For Quick Alerts
ALLOW NOTIFICATIONS  
For Daily Alerts

ರೆಸಿಪಿ: ಹೆಸರುಬೇಳೆಯ ಪಕೋಡ ಟ್ರೈ ಮಾಡಿದ್ದೀರಾ?

Posted By:
|

ಪಕೋಡ ಹಲವಾರು ಬಗೆಯಲ್ಲಿ ತಯಾರಿಸಬಹುದು, ನಾವಿಲ್ಲಿ ಹೆಸರು ಬೇಳೆ ಹಾಕಿ ಮಾಡುವ ರೆಸಿಪಿ ನೀಡಿದ್ದೇವೆ. ಸಾಮಾನ್ಯವಾಗಿ ಮಸಾಲೆ ವಡೆ ಮಾಡುವಾಗ ಕಡಲೆ ಬೇಳೆ ಹಾಕುತ್ತೇವೆ, ಆದರೆ ಇಲ್ಲಿ ಹೆಸರು ಬೇಳೆ ಬಳಸಲಾಗಿದೆ.

Moong Dal Pakoda Recipe

ಈ ಸ್ನ್ಯಾಕ್ಸ್ ರುಚಿ ಮಸಾಲೆವಡೆಗಿಂತ ಸ್ವಲ್ಪ ಭಿನ್ನ ಎನಿಸುವುದು. ಇದರಲ್ಲಿ ಕೊತ್ತಂಬರಿ ಬೀಜ ಹಾಗೂ ಪುದೀನಾ ಇತರ ಮಸಾಲೆಯ ಫ್ಲೇವರ್‌ ಸೇರಿಕೊಂಡು ತುಂಬಾ ರುಚಿಯಾಗಿರುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Moong Dal Pakoda Recipe,ಹೆಸರು ಬೇಳೆಯ ಪಕೋಡ ರೆಸಿಪಿ
Moong Dal Pakoda Recipe,ಹೆಸರು ಬೇಳೆಯ ಪಕೋಡ ರೆಸಿಪಿ
Prep Time
10 Mins
Cook Time
20M
Total Time
30 Mins

Recipe By: Reena TK

Recipe Type: Snacks

Serves: 4

Ingredients
  • ಬೇಕಾಗುವ ಸಾಮಗ್ರಿ

    ಹೆಸರುಬೇಳೆ 1 ಕಪ್

    ಈರುಳ್ಳಿ 1 ಕಪ್ ಕತ್ತರಿಸಿದ್ದು

    ಶುಂಠಿ-ಬೆಳ್ಳುಳ್ಳಿ 1/4 ಕಪ್

    ಕೊತ್ತಂಬರಿ ಸೊಪ್ಪು ಅರ್ಧ ಕಪ್

    ಪುದೀನಾ ಎಲೆ ಸ್ವಲ್ಪ

    ಹಸಿ ಮೆಣಸಿನಕಾಯಿ 3-4

    ಖಾರದ ಪುಡಿ 1 ಚಮಚ

    ರುಚಿಗೆ ತಕ್ಕ ಉಪ್ಪು

    ಕೊತ್ತಂಬರಿ ಬೀಜ 1/4 ಕಪ್

    ಜೀರಿಗೆ 1 ಚಮಚ

    ನೀರು 1/2 ಕಪ್

Red Rice Kanda Poha
How to Prepare
  • ಮಾಡುವುದು ಹೇಗೆ?

    * ಹೆಸರುಬೇಳೆಯನ್ನು 3-4 ಗಂಟೆ ನೆನೆ ಹಾಕಿ.

    * ಈಗ ಹೆಸರುಬೇಳೆ ಅದನ್ನು ಮಿಕ್ಸಿಗೆ ಹಾಕಿ ತರಿ ತರಿ ರುಬ್ಬಿ, ಕೊತ್ತಂಬರಿ ಬೀಜ ಕೂಡ ತರಿತರಿಯಾಗಿ ರುಬ್ಬಿ (ಎರಡೂ ಒಟ್ಟಿಗೆ ಹಾಕಿಯೂ ರುಬ್ಬಬಹುದು).

    * ಈಗ ರಬ್ಬಿದ ಪೇಸ್ಟ್ ಅನ್ನು ಬೌಲ್‌ಗೆ ಹಾಕಿ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ, ಪುದೀನಾ ಎಲೆ, ಖಾರದ ಪುಡಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.

    *ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಕುದಿಸಿ.

    * ಈಗ ಸ್ವಲ್ಪ ಮಿಶ್ರಣ ತೆಗೆದು ಉಂಡೆಕಟ್ಟಿ ಸ್ವಲ್ಪ ತಟ್ಟಿ ಕುದಿಯುತ್ತಿರುವ ಎಣ್ಣೆಗೆ ಹಾಕಿ.

    * ಎರಡೂ ಬದಿ ಕಂದು ಬಣ್ಣಕ್ಕೆ ತಿರುಗಿದಾಗ ತೆಗೆಯಿರಿ.

    * ಈಗ ಇದನ್ನು ಬಿಸಿ ಬಿಸಿ ಟೀ ಜೊತೆ ಸರ್ವ್ ಮಾಡಿ.

Instructions
  • * ಮಿಶ್ರಣ ನುಣ್ಣಗೆ ಆಗಬಾರದು, ತರಿತರಿ ಇರಬೇಕು. *ಶುಂಠಿ, ಬೆಳ್ಳುಳ್ಳಿ, ಪುದೀನಾ ಇವುಗಳನ್ನು ಜಜ್ಜಿ ಕೂಡ ಹಾಕಿ ಮಿಕ್ಸ್ ಮಾಡಬಹುದು.
Nutritional Information
  • ಕ್ಯಾಲೋರಿ - 646ಕ್ಯಾ
  • ಪ್ರೊಟೀನ್ - 26ಗ್ರಾಂ
  • ಕಾರ್ಬ್ಸ್ - 31ಗ್ರಾಂ
  • ನಾರಿನಂಶ - 6ಗ್ರಾಂ
[ 3.5 of 5 - 21 Users]
X
Desktop Bottom Promotion