Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪುಷ್ಟಿದಾಯಕ ಪನ್ನೀರ್ ರೋಲ್
ರುಚಿ ಮತ್ತು ಶಕ್ತಿ, ಅದಕ್ಕೂ ಮಿಗಿಲಾಗಿ ಮಕ್ಕಳಿಗೆ ನಿಜಕ್ಕೂ ಇಷ್ಟವಾಗುವ ತಿನಿಸು! ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು :
ಪನ್ನೀರ್- 200ಗ್ರಾಂ
ಬ್ರೆಡ್ -6 ಪೀಸ್
ಮೆಕ್ಕೆ ಜೋಳದ ಹಿಟ್ಟು -2 ಟೇಬಲ್ ಚಮಚ
ಮೈದಾ ಹಿಟ್ಟು -2 ಟೇಬಲ್ ಚಮಚ
ಹಸಿಮೆಣಸಿನ ಕಾಯಿ -ಎರಡರಿಂದ ಮೂರು
ಉಪ್ಪು -ರುಚಿಗೆ ತಕ್ಕಷ್ಟು
ಪುದೀನಾ -1 ಕಟ್ಟು
ಗರಂ ಮಸಾಲ -2ಟೀ ಚಮಚ
ಕಾರದ ಪುಡಿ -1ಟೇಬಲ್ ಚಮಚ
ಸಣ್ಣ ರವೆ -ಅರ್ಧ ಕಪ್
ಈರುಳ್ಳಿ -2
ದಪ್ಪ ಮೆಣಸಿನ ಕಾಯಿ -1(ಕ್ಯಾಪ್ಸಿಕಂ)
ಎಣ್ಣೆ
ಮಾಡುವ ವಿಧಾನ :
1. ಮೊದಲು ಪನ್ನೀರ್ ಆನ್ನು ತುರಿದು ಕೊಳ್ಳಬೇಕು.
2. ಬ್ರೆಡ್ ಅನ್ನು ನೀರಿನಲ್ಲಿ ಹಾಕಿ ತಕ್ಷಣ ತೆಗೆದು ಹಿಂಡಿಕೊಳ್ಳಬೇಕು. ನಂತರ ಪುಡಿ ಮಾಡಬೇಕು.
3. ಹೆಚ್ಚಿದ ಈರುಳ್ಳಿಯನ್ನು ಎಣ್ಣೆಯಲ್ಲಿ ಉರಿಯಿರಿ. ಅದು ಕೆಂಪಗಾದ ಮೇಲೆ, ಹೆಚ್ಚಿರುವ ದಪ್ಪ ಮೆಣಸಿನಕಾಯಿ ಹೋಳುಗಳನ್ನು ಹಾಕಿ ಹುರಿಯಬೇಕು. ಅವುಗಳನ್ನು ಸ್ವಲ್ಪ ಮಾತ್ರ ಬೇಯಿಸಬೇಕು.
4. ಬೇಸನ್ ಒಂದಕ್ಕೆ ತುರಿದ ಪನ್ನೀರ್ ಮತ್ತು ಹಿಂಡಿ ತೆಗೆದ ಬ್ರೆಡ್ ಪುಡಿಯನ್ನು ಹಾಕಿ. ಅದಕ್ಕೆ ಸಣ್ಣಗೆ ಹೆಚ್ಚಿರುವ ಹಸಿ ಮೆಣಸಿನಕಾಯಿ, ಪುದೀನಾ ಸೊಪ್ಪು, ಮೆಕ್ಕೆಜೋಳದ ಹಿಟ್ಟು, ಮೈದಾ, ಉಪ್ಪು, ಕಾರದ ಪುಡಿ, ಗರಂ ಮಸಾಲ ಹಾಕಿ ಚೆನ್ನಾಗಿ ಕಲಸಬೇಕು.
5. ಮೇಲಿನ ಮಿಶ್ರಣವನ್ನು ಮೊದಲು ಚಿಕ್ಕಚಿಕ್ಕ ಉಂಡೆಗಳನ್ನಾಗಿ ಮಾಡಿ. ಉಂಡೆಗಳನ್ನು ನಂತರ ಸಿಲಿಂಡರ್ ಆಕಾರಕ್ಕೆ ರೂಪಿಸಿ, ರವೆಯಲ್ಲಿ ಹೊರಳಿಸಿ, ಎಣ್ಣೆಯಲ್ಲಿ ಕರಿಯಬೇಕು. ಸ್ವಲ್ಪ ಕೆಂಪಗಾದ ಮೇಲೆ ಹೊರ ತೆಗೆಯಿರಿ. ಇದು ಟೊಮೆಟೋ ಸಾಸ್ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.
ಕಿವಿ ಮಾತು : ಮಕ್ಕಳಿಗೆ ಇಷ್ಟವಾಗುವ ಪನ್ನೀರ್ ರೋಲ್, ಪುಷ್ಟಿದಾಯಕ ಆಹಾರವೂ ಹೌದು. ಆದರೆ ಹೆಚ್ಚು ಕೊಬ್ಬಿನಂಶ ಉಳ್ಳವರು ಮತ್ತು ದೇಹ ಕರಗಿಸಲು ಏನೇನೋ ಮಾಡುತ್ತಿರುವವರು ಇದನ್ನು ನೋಡಿ ಸಂತೋಷ ಪಟ್ಟರೆ ಸಾಕು!



Click it and Unblock the Notifications
