For Quick Alerts
ALLOW NOTIFICATIONS  
For Daily Alerts

ವಾವ್ ಅನ್ನಿಸೋ ವಾಟೆಕಾಯಿ ಮಂದನಗೊಜ್ಜು

Posted By:
|

ಮಾವಿನಕಾಯಿಯನ್ನು ಹೊರತು ಪಡಿಸಿ ಅನೇಕ ರೀತಿಯ ಹುಳಿ ಅಂಶವಿರುವ ಆಹಾರ ಪದಾರ್ಥಗಳು ಪ್ರಕೃತಿಯಲ್ಲಿ ಲಭ್ಯವಿದೆ. ಆದರೆ ಅಂತಹ ಕೆಲವು ಆಹಾರ ಪದಾರ್ಥಗಳು ಜನರಿಗೆ ಅಪರಿಚಿತವಾಗಿ ಉಳಿದಿವೆ. ಅವುಗಳಲ್ಲಿ ವಾಟೆಕಾಯಿ ಎಂದು ಕರೆಯುವ ಹುಳಿ ಅಂಶದ ಕಾಯಿಯೂ ಕೂಡ ಹೌದು.

ವಾಟೆಕಾಯಿ ಅಥವಾ ಮಂಕಿ ಫ್ರೂಟ್ ಎಂದು ಇದನ್ನು ಕರೆಯಲಾಗುತ್ತದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ನೇಪಾಳ,ಭೂತಾನ್,ಮಾಯನ್ಮಾರ್, ಶ್ರೀಲಂಕಾ,ಥೈಲ್ಯಾಂಡ್,ಮಲೇಶಿಯಾ,ಸಿಂಗಾಪುರ, ಕಾಂಬೋಡಿಯಾ ದೇಶಗಳಲ್ಲೂ ಕೂಡ ಇದನ್ನು ಬೆಳೆಯಲಾಗುತ್ತದೆ.

Monkey Fruite Gojju Recipe

ವಾಟೆಕಾಯಿಯಿಂದ ಅನೇಕ ರೀತಿಯ ಅಡುಗೆಗಳನ್ನು ಮಾಡಬಹುದು. ಇವುಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿ,ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಒಂದು ವರ್ಷದವರೆಗೂ ಬಳಸಬಹುದು.

ನಾವಿಲ್ಲಿ ಹಸಿಯಾದ ವಾಟೆಕಾಯಿಯಿಂದ ಮಂದನಗೊಜ್ಜು ತಯಾರಿಸುವುದು ಹೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

Monkey Fruite Gojju Recipe/ ವಾಟೆಕಾಯಿ ಮಂದನಗೊಜ್ಜು
Monkey Fruite Gojju Recipe/ ವಾಟೆಕಾಯಿ ಮಂದನಗೊಜ್ಜು
Prep Time
10 Mins
Cook Time
12M
Total Time
22 Mins

Recipe By: Sushma

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ವಾಟೆಕಾಯಿ- ಎರಡು

    ಸಾಸಿವೆಕಾಳು- ಒಂದು ಚಮಚ

    ಬೆಳ್ಳುಳ್ಳಿ - 10 ರಿಂದ 12 ಎಸಳು

    ಅಡುಗೆ ಎಣ್ಣೆ- ನಾಲ್ಕು ಚಮಚ

    ಹಸಿಮೆಣಸು- ನಾಲ್ಕರಿಂದ ಐದು

    ಉಪ್ಪು- ರುಚಿಗೆ ತಕ್ಕಷ್ಟು

    ಅರಿಶಿನ- ಚಿಟಿಕೆ

    ಬೇವಿನ ಸೊಪ್ಪು - 10 ರಿಂದ 12 ಎಸಳು

Red Rice Kanda Poha
How to Prepare
  • ಮಾಡುವ ವಿಧಾನ-

    ವಾಟೆಕಾಯಿಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಕೆಲವು ನಿಮಿಷ ತಣಿಯಲು ಬಿಡಿ. ನಂತರ ಅದನ್ನು ಕಿವುಚಿ ರಸ ಹಿಂಡಿಕೊಳ್ಳಿ.(ಮಾವಿನಕಾಯಿಯನ್ನು ಬೇಯಿಸಿ ಅದರ ಹುಳಿ ಹಿಂಡಿಕೊಳ್ಳುವ ವಿಧಾನವನ್ನೇ ಇದರಲ್ಲೂ ಅನುಸರಿಸಬೇಕು)

    ನಂತರ ಬಾಣಲೆಯಲ್ಲಿ ಒಗ್ಗರಣೆ ಇಡಿ. ಮೊದಲಿಗೆ ಅಡುಗೆ ಎಣ್ಣೆ,ಸಾಸಿವೆ ಕಾಳು ಹಾಕಿ.

    ಸಾಸಿವೆ ಚಟಿಪಟಿ ಅಂದಾಗ ಬೆಳ್ಳುಳ್ಳಿ ಹಾಕಿ ಕೆಂಬಣ್ಣಕ್ಕೆ ಬರುವವರೆಗೆ ಹುರಿಯಿರಿ.

    ನಂತರ ಹಸಿಮೆಣಸನ್ನು ಸೇರಿಸಿ ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ. ಚಿಟಿಕೆ ಅರಿಶಿನ ಹಾಕಿ.

    ನಂತರ ವಾಟೆಕಾಯಿಯ ರಸವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದೆರಡು ನಿಮಿಷ ಕುದಿಯಲು ಬಿಡಿ.

Instructions
  • ಲಿವರ್ ಸಮಸ್ಯೆ ಇರುವವರಿಗೆ ಇದು ಪ್ರಯೋಜನವಾಗುವ ಅಡುಗೆ ಅನೇಕ ರೀತಿಯ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುವುದಕ್ಕೆ ಇದು ಪ್ರಯೋಜನಕಾರಿ, ಕೂದಲಿನ ಆರೋಗ್ಯ ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ಅನೇಕ ರೀತಿಯ ಚರ್ಮದ ಸಮಸ್ಯೆಯನ್ನು ನಿವಾರಿಸುವುದಕ್ಕೆ ಇದು ಪ್ರಯೋಜನಕಾರಿ. ಗಾಯಗಳನ್ನು ಗುಣಪಡಿಸುವುದಕ್ಕೆ ಇದು ಪ್ರಯೋಜನಕಾರಿ. ಉರಿಯೂತ ಸಮಸ್ಯೆ ನಿವಾರಿಸುವ ಚಿಕಿತ್ಸೆಗಳಲ್ಲಿ ಇದನ್ನು ಬಳಸಲಾಗುತ್ತದೆ.
Nutritional Information
  • ಪ್ರೋಟೀನ್ - 2 grams
  • ಕೊಬ್ಬು - 1 gram
  • ಮಿನರಲ್ - 1 gram
  • ಫೈಬರ್ - 3 grams
  • ಫಾಸ್ಪರಸ್ - 25 mg
[ 4.5 of 5 - 50 Users]
X
Desktop Bottom Promotion