Latest Updates
-
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಚಳಿಗಾಲದಲ್ಲಿ ಘಂ ಎನ್ನುವ ದಮ್ ಆಲೂ ಇರಲಿ

ದಮ್ ಆಲೂಗೆ ಏನೇನು ಬೇಕು?: 10-15 ಸಣ್ಣ ಆಲೂಗಡ್ಡೆಗಳು, 2 ಈರುಳ್ಳಿ (1 ಕತ್ತರಿಸಿರಬೇಕು, ಮತ್ತೊಂದು ಪೇಸ್ಟ್ ಗೆ), 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಟೊಮೆಟೊ, 1 ಚಮಚ ಜೀರಿಗೆ, ಸ್ವಲ್ಪ ಅರಿಶಿಣ, 1 ಚಮಚ ಕೆಂಪುಮೆಣಸಿನ ಪುಡಿ, 1 ಚಮಚ ಜೀರಿಗೆ ಪುಡಿ, 1 ಚಮಚ ಧನ್ಯಾ ಪುಡಿ, 4 ಹಸಿರು ಮೆಣಸಿನಕಾಯಿ, 2 ಪಲಾವ್ ಎಲೆ, ಗರಂ ಮಸಾಲ, 1 ಚಮಚ ತುಪ್ಪ, ಎಣ್ಣೆ, ಉಪ್ಪು, ಕೊತ್ತಂಬರಿ
ದಮ್ ಆಲೂ ಮಾಡುವುದು ಹೇಗೆ?
* ಕುಕ್ಕರಿನಲ್ಲಿ ಆಲೂಗಡ್ಡೆ ಹಾಕಿ 2 ವಿಸಲ್ ಕೂಗಿಸಬೇಕು ಅಥವಾ ಪಾತ್ರೆಯಲ್ಲಿ 10 ನಿಮಿಷ ಬೇಯಿಸಿದರೂ ಆಯಿತು.
* ಒಂದು ಬಟ್ಟಲಿನಲ್ಲಿ ಗರಂ ಮಸಾಲೆಯನ್ನು ಸ್ವಲ್ಪ ನೀರಿನೊಂದಿಗೆ ಕಲೆಸಿಕೊಳ್ಳಬೇಕು.
* ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಪೇಸ್ಟ್ ಮಾಡಿಕೊಂಡು, ಟೊಮೆಟೊವನ್ನು ಪ್ರತ್ಯೇಕವಾಗಿ ಕಿವುಚಿಟ್ಟಿಕೊಳ್ಳಬೇಕು.
* ಈಗ ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ನಂತರ ಅದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ ಸ್ವಲ್ಪ ಕೆಂಪಗಾಗುವ ತನಕ ಹುರಿದುಕೊಂಡು ಒಂದೆಡೆ ಇಡಬೇಕು.
* ಅದೇ ಬಾಣಲೆಗೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಪಲಾವ್ ಎಲೆ, ಜೀರಿಗೆ ಹಾಕಿ, ಕತ್ತರಿಸಿದ ಈರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಬೇಕು ನಂತರ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟನ್ನು ಸೇರಿಸಿ 2 ನಿಮಿಷ ತಿರುಗಿಸಿ ಕಿವುಚಿದ ಟೊಮೆಟೊ ಬೆರೆಸಬೇಕು.
* ಇದರ ಮೇಲೆ ಉಪ್ಪನ್ನು ಉದುರಿಸಬೇಕು. ಆಗ ಟೊಮೆಟೊ ಬೇಗ ಬೇಯುತ್ತದೆ.
* ಈಗ ಮೇಲೆ ತಿಳಿಸಿದ ಪುಡಿಗಳನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಈ ಮಿಶ್ರಣ 2 ನಿಮಿಷ ಬೆಂದ ನಂತರ ತುಂಬಾ ಒಣಗಿದಂತೆ ಕಾಣದಿರಲು ಸ್ವಲ್ಪ ನೀರು ಹಾಕಬೇಕು.
* ಆಲೂಗಡ್ಡೆಯನ್ನು ಸ್ವಲ್ಪ ಸೀಳಿ ಅದನ್ನು ಬಾಣಲೆಯಲ್ಲಿ ತಯಾರಿಸಿದ ಗ್ರೇವಿಯೊಂದಿಗೆ ಬೆರೆಸಬೇಕು. ನಂತರ ಉದ್ದವಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ ಬೆರೆಸಿ 3-4 ನಿಮಿಷ ನಿರಂತರವಾಗಿ ಹುರಿಯುತ್ತಿರಬೇಕು.
* 1 1/2 ಕಪ್ ನೀರು ಹಾಕಿ ಮುಚ್ಚುಳವನ್ನು ಮುಚ್ಚಿ ಕಡಿಮೆ ಉರಿಯಲ್ಲಿ 7-8 ನಿಮಿಷ ಬೇಯಿಸಬೇಕು.
* ಒಲೆಯಿಂದ ಕೆಳಗೆ ಇಳಿಸುವ ಮುನ್ನ ತುಪ್ಪ ಹಾಕಿ ನೀರಿನಲ್ಲಿ ಕಲೆಸಿದ್ದ ಗರಂಮಸಾಲವನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
ಕೊನೆಗೆ ಇದರ ಮೇಲೆ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಉದುರಿಸಿದರೆ ರುಚಿರುಚಿಯಾದ ದಮ್ ಆಲೂ ತಿನ್ನಲು ಸಿದ್ಧ.



Click it and Unblock the Notifications
