Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಥಟ್ ಅಂತ ರೆಡಿಯಾಗುತ್ತೆ ಕ್ಯಾಪ್ಸಿಕಂ ಮಸಾಲ

ಕ್ಯಾಪ್ಸಿಕಂ ಮಸಾಲಾಗೆ ಬೇಕಾಗುವ ಸಾಮಾಗ್ರಿಗಳು:
* 1 ಕ್ಯಾಪ್ಸಿಕಂ
* 1 ಟೊಮೊಟೊ, 1 ಈರುಳ್ಳಿ
* 1/2 ಕಪ್ ತೆಂಗಿನ ತುರಿ
* 1/4 ಕಪ್ ಕಡಲೆಬೀಜ
* 4 ಮೆಣಸು
* 2 ಲವಂಗ, 1/2 ಇಂಚು ಚೆಕ್ಕೆ
* ಕರಿಬೇವು, ಕೊತ್ತಂಬರಿ
* ಉಪ್ಪು, ಎಣ್ಣೆ, ಸಾಸಿವೆ
ಮಸಾಲಾ ತಯಾರಿಸುವ ವಿಧಾನ:
* ಮೊದಲು ದುಂಡು ಮೆಣಸಿನ ಕಾಯಿ, ಟೊಮೊಟೊ ಮತ್ತು ಈರುಳ್ಳಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು.
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಕರಿಬೇವು, ಕಡಲೆಬೀಜ, ಮೆಣಸು, ಚಕ್ಕೆ, ಲವಂಗ, ಕೊತ್ತಂಬರಿ ಮತ್ತು ತೆಂಗಿನತುರಿಯನ್ನು ಹಾಕಿ ಕೆಂಪಗಾಗುವ ತನಕ ಹುರಿದು ನುಣ್ಣಗೆ ರುಬ್ಬಿಕೊಳ್ಳಬೇಕು.
* ಮತ್ತೆ ಬಾಣಲೆಗೆ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ, ಈರುಳ್ಳಿ ಹಾಕಿ ಕೆಂಪಗಾಗು ತನಕ ಹುರಿದು ನಂತರ ಕ್ಯಾಪ್ಸಿಕಂ ಹಾಕಬೇಕು. ಇದಕ್ಕೆ ಟೊಮೊಟೊ ಸೇರಿಸಿ ಚೆನ್ನಾಗಿ ತಿರುಗಿಸಬೇಕು. ಟೊಮೊಟೊ ಮೆತ್ತಗಾದಂತೆ ಕಂಡಾಗ ಅದಕ್ಕೆ ರುಬ್ಬಿಟ್ಟಿದ್ದ ಮಸಾಲೆ ಬೆರೆಸಿ ಸ್ವಲ್ಪ ಎಣ್ಣೆ ಹಾಕಬೇಕು.
* ಈ ಮಿಶ್ರಣಕ್ಕೆ ರುಚಿಗೆ ತಕ್ಕಂತೆ ಉಪ್ಪು ಬೆರೆಸಿ ಅರ್ಧ ಕಪ್ ನೀರು ಸೇರಿಸಿ ಕುದಿಸಬೇಕು. ಕೊನೆಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಬೇಕು. ಈಗ ಕ್ಯಾಪ್ಸಿಕಂ ಮಸಾಲ ತಿನ್ನೋದಕ್ಕೆ ತಯಾರಾಗಿದೆ. ಚಪಾತಿ, ರೋಟಿ, ದೋಸೆ, ಅನ್ನ ಯಾವುದಕ್ಕಾದರೂ ಸರಿ, ಕ್ಯಾಪ್ಸಿಕಂ ಮಸಾಲಾ ಬೆರೆಸಿ ತಿನ್ನಬಹುದು.



Click it and Unblock the Notifications
