For Quick Alerts
ALLOW NOTIFICATIONS  
For Daily Alerts

ಅನ್ನ, ಚಪಾತಿ ಜೊತೆ ಸವಿಯಲು ಸೂಪರ್ ಟೇಸ್ಟ್‌ನ ಮಶ್ರೂಮ್ ಮಸಾಲೆ ರೆಸಿಪಿ

Posted By:
|

ನೀವು ಮಶ್ರೂಮ್ ಪ್ರಿಯರಾಗಿದ್ದರೆ ಇಲ್ಲಿದೆ ನಿಮಗಾಗಿ ಮಶ್ರೂಮ್ ಮಸಾಲ ರೆಸಿಪಿ. ಅಣಬೆಯಿಂದ ಹಲವಾರು ರುಚಿಯಲ್ಲಿ ಅಡುಗೆ ತಯಾರಿಸಬಹುದು. ಅದರಲ್ಲೂ ಅದರ ಮಸಾಲೆಯನ್ನು ನೂರಕ್ಕೂ ಹೆಚ್ಚು ರುಚಿಯಲ್ಲಿ ತಯಾರಿಸಬಹುದು.

Mushroom Masala Recipe

ನಾವಿಲ್ಲಿ ಸ್ವಲ್ಪ ಗಟ್ಟಿ ಗ್ರೇವಿಯ ಮಸಾಲ ನೀಡಿದ್ದೇವೆ. ಈ ಮಸಾಲ, ಅನ್ನ, ಚಪಾತಿ ಇವುಗಳ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಈ ಮಸಾಲೆ ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಹೀಗಿದೆ:

mushroom masala recipe, ಮಶ್ರೂಮ್ ಮಸಾಲೆ ರೆಸಿಪಿ
mushroom masala recipe, ಮಶ್ರೂಮ್ ಮಸಾಲೆ ರೆಸಿಪಿ
Prep Time
15 Mins
Cook Time
30M
Total Time
45 Mins

Recipe By: Reena TK

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿ

    * 3 ಚಮಚ ಅಡುಗೆ ಎಣ್ಣೆ

    * 2-3 ಲವಂಗ

    * 5-6 ಕಾಳು ಮೆಣಸು

    * 2 ಏಲಕ್ಕಿ

    * 1 ಕಪ್ಪು ಏಲಕ್ಕಿ

    * 1 ಕಪ್ ಈರುಳ್ಳಿ (ಉದ್ದುದ್ದವಾಗಿ ಹೆಚ್ಚಿದ್ದು)

    * 2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

    * 1 ಕಪ್ ಟೊಮೆಟೊ (ಚಿಕ್ಕದಾಗಿ ಕತ್ತರಿಸಿದ್ದು)

    * 1/4 ಕಪ್ ಟೊಮೆಟೊ ಪೇಸ್ಟ್

    * 2 ಚಮಚ ಕೊತ್ತಂಬರಿ ಪುಡಿ

    * ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ

    * 1 ಚಮಚ ಅರಿಶಿಣ ಪುಡಿ

    *1/2 ಚಮಚ ಗರಂ ಮಸಾಲ ಪುಡಿ

    * 1/2 ಚಮಚ ಕಾಳು ಮೆಣಸಿನ ಪುಡಿ

    * ರುಚಿಗೆ ತಕ್ಕ ಉಪ್ಪು

    * 300ಗ್ರಾಂ ಮಶ್ರೂಮ್ (ಅಣಬೆ)

    * 1 ಕ್ಯಾಪ್ಸಿಕಂ

    * 1 ಚಮಚ ನಿಂಬೆರಸ

Red Rice Kanda Poha
How to Prepare
  • ಮಾಡುವ ವಿಧಾನ:

    * ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದು ಬಿಸಿಯಾದಾಗ ಅದಕ್ಕೆ ಲವಂಗ, ಕಾಳು ಮೆಣಸು, ಹಸಿರು ಏಲಕ್ಕಿ, ಕಪ್ಪು ಏಲಕ್ಕಿ ಹಾಕಿ ಕೆಲವು ಸೆಕೆಂಡ್‌ ಫ್ರೈ ಮಾಡಿ.

    * ಈಗ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

    * ಈಗ ಟೊಮೆಟೊ ಹಾಕಿ ಅದು ಸ್ವಲ್ಪ ಮೆತ್ತಗಾದ ಮೇಲೆ ಟೊಮೆಟೊ ಪೇಸ್ಟ್ ಮಾಡಿ 2-3 ನಿಮಿಷ ಸೌಟ್‌ನಿಂದ ಆಡಿಸಿ.

    * ಈಗ ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಪುಡಿ, ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಎಣ್ಣೆ ಮಸಾಲೆಯಿಂದ ಬೇರ್ಪಟ್ಟು ಮೇಲ್ಭಾಗ ತೇಲುವಷ್ಟು ಹೊತ್ತು ಫ್ರೈ ಮಾಡಿ (5-7 ನಿಮಿಷ).

    * ಈಗ ಅಣಬೆ ಹಾಕಿ ಮಿಶ್ರ ಮಾಡಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ (ಮಧ್ಯದಲ್ಲಿ ಎರಡು ಬಾರಿ ಸೌಟ್‌ನಿಂದ ಆಡಿಸಬೇಕು).

    * ಈಗ ಗಟ್ಟಿ ಗ್ರೇವಿಯಾದ ಮೇಲೆ ಅದನ್ನು ಉರಿಯಿಂದ ಇಳಿಸಿ ಅದಕ್ಕೆ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ ಚಪಾತಿ, ರೊಟ್ಟಿ ಅಥವಾ ಬಿಸಿಬಿಸಿಯಾದ ಅನ್ನ ಜೊತೆ ಸರ್ವ್ ಮಾಡಿ.

Instructions
  • ನೀವು ಬೇಕಿದ್ದರೆ ಅಣಬೆ ಜೊತೆಗೆ ಬೇಬಿಕಾರ್ನ್, ಪನ್ನೀರ್ ಕೂಡ ಸೇರಿಸಬಹುದು.
Nutritional Information
  • ಸರ್ವ್‌ -
  • ಕ್ಯಾಲೋರಿ - 158ಕ್ಯಾ
  • ಕಾರ್ಬ್ಸ್ - 14 ಗ್ರಾಂ
  • ನಾರಿನಂಶ - 3ಗ್ರಾಂ
[ 4 of 5 - 92 Users]
X
Desktop Bottom Promotion