸದೃಢವಾಗಿಯೂ ಇರಿಸುತ್ತದೆ. ಯಾವುದು ಅದು ಎಂದಿರಾ, ಅದೇ ರಂಜಾನ್ ವಿಶೇಷ ಸಲಾಡ್! ಆ ಸಲಾಡ್ ಅನ್ನು ನಿಮಿಷಗಳಲ್ಲಿ ತಯಾರಿಸಬಹುದು ಮತ್ತು ಮುಖ್ಯವಾಗಿ ಇದು ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ಸಲಾಡ್ ಅನ್ನು ಏಕೆ ಸೇವಿಸಬೇಕು ಎಂದರೆ, ಅದರಿಂದ ನಿಮಗೆ ಉತ್ತಮ ಪೋಷಕಾಂಶಗಳು ಮತ್ತು ಆರೋಗ್ಯ ಎರಡೂ ದೊರೆಯುತ್ತದೆ. ಬನ್ನಿ ಇದನ್ನು ತಯಾರಿಸುವ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ. ಸರಳ ಮತ್ತು ಆರೋಗ್ಯಪೂರ್ಣ ಸಲಾಡ್ ರೆಸಿಪಿ
*ಪ್ರಮಾಣ: 4 ಜನರಿಗೆ ಬಡಿಸಬಹುದು
*ತಯಾರಿಸಲು ಬೇಕಾದ ಸಮಯ - 15 ನಿಮಿಷಗಳು
*ಅಡುಗೆ ಮಾಡಲು ಬೇಕಾದ ಸಮಯ - 10 ನಿಮಿಷಗಳು

ಅಗತ್ಯ ಪದಾರ್ಥಗಳು
*ಕ್ಯಾರೆಟ್ - 1/2 ಕಪ್
*ಈರುಳ್ಳಿ ಹೂವು- 1/2 ಕಪ್
*ಟೊಮೆಟೊಗಳು - 1/2 ಕಪ್
*ಸೌತೆಕಾಯಿ - 1/2 ಕಪ್
*ಸ್ವೀಟ್ ಕಾರ್ನ್- 1/2 ಕಪ್
*ಕಿತ್ತಳೆ - 1/2 ಕಪ್
*ಕಲ್ಲಂಗಡಿ - 1/2 ಕಪ್
*ದ್ರಾಕ್ಷಿ - 1/2 ಕಪ್
*ಮಾವಿನ ಹಣ್ಣು - 1/2 ಕಪ್
*ಮೆಣಸು - 1/2 ಟೀಸ್ಪೂನ್
*ಲಿಂಬೆ ರಸ - 1 ಟೀಸ್ಪೂನ್
*ಜೇನು ತುಪ್ಪ - 1/2 ಟೀಸ್ಪೂನ್
*ಉಪ್ಪು ಟೊಮೆಟೋ ಸೌತೆಕಾಯಿ ಸಲಾಡ್
ವಿಧಾನ:
*ಒಂದು ಬಟ್ಟಲು, ಸೌತೆಕಾಯಿ, ಕ್ಯಾರೆಟ್, ಈರುಳ್ಳಿ ಹೂವು, ಸ್ವೀಟ್ ಕಾರ್ನ್ ಮತ್ತು ಸ್ವಲ್ಪ ಮೆಣಸನ್ನು ತೆಗೆದುಕೊಳ್ಳಿ.
ಇದನ್ನು ಚೆನ್ನಾಗಿ ಬೆರೆಸಿಕೊಳ್ಳಿ,
*ತದನಂತರ ಇದಕ್ಕೆ ಉಪ್ಪು ಮತ್ತು ಮೆಣಸಿನ ಜೊತೆಗೆ ಉಳಿದ ಹಣ್ಣುಗಳನ್ನು ಬೆರೆಸಿ.ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.
*ಇನ್ನು ಲಿಂಬೆ ರಸ ಮತ್ತು ಹಣ್ಣುಗಳನ್ನು ತರಕಾರಿಗಳ ಜೊತೆಗೆ ಬೆರೆಸಿ.
*ಇದರ ಮೇಲೆ ಸ್ವಲ್ಪ ಜೇನು ತುಪ್ಪ ಹಾಕಿ ತಿನ್ನಲು ನೀಡಿ.



Click it and Unblock the Notifications
