Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೊಡ್ಮೆಣಸಿನಕಾಯಿ ಮೊಸರು ಮಸಾಲಾ ರೆಸಿಪಿ

ಬೇಕಾಗುವ ಸಾಮಗ್ರಿಗಳು :
1. ಸಣ್ಣಗೆ ಕತ್ತರಿಸಿದ ಈರುಳ್ಳಿ- 1 ಕಪ್
2. ಕತ್ತರಿಸಿದ ಟೊಮಾಟೊ- 1 ಕಪ್
3. ಕತ್ತರಿಸಿದ ದೊಣ್ಣೆ(ದೊಡ್ಡ) ಮೆಣಸಿನಕಾಯಿ (ಕ್ಯಾಪ್ಸಿಕಂ)- 1 ಕಪ್
4. 2-3 ಟೀ ಸ್ಪೂನ್ ರೀಫೈನ್ಡ್ ಎಣ್ಣೆ
5. ಜೀರಿಗೆ- 1 ಟೀ ಸ್ಪೂನ್
6. ಉದ್ದುದ್ದ ಕತ್ತರಿಸಿದ ಹಸಿ ಮೆಣಸಿನಕಾಯಿ- 3
7. ನಾಲ್ಕಾರು ಎಸಳು ಕರಿಬೇವಿನ ಸೊಪ್ಪು
8. ರುಚಿಗೆ ತಕ್ಕಷ್ಟು ಉಪ್ಪು
9. ಅರಿಷಿಣ ಪುಡಿ
10. 1 ಟೀ ಸ್ಪೂನ್ ಖಾರದ ಪುಡಿ (ಒಣ ಮೆಣಸಿನಕಾಯಿ ಪುಡಿ)
11. 1 ಟೀ ಸ್ಪೂನ್ ಕೊತ್ತಂಬರಿ ಬೀಜದ ಪುಡಿ
12. ಅರ್ಧ ಟೀ ಸ್ಪೂನ್ ಗರಂ ಮಸಾಲಾ
13. ಗಟ್ಟಿಯಾಗಿರುವ ಸಿಹಿ ಮೊಸರು- 100 ಮಿಲೀ
14. ನೀರು- 1 ಲೋಟ
ಮಾಡುವ ವಿಧಾನ :
ಮೊದಲಿಗೆ- ಅಗಲ ತಳದ ಪಾತ್ರೆಯಾಂದರಲ್ಲಿ 2-3 ಟೀ ಸ್ಪೂನ್ ಎಣ್ಣೆ ಹಾಕಿ. ಪಾತ್ರೆಯನ್ನು ಸ್ಟವ್ ಮೇಲಿಡಿ. ಮಧ್ಯಮ ಉರಿಯಲ್ಲಿ ಜೀರಿಗೆಯನ್ನು ಹುರಿದುಕೊಳ್ಳಿ. ಜೀರಿಗೆ ಹುರಿಯಲು 1 ನಿಮಿಷ ಸಾಕು.
ಅದೇ ಪಾತ್ರೆಗೆ- ಕತ್ತರಿಸಿಟ್ಟುಕೊಂಡ ಈರುಳ್ಳಿ ತುಂಡುಗಳು, ತೊಳೆದಿಟ್ಟುಕೊಂಡ ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ ತುಂಡುಗಳನ್ನು ಹಾಕಿ. ಈರುಳ್ಳಿ ತುಂಡುಗಳು ಹೊಂಬಣ್ಣಕ್ಕೆ ಬರುವವರೆಗೆ ಬೇಯಲಿ. ಆನಂತರ ಕತ್ತರಿಸಿ ಸಿದ್ಧಪಡಿಸಿಕೊಂಡ ಟೊಮೊಟೊ ಹಾಗೂ ದೊಡ್ಡ ಮೆಣಸಿನಕಾಯಿ ತುಂಡುಗಳನ್ನು ಪಾತ್ರೆಗೆ ಸೇರಿಸಿ. ಚೆನ್ನಾಗಿ ಕೈಯಾಡಿಸಿ.
1 ಲೋಟ ನೀರನ್ನು ಪಾತ್ರೆಗೆ ಸೇರಿಸಿ, ಪ್ಲೇಟ್ ಮುಚ್ಚಿ. ಪಾತ್ರೆಯಲ್ಲಿನ ಪದಾರ್ಥಗಳು ಚೆನ್ನಾಗಿ ಕುದಿಯಲಿ. ತರಕಾರಿ ಚೆನ್ನಾಗಿ ಬೆಂದ ನಂತರ ಉಪ್ಪು, ಅರಿಷಿಣ ಹಾಗೂ ಕೊತ್ತಂಬರಿ ಪುಡಿ ಸೇರಿಸುವುದು. ಮಿಶ್ರಣವನ್ನು ಚೆನ್ನಾಗಿ ಕಲಕಿದ ನಂತರ ಮತ್ತೆ 5 ನಿಮಿಷ ಬೇಯಿಸುವುದು. ಈಗ ಸಿಹಿ ಮೊಸರು ಸೇರಿಸುವ ಸರದಿ. ಮೊಸರು ಸೇರಿಸಿದ ನಂತರದ ಮಿಶ್ರಣವನ್ನು ಮತ್ತೆ ಸ್ಟವ್ ಮೇಲಿಡಿ. ಉರಿ ಮಧ್ಯಮವಾಗಿರಲಿ. ಮೊಸರಿನಲ್ಲಿನ ನೀರಿನಂಶ ಸಂಪೂರ್ಣ ಆವಿಯಾಗುವ ತನಕ ಕುದಿಸುವುದು. ಒಲೆಯಿಂದ ಕೆಳಗಿಳಿಸುವ ಮುನ್ನ - ಗರಂ ಮಸಾಲಾ ಸೇರಿಸುವುದು.
ಪೂರಿ ಹಾಗೂ ಪರೋಟಾಗಳಿಗೆ ಕ್ಯಾಪ್ಸಿಕಂ ಮೊಸರು ಮಸಾಲಾ ಸೂಪರ್ ಕಾಂಬಿನೇಷನ್. ಬಿಸಿಯಾಗಿರುವಾಗಲೇ ಬಳಸುವುದು ಒಳ್ಳೆಯದು. ಹಸಿ ಈರುಳ್ಳಿ ಹಾಗೂ ಟೊಮೊಟೊ ತುಂಡುಗಳನ್ನು ದೊಡ್ಮೆಣಸಿನಕಾಯಿ ಮೊಸಲು ಮಸಾಲಾದ ಮೇಲೆ ಹರಡಬಹುದು.



Click it and Unblock the Notifications
