Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪನ್ನೀರ್ ಬಟಾಣಿ ಕಾಂಬಿನೇಶನ್ ರುಚಿ ವಾವ್!

ಬೇಕಾಗುವ ಸಾಮಾಗ್ರಿಗಳು:
1. ಪನ್ನೀರ್ 500 ಗ್ರಾಂ
2. ಈರುಳ್ಳಿ 1 (ಕತ್ತರಿಸಿದ್ದು)
3.ಕತ್ತರಿಸಿದ ಟೊಮೆಟೋ 2
4.ಶುಂಠಿ ಮತ್ತು ಹಸಿಮೆಣಸಿನ ಪೇಸ್ಟ್
5. ಅರಿಸಿನ, ಕೊತ್ತಂಬರಿ ಹಾಗೂ ಮೆಣಸಿನ ಪುಡಿ
6. ಮೆಂತೆ
7. ಗರಂ ಮಸಾಲ
8. ಜೀರಿಗೆ
9.ಮಲಾಯಿ
ಮಾಡುವ ವಿಧಾನ:
1. ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಪನ್ನೀರ್ ಹಾಕಿ ಹುರಿಯಿರಿ, ಪನ್ನೀರ್ ಹಳದಿ ಬಣ್ಣಕ್ಕೆ ಬರುವಾಗ ಅದನ್ನು ತೆಗೆದು ಪನ್ನೀರ್ ಅನ್ನು ಟಿಶ್ಯು ಪೇಪರ್ ನಲ್ಲಿ ಇಡಿ . ಟಿಶ್ಯು ಅಧಿಕ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
2. ಬಾಣಲೆಗೆ ಎಣ್ಣೆಯನ್ನು 3-4 ಚಮಚ ಹಾಕಿ ಅದು ಬಿಸಿಯಾದಾಗ ಜೀರಿಗೆ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ, ಸ್ವಲ್ಪ ಕ್ಷಣದ ಬಳಿಕ ಶುಂಠಿ ಮತ್ತು ಹಸಿಮೆಣಸಿನ ಪೇಸ್ಟ್ ಹಾಕಿ.
3. ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಅರಿಸಿನ ಪುಡಿ ಹಾಕಿ.
4.ಈಗ ಕತ್ತರಿಸಿದ ಟೊಮೆಟೋ ಹಾಕಿ ಅದಕ್ಕೆ ಮೆಣಸಿನ ಪುಡಿ, ಮೆಂತೆ, ಗರಂ ಮಸಾಲ ಹಾಕಿ ಬೆರೆಸಿ ಸ್ವಲ್ಪ ನೀರು ಹಾಕಿ ಅದಕ್ಕೆ ಬೇಯಿಸಿದ ಬಟಾಣಿ ಹಾಕಿ 3-4ನಿಮಿಷ ಬೇಯಿಸಿ.
5.ಆ ಮಿಶ್ರಣಕ್ಕೆ ಪನ್ನೀರ್ ಹಾಕಿ, ಮಲಾಯಿಯನ್ನು ಸೇರಿಸಿ ಗಟ್ಟಿ ರಸವಾಗುವರೆಗೆ ಬೇಯಿಸಿ.
ರೆಡಿಯಾದ ಪನ್ನೀರ್ ಅನ್ನು ರೊಟ್ಟಿ ಅಥವಾ ಚಪಾತಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.



Click it and Unblock the Notifications
