Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತೂಕ ಇಳಿಸುವ ಈ ಓಟ್ಸ್ ಕಿಚಡಿ ಮಧುಮೇಹಿಗಳಿಗೂ ಒಳ್ಳೆಯದು
ತೂಕ ಹೆಚ್ಚಾಗುತ್ತಿದೆ ಎಂಬ ಚಿಂತೆಯೇ? ಅದರಲ್ಲೂ ಈ ಲಾಕ್‌ಡೌನ್ ಬಳಿಕ ಮನೆಯಲ್ಲಿಯೇ ಇದ್ದೇವೆ, ಜಿಮ್, ವಾಕಿಂಗ್ ಅಂತ ಹೋಗಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ತೂಕ ಹೆಚ್ಚಾಗುತ್ತಿದೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ನಿಮಗೆ ಹೇಳಿ ಮಾಡಿಸಿದ ಕಿಚಡಿ ರೆಸಿಪಿ.
ಇಲ್ಲಿ ನಾವು ಓಟ್ಸ್ ಕಿಚಡಿ ನೀಡಿದ್ದೇವೆ, ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ಸವಿಯಿರಿ. ಈ ಕಿಚಡಿಯಲ್ಲಿ ಪ್ರೊಟೀನ್ ಹಾಗೂ ನಾರಿನಂಶ ಅಧಿಕವಿದೆ, ಕ್ಯಾಲೋರಿಯೂ ಹೆಚ್ಚಿಲ್ಲ. ಇದನ್ನು ಸವಿಯುವ ಮೂಲಕ ಮೈ ತೂಕ ಕಡಿಮೆ ಮಾಡಬಹುದು.

ಇನ್ನು ಮಧುಮೇಹಿಗಳಿಗೆ ಪಥ್ಯ ಆಹಾರ ಸೇವಿಸಿ ಬೋರಾಗಿರುತ್ತದೆ, ಅಂಥವರು ಈ ರೀತಿಯ ಕಿಚಡಿ ಟ್ರೈ ಮಾಡಿದರೆ ಬಾಯಿಗೆ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ನಾವು ಓಟ್ಸ್ ಕಿಚಡಿ ರೆಸಿಪಿ ನೀಡಿದ್ದೇವೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Kichdi
Serves: 2
-
ಬೇಕಾಗುವ ಸಾಮಗ್ರಿ
*1 ಕಪ್ ಓಟ್ಸ್
* 4 ಚಮಚ ಹೆಸರು ಬೇಳೆ
* 3 ಚಮಚ ಎಣ್ಣೆ
* ಒಂದೊಂದು ಚಮಚ ಬೆಳ್ಳುಳ್ಳಿ , ಹಸಿ ಮೆಣಸಿನಕಾಯಿ ಪೇಸ್ಟ್
* 1 ಚಮಚ ಅರಿಶಿಣಪುಡಿ
* ರುಚಿಗೆ ತಕ್ಕ ಉಪ್ಪು
* ಡ್ರೈ ಫ್ರೂಟ್ಸ್ (ನಿಮ್ಮ ಆಯ್ಕೆಗೆ ಬಿಟ್ಟದ್ದು)
-
ಮಾಡುವ ವಿಧಾನ:
* ಕುಕ್ಕರ್‌ಗೆ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಬಿಸಿ ಮಾಡಿ, ನಂತರ ಹಸಿ ಮೆಣಸಿನಕಾಯಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್ ಹಾಕಿ 1-2 ನಿಮಿಷ ಸೌಟ್‌ನಲ್ಲಿ ಆಡಿಸಿ.
*ಓಟ್ಸ್ ಹಾಗೂ ಹೆಸರು ಬೇಳೆ ಹಾಕಿ ಸೌಟ್‌ನಿಂದ ತಿರುಗಿಸಿ, ನತರ 4 ಕಪ್ ನೀರು ಹಾಕಿ ಉಪ್ಪು, ಅರಿಶಿಣ ಹಾಕಿ ಮಿಶ್ರ ಮಾಡಿ ಎರಡು ವಿಶಲ್ ಬರುವವರೆಗೆ ಬೇಯಿಸಿ. ನಂತರ ತಣ್ಣಗಾಗಲು ಬಿಡಿ. ನಂತರ ಡ್ರೈಫ್ರೂಟ್ಸ್‌ನಿಂದ ಅಲಂಕರಿಸಿ, ಸವಿಯಿರಿ.
- ಸಲಹೆ: ಇದು ಬಾಯಿಗೆ ರುಚಿ ನೀಡುತ್ತದೆ, ದೇಹಕ್ಕೆ ಅಗ್ಯತವಿರುವ ಪೋಷಾಂಶವೂ ದೊರೆಯುವುದು, ತೂಕವೂ ಹೆಚ್ಚಾಗುವುದಿಲ್ಲ. ಮೈ ತೂಕ ಕಡಿಮೆಯಾಗಬೇಕೆಂದು ಬಯಸುವವರು ಈ ರೆಸಿಪಿ ಟ್ರೈ ಮಾಡಬಹುದು.
- ಕ್ಯಾಲೋರಿ - 175cal
- ಪ್ರೊಟೀನ್ - 6.6 ಗ್ರಾಂ
- ಕಾರ್ಬ್ಸ್ - 20ಗ್ರಾಂ



Click it and Unblock the Notifications
