Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬಿಸಿಬಿಸಿ ಬೇಳೆ ದಮ್ ಬಿರಿಯಾನಿ ರೆಸಿಪಿ

ಹಾಗಾದರೆ ನಿಮಗೆಂದೇ ಇಲ್ಲಿದೆ ಬೇಳೆ ಬಿರಿಯಾನಿ ರೆಸಿಪಿ. ರುಚಿ ರುಚಿಯಾದ ಮಸಾಲೆ ಭರಿತ ಈ ಬೇಳೆ ಬಿರಿಯಾನಿನ್ನಂತೂ ನಿಮ್ಮ ನಾಲಿಗೆ ಚಪ್ಪರಿಸುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. ಹಾಗಾದ್ರೆ ಬೇಳೆ ಬಿರಿಯಾನಿಯನ್ನು ಮಾಡೋದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಅದರ ವಿವರ.
ಬೇಳೆ ಬಿರಿಯಾನಿಗೆ ಬೇಕಾಗುವ ಪದಾರ್ಥ:
* 2 ಕಪ್ ಅಕ್ಕಿ
* 1 ಕಪ್ ತೊಗರಿ ಬೇಳೆ
* 2 ಈರುಳ್ಳಿ
* 1 ಚಮಚ ಜೀರಿಗೆ
* 1 ಚಮಚ ಅರಿಶಿಣ
* 1 ಚಮಚ ಕೆಂಪು ಮೆಣಸಿನ ಪುಡಿ
* ತಲಾ 1 ಚಮಚ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್
* 2 ಚಮಚ ಬೆಣ್ಣೆ
* 1 ದೊಡ್ಡ ಟೊಮೆಟೊ
* 2 ಚಿಕ್ಕ ಈರುಳ್ಳಿ (ಕೆಂಪಗಾಗುವ ತನಕ ಹುರಿದಿರಬೇಕು)
* 1 ಆಲೂಗಡ್ಡೆ (ಹುರಿದಿದ್ದು)
* ಉಪ್ಪು
* 2 ಚೆಕ್ಕೆ, 2 ಏಲಕ್ಕಿ, 2 ಪೀಸ್ ಚೆಕ್ಕೆ, 4 ಮೆಣಸು ಸೇರಿಸಿ ತಯಾರಿಸಿದ ಪುಡಿ
* 1 ಚಮಚ ಗರಂ ಮಸಾಲೆ ಪುಡಿ
* ಕೊತ್ತಂಬರಿ, ಪುದೀನಾ
* 1 ಚಮಚ ತುಪ್ಪ
ಬೇಳೆ ಬಿರಿಯಾನಿ ತಯಾರಿಸುವ ವಿಧಾನ:
* ಅಕ್ಕಿಯನ್ನು ಒಂದು ಗಂಟೆ ನೆನೆಸಿ ಅರ್ಧ ಬೇಯಿಸಿರಬೇಕು. ಬೇಳೆಯನ್ನು ಕೂಡ 2 ಗಂಟೆ ನೆನೆಸಿ ಅರಿಶಿಣದೊಂದಿಗೆ ಅರ್ಧ ಬೇಯಿಸಬೇಕು.
* ಒಂದು ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ ಅದರಲ್ಲಿ ಜೀರಿಗೆಯನ್ನು ಹುರಿಯಬೇಕು. ಜೀರಿಗೆ ಬಣ್ಣ ಬದಲಿಸುತ್ತಿದ್ದಂತೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಕೆಲ ನಿಮಿಷ ಹುರಿಯಬೇಕು. ನಂತರ ಕೆಂಪು ಮೆಣಸಿನ ಪುಡಿ, ಅರಿಶಿಣ, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನ ಕಾಯಿ ಪೇಸ್ಟ್ ಹಾಕಿ ಕೆಲವು ನಿಮಿಷ ಹುರಿದುಕೊಳ್ಳಬೇಕು.
* ಈಗ ಕತ್ತರಿಸಿದ ಟೊಮೆಟೊ ಹಾಕಿ ನೀರಿನಂಶ ಹೋಗುವವರೆಗೂ ಹುರಿದು ಬೇಯಿಸಿದ ಬೇಳೆಯನ್ನು ಇದಕ್ಕೆ ಬೆರೆಸಬೇಕು. ಹುರಿದಿಟ್ಟುಕೊಂಡಿದ್ದ ಈರುಳ್ಳಿ, ಗರಂ ಮಸಾಲಾ ಪುಡಿ, ಚೆಕ್ಕೆ, ಲವಂಗ, ಮೆಣಸಿನ ಪುಡಿ, ಆಲೂಗಡ್ಡೆ, ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
* ಒಂದು ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ಹುರಿದಿಟ್ಟುಕೊಂಡಿದ್ದ ಮಿಶ್ರಣ ಹಾಕಿ ಅದರ ಮೇಲೆ ಅರ್ಧ ಬೇಯಿಸಿದ ಅನ್ನ ಸ್ವಲ್ಪ ಹಾಕಿ ಕತ್ತರಿಸಿದ ಕೊತ್ತಂಬರಿ ಪುದೀನಾ ಸೊಪ್ಪನ್ನು ಉದುರಿಸಬೇಕು. ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಗರಂ ಮಸಾಲಾ ಪುಡಿಯನ್ನು ಉದುರಿಸಬೇಕು. ಇದೇ ರೀತಿ ಎರಡೂ ಮಿಶ್ರಣಗಳನ್ನು ಬೆರೆಸುತ್ತಾ ಕೊನೆಯಲ್ಲಿ ಮುಚ್ಚುಳ ಮುಚ್ಚಿ ಸಣ್ಣ ಉರಿಯಲ್ಲಿ ದಮ್ ಆಗುವವರೆಗೂ ಬಿಡಬೇಕು. ಈಗ ಬಿಸಿ ಬಿಸಿ ಬೇಳೆ ಬಿರಿಯಾನಿ ತಿನ್ನಲು ತಯಾರಾಗಿದೆ.



Click it and Unblock the Notifications
