Latest Updates
-
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ
ಕೇರಳ ಶೈಲಿಯ ಬಾಳೆಕಾಯಿ ಚಿಪ್ಸ್ ಮಾಡುವುದು ಹೇಗೆ?
ನೀವು ಕೇರಳ ಬನಾನ ಚಿಪ್ಸ್ (ಬಾಳೆಕಾಯಿ ಚಿಪ್ಸ್) ಟೇಸ್ಟ್ ಮಾಡಿದ್ದರೆ ಖಂಡಿತ ಅದರ ರುಚಿಗೆ ಮಾರು ಹೋಗಿರುತ್ತೀರಿ. ಆಫೀಸ್ನಲ್ಲಿ ಯಾರಾದರೂ ಕೇರಳದವರು ಇದ್ದರೆ ಅವರು ಊರಿಗೆ ಹೋಗಿ ಬರುವಾಗ ಬಾಳೆಕಾಯಿ ಚಿಪ್ಸ್ ಮರೆಯದೆ ತರುವಂತೆ ಹೇಳಿ ಕಳುಹಿಸುತ್ತೀವೆ ಅಲ್ವಾ?
ಬಾಳೆಕಾಯಿ ಚಿಪ್ಸ್ ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲಿ ನಿಮಗೆ ಸಿಗುತ್ತದೆ, ಆದರೆ ಕೇರಳದ ಅಂಗಡಿಗಳಲ್ಲಿ ಸಿಗುವ ರುಚಿಯೇ ಬೇರೆ, ಅದಕ್ಕೆ ಕಾರಣ ಅವರು ಬಳಸುವ ಬಾಳೆಕಾಯಿ ಹಾಗೂ ಎಣ್ಣೆ.

ಕೇರಳದಲ್ಲಿ ನೇಂದ್ರ ಬಾಳೆಹಣ್ಣು ಹೆಚ್ಚಾಗಿ ಬಳಸುತ್ತಾರೆ. ಈ ಬಾಳೆಹಣ್ಣಿನ ಬಗ್ಗೆ ನಮ್ಮಲ್ಲಿ ಅನೇಕರಿಗೆ ಪರಿಚಯನೇ ಇರಲ್ಲ. ಇದು ಸ್ವಲ್ಪ ದೊಡ್ಡ ಗಾತ್ರದ ಬಾಳೆಹಣ್ಣು. ಇದು ಕಾಯಿ ಇರುವಾಗ ಕತ್ತರಿಸಿ, ಶುದ್ಧ ತೆಂಗಿನೆಣ್ಣೆಯಲ್ಲಿ ಕರಿದು ಬಾಳೆಕಾಯಿ ಚಿಪ್ಸ್ ತಯಾರಿಸುವುದರಿಂದ ಅದರ ರುಚಿ ಭಿನ್ನವಾಗಿರುತ್ತದೆ.
ನೀವು ಕೇರಳ ರುಚಿಯ ಬಾಳೆಕಾಯಿ ಚಿಪ್ಸ್ ಸವಿಯ ಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ:
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
1 ಕೆಜಿ ನೇಂದ್ರ ಬಾಳೆಕಾಯಿ (3-4 ಬರುತ್ತೆ)
(ಬೆಂಗಳೂರಿನಲ್ಲಿ ಮೋರ್ ರಿಲಾಯನ್ಸ್ನಲ್ಲಿ ಸಿಗುತ್ತದೆ, ಇನ್ನು ಬಾಳೆಮಂಡಿಗಳಲ್ಲಿ ಕೇಳಿದರೆ ಸಿಗಬಹುದು)
ತೆಂಗಿನೆಣ್ಣೆ ಅರ್ಧ ಲೀಟರ್
1 ಚಮಚ ಖಾರದ ಪುಡಿ
1/2 ಚಮಚ ಅರಿಶಿಣ ಪುಡಿ ಒಂದೂವರೆ ಚಮಚ ಉಪ್ಪು
3 ಚಮಚನೀರು
-
ಮಾಡುವ ವಿಧಾನ:
* ಬಾಳೆಕಾಯಿ ಸಿಪ್ಪೆ ಸುಲಿದು ಅದನ್ನು ತೆಳುವಾಗಿ ವೃತ್ತಾಕಾರವಾಗಿ ಕತ್ತರಿಸಿ.
* ಒಂದು ದೊಡ್ಡ ಬೌಲ್ನಲ್ಲಿ ಉಪ್ಪು, ನೀರು, ಅರಿಶಿಣ ಹಾಕಿ ಮಿಶ್ರ ಮಾಡಿ ನಂತರ ಬಾಳೆಕಾಯಿ ಹಾಕಿ ಮಿಶ್ರ ಮಾಡಿ ಬದಿಯಲ್ಲಿಡಿ.
* ದಪ್ಪ ತಳವಿರುವ ಬಾಣಲಿಯಲ್ಲಿ ತೆಂಗಿನೆಣ್ಣೆ ಹಾಕಿ ಕುದಿಸಿ (ಬಾಣಲಿ ದೊಡ್ಡದಿದ್ದರೆ ಒಂದು ಲೀಟರ್ ಎಣ್ಣೆ ಹಾಕಿ).
* ಈಗ ಬಾಳೆಕಾಯಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಗರಿ-ಗರಿಯಾಗುವವರೆಗೆ (4-5 ನಿಮಿಷ) ಕರಿದು ನಂತರ ಎಣ್ಣೆಯಿಂದ ತೆಗೆದು ಪೇಪರ್ ಟವಲ್ನಲ್ಲಿ ಹಾಕಿ, ನಂತರ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
- ಬಾಳೆಕಾಯಿ ಚಿಪ್ಸ್ ಅಧಿಕ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವರ್ಷದವರೆಗೆ 6 ತಿಂಗಳು ಇಟ್ಟು ಬಳಸಬಹುದು.
- ಕ್ಯಾಲೋರಿ: - 89ಗ್ರಾಂ
- ಕೊಬ್ಬು: - 0.3 ಗ್ರಾಂ
- ಪ್ರೊಟೀನ್: - 1.1 ಗ್ರಾಂ
- ಕಾರ್ಬ್ಸ್: - 22.8 ಗ್ರಾಂ
- ನಾರಿನಂಶ: - 2.6 ಗ್ರಾಂ



Click it and Unblock the Notifications