For Quick Alerts
ALLOW NOTIFICATIONS  
For Daily Alerts

ಶುಂಠಿ, ಕಾಳುಮೆಣಸಿನ ಪುನರ್ಪುಳಿ ಜ್ಯೂಸ್

Posted By:
|

ನಮ್ಮ ದೇಹಕ್ಕೆ ಆಂಟಿಆಕ್ಸಿಡೆಂಟ್ ಗಳು, ನ್ಯೂಟ್ರಿಯಂಟ್ಸ್ ಗಳು,ವಿಟಮಿನ್ ಗಳು, ಮಿನರಲ್ ಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳ ಅಗತ್ಯತೆ ಇರುತ್ತದೆ. ಇವೆಲ್ಲವೂ ನಮಗೆ ಆಹಾರದಿಂದ ಲಭ್ಯವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಅಂಶವೇ. ಆದರೆ ಯಾವ ರೀತಿಯ ಆಹಾರ? ಉತ್ತಮ ಆಹಾರ ಸೇವಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾವುದು ಉತ್ತಮ ಆಹಾರ ಎಂದು ಯಾರೂ ಹೇಳುವುದಿಲ್ಲ.

Kokum juice

ಆಹಾರದ ಜೊತೆಗೆ ನೀರಿನ ಪ್ರಮಾಣ ಕೂಡ ದೇಹಕ್ಕೆ ಮಹತ್ವದ್ದಾಗಿರುತ್ತದೆ. ಹಾಗಾಗಿ ಆಗಾಗ ಜ್ಯೂಸ್ ಸೇವಿಸುವುದು ಬಹಳ ಒಳ್ಳೆಯದು. ಇವತ್ತೊಂದು ನಾವಿಲ್ಲಿ ಕಲರ್ ಫುಲ್ ಆಗಿರುವ ಜ್ಯೂಸ್ ಒಂದನ್ನು ತಿಳಿಸಿಕೊಡುತ್ತಿದ್ದೇವೆ. ಅದುವೇ ಕೊಕಂ ಜ್ಯೂಸ್.

Kokum juice

ಕೋಕಂ ನ್ನು ಪುನರ್ಪುಳಿ ಎಂದೂ ಕೂಡ ಕರೆಯಲಾಗುತ್ತದೆ. ದೇಹದ ಪಿತ್ತಕ್ಕೆ ಉತ್ತಮ ಮದ್ದು ಇದು. ಅತಿಯಾದ ಟೀ ಕುಡಿಯುವ ಅಭ್ಯಾಸವಿರುವವರು ಆಗಾಗ ಈ ಜ್ಯೂಸ್ ಸೇವಿಸುವುದು ದೇಹದ ಆರೋಗ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ತೂಕ ಇಳಿಸುವುದಕ್ಕೆ ಬಯಸುವವರು ಕೂಡ ಈ ಜ್ಯೂಸ್ ಸೇವಿಸುವುದು ಒಳ್ಳೆಯದು.
Kokum juice

Kokum with ginger and pepper juice recipe/ ಶುಂಠಿ, ಕಾಳುಮೆಣಸಿನ ಪುನರ್ಪುಳಿ ಜ್ಯೂಸ್
Kokum with ginger and pepper juice recipe/ ಶುಂಠಿ, ಕಾಳುಮೆಣಸಿನ ಪುನರ್ಪುಳಿ ಜ್ಯೂಸ್
Prep Time
5 Mins
Cook Time
3M
Total Time
8 Mins

Recipe By: Sushma

Recipe Type: Juice

Serves: 2

Ingredients
  • ಬೇಕಾಗುವ ಸಾಮಗ್ರಿಗಳು

    ಕೋಕಂ ಅಥವಾ ಪುನರ್ ಪುಳಿ- ನಾಲ್ಕರಿಂದ ಐದು ಸಿಪ್ಪೆಗಳು

    ನೀರು- ಒಂದು ಲೋಟ

    ಶುಂಠಿ- ಒಂದು ಸ್ಪೂನ್ ರಸ

    ಕಾಳುಮೆಣಸು- ನಾಲ್ಕು ಕಾಳು

    ಉಪ್ಪು- ಚಿಟಿಕೆ

    ಸಕ್ಕರೆ- ನಾಲ್ಕು ಸ್ಪೂನ್

    ಏಲಕ್ಕಿ- ಒಂದು

    ಲವಂಗ - ಒಂದು

Red Rice Kanda Poha
How to Prepare
  • ಮಾಡುವ ವಿಧಾನ

    ಪುನರ್ ಪುಳಿ ಸಿಪ್ಪೆಗಳನ್ನು ಅರ್ಧಗಂಟೆ ನೀರಿನಲ್ಲಿ ನೆನಸಿಡಿ. ನಾಲ್ಕು ಸಿಪ್ಪೆಗಳನ್ನು ನೆನಸಿಟ್ಟರೆ ಸಾಕಾಗುತ್ತದೆ.

    ಒಮ್ಮೆ ಜ್ಯೂಸ್ ತಯಾರಿಸಿದ ನಂತರ ಪುನಃ ನೀವು ಆ ಸಿಪ್ಪೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡರೆ ಮತ್ತೊಂದೆರಡು ಬಾರಿ ಜ್ಯೂಸ್ ತಯಾರಿಸುವುದಕ್ಕೆ ಆ ಸಿಪ್ಪೆಗಳು ಯೋಗ್ಯವಾಗಿಯೇ ಇರುತ್ತದೆ.

    ಕೆಂಬಣ್ಣಕ್ಕೆ ಬಂದ ನೀರನ್ನು ಜ್ಯೂಸ್ ತಯಾರಿಕೆಗೆ ಬಳಸಿ.

    ನಂತರ ಅದಕ್ಕೆ ಹಸಿ ಶುಂಠಿಯನ್ನು ಜಜ್ಜಿ ರಸ ತೆಗೆದು ಒಂದು ಸ್ಪೂನ್ ಸೇರಿಸಿ. (ಪ್ರಿಸರ್ವ್ ಮಾಡಿಟ್ಟ ಶುಂಠಿ ಪೇಸ್ಟ್ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಂಠಿ ಪುಡಿ ಅಷ್ಟು ಯೋಗ್ಯವಲ್ಲ. ರುಚಿ ಕೆಡಿಸುತ್ತದೆ ಎಂಬುದು ನೆನಪಿರಲಿ.)

    ಕಾಳುಮೆಣಸು,ಏಲಕ್ಕಿ ಮತ್ತು ಲವಂಗವನ್ನು ಕುಟ್ಟಿ ಪುಡಿ ಮಾಡಿ ಸೇರಿಸಿ.

    ಚಿಟಿಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ ಕರಗುವಂತೆ ಮಾಡಿದರೆ ಜ್ಯೂಸ್ ಸಿದ್ಧ.

Instructions
  • ನೆನಪಿಡಿ- ಮಾರುಕಟ್ಟೆಯಲ್ಲಿ ಕೋಕಂ ಪುಡಿಯೂ ಲಭ್ಯವಿರುತ್ತದೆ. ಆದರೆ ಅದು ಜ್ಯೂಸ್ ಗೆ ಅಷ್ಟು ಉತ್ತಮವಾಗುವುದಿಲ್ಲ. ಹಾಗಾಗಿ ನಿಮಗೆ ಒಣಗಿಸಿದ ಕೋಕಂ ಸಿಪ್ಪೆಗಳು ಸಿಕ್ಕರೆ ಖರೀದಿಸಿ ಅಥವಾ ತಾಜಾ ಹಣ್ಣುಗಳು ಸಿಕ್ಕರೆ ಬೇಸಿಗೆಯಲ್ಲಿ ಖರೀದಿಸಿ ಒಣಗಿಸಿ ಇಟ್ಟುಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ತಾಜಾತನಕ್ಕೆ ಬೆಲೆ ನೀಡುವುದು ಒಳ್ಳೆಯದು. ಆರೋಗ್ಯಕ್ಕೆ ಅನೇಕ ರೀತಿಯ ಲಾಭ ಮಾಡುವ ಇವುಗಳ ಸಂಗ್ರಹ ಪ್ರತಿಯೊಂದು ಮನೆಯಲ್ಲೂ ಇದ್ದರೆ ಪ್ರಿಸರ್ವ್ ಮಾಡಲಾಗಿರುವ ಜ್ಯೂಸ್ ಗಳನ್ನು ಖರೀದಿಸುವುದು ತಪ್ಪುತ್ತದೆ. ಮಕ್ಕಳಿಗೆ ವಾರಕ್ಕೊಮ್ಮೆ ಈ ಜ್ಯೂಸ್ ಮಾಡಿ ಕೊಡುವುದು ಬಹಳ ಒಳ್ಳೆಯದು.
Nutritional Information
  • ಪ್ರೋಟೀನ್: - 0.5g.
  • ಕೊಬ್ಬಿನಾಂಶ: - 0.1g.
  • ಕ್ಯಾಲೋರಿ - 60.
  • ಕಾರ್ಬೋಹೈಡ್ರೇಟ್: - 14.3g
[ 4 of 5 - 53 Users]
Story first published: Wednesday, September 16, 2020, 10:45 [IST]
X
Desktop Bottom Promotion