Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಥಟ್ ಅಂತ ರೆಡಿಯಾಗುತ್ತೆ ಬದನೆಕಾಯಿ ಕರಿ

ಟೇಸ್ಟಲ್ಲಿ ಸಾಟಿಯಿಲ್ಲದ ಈ ಬದನೆಕಾಯಿ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
ಬದನೆಕಾಯಿ ಕರಿಗೆ ಏನೇನು ಬೇಕು?: 1 ದುಂಡು ಬದನೆಕಾಯಿ, 1 ಈರುಳ್ಳಿ, 1 ಟೊಮೆಟೊ, ಚೂರು ಶುಂಠಿ, 4 ಮೆಣಸಿನಕಾಯಿ, 1 ಚಮಚ ಜೀರಿಗೆ, 1 ಚಮಚ ಜೀರಿಗೆ ಪುಡಿ, 1 ಚಮಚ ಧನಿಯಾ ಪುಡಿ, 1 ಚಮಚ ಕೆಂಪು ಮೆಣಸಿನಕಾಯಿ ಪುಡಿ, ಸ್ವಲ್ಪ ಇಂಗು, ಕೊತ್ತಂಬರಿ, ಪಲಾವ್ ಎಲೆ 1, ಎಣ್ಣೆ, ಉಪ್ಪು.
ಬದನೆಕಾಯಿ ಕರಿ ಮಾಡುವುದು ಹೇಗೆ?
* ಮೊದಲು ಬದನೆಕಾಯಿಯನ್ನು ಗ್ಯಾಸ್ ಉರಿಯಲ್ಲಿ ಎಲ್ಲ ಬದಿಯಲ್ಲೂ ಚೆನ್ನಾಗಿ ಸುಟ್ಟುಕೊಳ್ಳಬೇಕು (ಸ್ಟೀಲ್ ಕಡ್ಡಿಯನ್ನು ಚುಚ್ಚಿ ಸುಟ್ಟುಕೊಳ್ಳಬಹುದು)
* ಬದನೆಕಾಯಿ ಕಪ್ಪಗಾದಂತೆ ಕಂಡಾಗ ಒಲೆಯಿಂದ ತೆಗೆದು ತಣ್ಣಗಾಗಲು ಬಿಡಬೇಕು. ಅದು ತಣ್ಣಗಾದ ನಂತರ ಚೆನ್ನಾಗಿ ಹಿಸುಕಿ ಒಂದೆಡೆ ಇಟ್ಟುಕೊಳ್ಳಬೇಕು.
* ಈಗ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಪಲಾವ್ ಎಲೆ ಮತ್ತು ಇಂಗನ್ನು ಹುರಿದುಕೊಳ್ಳಬೇಕು. ನಂತರ ಈರುಳ್ಳಿ ಹಾಕಿ ಕೆಂಪಗಾಗುವ ತನಕ ಹುರಿಯಬೇಕು.
* ಈ ಮಿಶ್ರಣಕ್ಕೆ ಶುಂಠಿ, ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ತಿರುಗಿಸಿ ಟೊಮೆಟೊ ಬೆರೆಸಿ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. 2 ನಿಮಿಷ ಟೊಮೆಟೊ ಬೇಯಿಸಿದ ನಂತರ ಕಲೆಸಿಟ್ಟಿದ್ದ ಬದನೆಕಾಯಿಯನ್ನು ಇದಕ್ಕೆ ಬೆರೆಸಿ ಜೀರಿಗೆ ಪುಡಿ, ಧನಿಯಾ ಪುಡಿ, ಕೆಂಪುಮೆಣಸಿನ ಪುಡಿ ಬೆರೆಸಿ ಚೆನ್ನಾಗಿ ತಿರುಗಿಸಬೇಕು.
* ಈ ಮಿಶ್ರಣ ಸುಮಾರು 7 ನಿಮಿಷ ಚೆನ್ನಾಗಿ ಬೆಂದ ನಂತರ ಕೆಳಗಿಳಿಸಿ ಕತ್ತರಿಸಿದ್ದ ಕೊತ್ತಂಬರಿ ಹಾಕಬೇಕು. ಆದರೆ ಇದು ತಳ ಹಿಡಿಯದಂತೆ ಎಚ್ಚರಿಕೆವಹಿಸಬೇಕು. ಈಗ ಬದನೆಕಾಯಿ ಕರಿ ತಿನ್ನಲು ರೆಡಿ.



Click it and Unblock the Notifications
