Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ
Palya
oi-Staff

* ಭಾರತಿ ಎಚ್ಎಸ್, ಬೆಂಗಳೂರು
ಬೇಕಾಗುವ ಪದಾರ್ಥಗಳು
ದಂಟಿನ ಸೊಪ್ಪು ಒಂದು ಬಟ್ಟಲು
ಬೆಳ್ಳುಳ್ಳಿ ಆರು ಎಸಳು (ಬೇಕಾದರೆ)
ಎಣ್ಣೆ ಮೂರು ಚಮಚ
ಸಾಸಿವೆ ಅರ್ಧ ಚಮಚ
ಹಸಿ ಮೆಣಸಿನ ಕಾಯಿ ಮೂರು
ಈರುಳ್ಳಿ ಒಂದು ಹೆಚ್ಚಿದ್ದು
ಕರಿಬೇವು ಸ್ವಲ್ಪ
ಕೊತ್ತಂಬರಿ ಸ್ವಲ್ಪ
ತುರಿದ ತೆಂಗಿನಕಾಯಿ ಅರ್ಧ ಬಟ್ಟಲು
ಸಕ್ಕರೆ ಅರ್ಧ ಚಮಚ
ಮಾಡುವ ವಿಧಾನ
* ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಹುರಿಯಿರಿ.
* ಆಮೇಲೆ ಹೆಚ್ಚಿದ ದಂಟಿನ ಸೊಪ್ಪು, ಸಕ್ಕರೆ ಹಾಕಿ ಹುರಿಯಿರಿ.
* ಸಕ್ಕರೆ ಹಾಕುವುದರಿಂದ ಸೊಪ್ಪಿನ ಬಣ್ಣ ಹಾಳಾಗುವುದಿಲ್ಲ.
* ದಂಟಿನ ಸೊಪ್ಪು ಬೆಂದ ಮೇಲೆ ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಕೈಯಾಡಿಸಿ.
* ಕಾಯಿತುರಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ದಂಟಿನ ಸೊಪ್ಪಿಗೆ ತೊಗರಿ ಬೇಳೆ ಕೂಡ ಹಾಕಿ ಮಾಡಬಹುದು. ಬೇಳೆ ಹಾಕಿದರೆ ಪಲ್ಯ ಗಟ್ಟಿಯಾಗುತ್ತದೆ. ವಿಧಾನ ಕೂಡ ಮೇಲಿನಂತೆಯೇ. ಒಗ್ಗರಣೆಗೆ ಸೊಪ್ಪು ಹಾಕುವ ಮೊದಲು ಕುಕ್ಕರಿನಲ್ಲಿ ಬೇಯಿಸಿದ ಬೇಳೆಯನ್ನು ಹಾಕಿ ನಂತರ ಸೊಪ್ಪು ಹಾಕಬೇಕು.
Comments
Read more about: dantina soppu palya green vegetable bharathi hs bengaluru fibrous food healthy recipe ದಂಟಿನ ಸೊಪ್ಪು ಪಲ್ಯ ಹಸಿರು ತರಕಾರಿ ಭಾರತಿ ಎಚ್ಎಸ್ ಬೆಂಗಳೂರು ನಾರಿನಂಶ ಆರೋಗ್ಯಕರ ತಿನಿಸು
Story first published: Thursday, October 8, 2009, 18:44 [IST]
Other articles published on Oct 8, 2009



Click it and Unblock the Notifications