Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪಾಲಕ್ ವಡಾ
ನಿಮಗೆ ಗರಿಗರಿಯಾದ ವಡಾ ಬೇಕೆನಿಸಿದರೆ, ಸ್ಲೈಸ್ಗಳನ್ನು ಬಂಗಾರದ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿದುಕೊಳ್ಳಿ. ಮನೆ ಮಂದಿಗೆಲ್ಲ ಹೊಸ ರುಚಿ ನೀಡುವುದರಲ್ಲಿ ಸಂಶಯವೇ ಇಲ್ಲ.
- ಊರ್ಮಿಳಾ
ಬೇಕಾಗುವ ಸಾಮಗ್ರಿಗಳು :
4 ಕಪ್ ಪಾಲಕ್ ಸೊಪ್ಪು
4 ಟೇಬಲ್ ಸ್ಪೂನ್ ಗೋಧಿ ಹಿಟ್ಟು
2 ಟೇಬಲ್ ಸ್ಪೂನ್ ಕಡಲೇಬೇಳೆ ಹಿಟ್ಟು
2 ಟೇಬಲ್ ಸ್ಪೂನ್ ರವೆ
2 ಟೀ ಸ್ಪೂನ್ ಕತ್ತರಿಸಿದ ಶುಂಠಿ
2 ಟೀ ಸ್ಪೂನ್ ಕತ್ತರಿಸಿದ ಬೆಳ್ಳುಳ್ಳಿ
1 ಟೇಬಲ್ ಸ್ಪೂನ್ ಜೀರಿಗೆ
4 ಕತ್ತರಿಸಿದ ಹಸಿಮೆಣಸಿನಕಾಯಿ
2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
1 ಟೇಬಲ್ ಸ್ಪೂನ್ ನಿಂಬೆಹಣ್ಣಿನ ರಸ
1 ಟೇಬಲ್ ಸ್ಪೂನ್ ತಾಜಾ ಕೆನೆ
2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಅರ್ಧ ಟೀ ಸ್ಪೂನ್ ಅಡುಗೆ ಸೋಡಾ
ಅರ್ಧ ಟೀ ಸ್ಪೂನ್ ಅರಿಶಿನಪುಡಿ
ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೆಣಸು
ಮಾಡುವ ವಿಧಾನ :
ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ನೀರು ಬೆರಸಿಕೊಂಡು ಹದವಾಗಿ ನಾದಿಕೊಳ್ಳಿ. ಆನಂತರ ನಾದಿಕೊಂಡ ಹಿಟ್ಟನ್ನು ತೆಳ್ಳಗೆ ಉದ್ದನೆಯ ರೋಲ್ ಮಾಡಿಕೊಳ್ಳಿ. ರೋಲ್ಗಳನ್ನು 20 ನಿಮಿಷಗಳ ಕಾಲ ಹಬೆ(ಸ್ಟೀಮ್)ಯಲ್ಲಿ ಬೇಯಿಸಿಕೊಳ್ಳಿ. ತಣ್ಣಗಾದನಂತರ ಬ್ರೆಡ್ನಂತೆ ತುಂಡು(ಸ್ಲೈಸ್)ಗಳಾಗಿ ಕತ್ತರಿಸಿಕೊಳ್ಳಿ. ಈಗ ತಿನ್ನಲು ರೆಡಿ.
ಇನ್ನು ನಿಮಗೆ ಗರಿಗರಿಯಾದ ವಡಾ ಬೇಕೆನಿಸಿದರೆ, ಸ್ಲೈಸ್ಗಳನ್ನು ಬಂಗಾರದ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿದುಕೊಳ್ಳಿ. ಮನೆ ಮಂದಿಗೆಲ್ಲ ಹೊಸ ರುಚಿ ನೀಡುವುದರಲ್ಲಿ ಸಂಶಯವೇ ಇಲ್ಲ.



Click it and Unblock the Notifications
