ಗಣೇಶ ಚತುರ್ಥಿ ವಿಶೇಷ: ಕಪ್ಪು ಕಡ್ಲೆ ಕಡಿ ರೆಸಿಪಿ

By: Divya Pandith
Subscribe to Boldsky

ಕಡ್ಲೆ ಪಾಕವಿಧಾನದಲ್ಲಿ, ಆರೋಗ್ಯ ವಿಚಾರದಲ್ಲಿ, ಔಷಧೀಯ ರೂಪದಲ್ಲಿ ಹಾಗೂ ಸಾಂಪ್ರದಾಯಿಕವಾಗಿ ಪವಿತ್ರವಾದ ಸ್ಥಾನವನ್ನು ಪಡೆದುಕೊಂಡಿದೆ. ಹೆಚ್ಚು ಪೋಷಕಾಂಶ ಗುಣವನ್ನು ಹೊಂದಿರುವ ಕಪ್ಪು ಕಡ್ಲೆ ಗಣಪತಿ, ಲಕ್ಷ್ಮಿ ಸೇರಿದಂತೆ ಅನೇಕ ದೇವತೆಗಳ ಇಷ್ಟ ಪದಾರ್ಥ. ಇದರಿಂದ ವಿವಿಧ ಬಗೆಯ ತಿಂಡಿ, ಅಡುಗೆ, ಹುಸುಳಿಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ರಾಜಸ್ಥಾನಿ ಶೈಲಿಯ ಕಢಿಯು ಒಂದು.

ಕಡಿಯು ಸಾಮಾನ್ಯವಾಗಿ ದಪ್ಪದಾದ ಕೆನೆ ಮೊಸರು-ಆಧಾರಿತ ಗ್ರೇವಿ/ರಸ. ಆದರೆ ಕಪ್ಪು ಕಡ್ಲೆ ಕಡಿ ಮೊಸರು ಆಧಾರಿತ ಪಾಕವಿಧಾನವಲ್ಲ. ಬದಲಿಗೆ ಕಡ್ಲೆ ಮತ್ತು ಕಡಲೇ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಆಕರ್ಷಣೀಯ, ರುಚಿಕರ ಮತ್ತು ಆರೋಗ್ಯ ಪೂರ್ಣವಾದ ಈ ಕಢಿಯನ್ನು ರೊಟ್ಟಿ, ಚಪಾತಿ ಹಾಗೂ ಅನ್ನದ ಜೊತೆಯೂ ಸವಿಯಬಹುದು. ಜೋಧ್‌ಪುರಿಯ ವಿಶೇಷ ಭಕ್ಷ್ಯವಾದ ಇದನ್ನು ನೀವು ಸವಿಯಬೇಕು ಹಾಗೂ ತಯಾರಿಸಬೇಕು ಎಂದೆನಿಸಿದರೆ ನಾವಿಲ್ಲಿ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.

kala chana kadhi recipe
ಕಾಲಾ ಚನ್ನಾ ಕಡಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಕಾಲಾ ಚನ್ನಾ ಕಡಿ ರೆಸಿಪಿ | ಕಪ್ಪು ಚನ್ನಾ ಕಡಿ ರೆಸಿಪಿ | ಜೋಧ್‌ಪುರಿ ಕಾಲಾ ಚನ್ನಾ ಕಡಿ
ಕಾಲಾ ಚನ್ನಾ ಕಡಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಕಾಲಾ ಚನ್ನಾ ಕಡಿ ರೆಸಿಪಿ | ಕಪ್ಪು ಚನ್ನಾ ಕಡಿ ರೆಸಿಪಿ | ಜೋಧ್‌ಪುರಿ ಕಾಲಾ ಚನ್ನಾ ಕಡಿ
Prep Time
8 Hours
Cook Time
40M
Total Time
8 Hours 40 Mins

Recipe By: ಮೀನಾ ಭಂಡಾರಿ

Recipe Type: ಪ್ರಮುಖ ಭಕ್ಷ್ಯ

Serves: 4 ಮಂದಿಗೆ

Ingredients
 • ತುಪ್ಪ - 1 1/2 ಟೇಬಲ್ ಚಮಚ

  ಇಂಗು - ಒಂದು ಚಿಟಕಿ

  ಜೀರಿಗೆ - 1 ಟೀ ಚಮಚ

  ಬೇಯಿಸಿದ ಕಪ್ಪು ಕಡ್ ಲೆ - 1 ಕಪ್

  ಕಡ್ಲೆ ಬೇಯಿಸಿಕೊಂಡ ನೀರು - 1 ಬೌಲ್

  ಅರಿಶಿನ - 1/2 ಚಮಚ

  ಕಾಶ್ಮೀರಿ ಖಾರದ ಪುಡಿ - 3ಟೀ ಚಮಚ

  ಕೊತ್ತರಿ ಪುಡಿ/ಧನಿಯಾ ಪುಡಿ - 3 ಟೀ ಚಮಚ

  ನೀರು 2 1/2 ಕಪ್

  ರುಚಿಗೆ ತಕ್ಕಷ್ಟು ಉಪ್ಪು

  ಕಡಲೇ ಹಿಟ್ಟು - 4 ಟೇಬಲ್ ಚಮಚ

  ಗರಮ್ ಮಸಾಲ - 1 ಟೀ ಚಮಚ

Red Rice Kanda Poha
How to Prepare
 • 1. ದಪ್ಪ ತಳದ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.

  2. ಜೀರಿಗೆ ಹಾಗೂ ಇಂಗನ್ನು ಹಾಕಿ. ಜೀರಿಗೆ ಕಂದು ಬಣ್ಣ ಬರುವಷ್ಟು ಹುರಿಯ ಬೇಕು.

  3. ನಂತರ ಬೇಯಿಸಿಕೊಂಡ ಕಡ್ಲೆಯನ್ನು ಬೆರೆಸಿ.

  4. ಎರಡು ನಿಮಿಷದ ವರೆಗೆ ಚೆನ್ನಾಗಿ ತಿರುವಿ.

  5. ಅರಿಶಿನ ಪುಡಿ ಮತ್ತು ಕಾಶ್ಮೀರಿ ಖಾರದ ಪುಡಿಯನ್ನು ಸೇರಿಸಿ.

  6. ನಂತರ ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  7. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ.

  8. ಅರ್ಧ ಕಪ್ ನೀರನ್ನು ಬೆರೆಸಿ 3-5 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.

  9. 3-5 ಚಮಚದಷ್ಟು ಮೇಲಿರುವ ಗ್ರೇವಿಯನ್ನು ತೆಗೆದು, ನಂತರದ ಬಳಕೆಗೆಗಾಗಿ ಪಕ್ಕಕ್ಕಿಡಿ.

  10. ಉಪ್ಪನ್ನು ಬೆರೆಸಿ, ಸಣ್ಣ ಉರಿ ಮಾಡಿಕೊಂಡು ಚೆನ್ನಾಗಿ ತಿರುವಿ.

  11. ಈ ನಡುವೆಯೇ, ಕಡ್ಲೆ ಬೇಯಿಸಿಕೊಂಡ ನೀರನ್ನು ತೆಗೆದುಕೊಳ್ಳಿ.

  12. ಇದಕ್ಕೆ ಕಡಲೇ ಹಿಟ್ಟನ್ನು ಬೆರೆಸಿ. ಗಂಟಾಗದಂತೆ ಚೆನ್ನಾಗಿ ಮಿಶ್ರಗೊಳಿಸಿ.

  13. ಕಪ್ಪು ಕಡ್ಲೆ ಮಿಶ್ರಣದ ಪಾತ್ರೆಗೆ ಸುರಿಯಿರಿ.

  14. ನಂತರ ಗಂಟಾಗದಂತೆ ಮತ್ತು ತಳ ಹಿಡಿಯದಂತೆ ನಿರಂತರವಾಗಿ ತಿರುವುತ್ತಿರಿ.

  15. ಇದಕ್ಕೆ 2 ಕಪ್ ನೀರನ್ನು ಬೆರೆಸಿ 6-6 ನಿಮಿಷ ಬೇಯಲು ಬಿಡಿ.

  16. ಚೆನ್ನಾಗಿ ಕುದಿಯಲು ಆರಂಭವಾದಮೇಲೆ ಗರಮ್ ಮಸಾಲವನ್ನು ಸೇರಿಸಿ.

  17. ನಂತರ ಇನ್ನೊಂದು ನಿಮಿಷ ಬೇಯಲು ಬಿಡಿ.

  18. ನಂತರ ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ.

  19. ಮೇಲಿರುವ ಗ್ರೇವಿಯನ್ನು ತೆಗೆದು ಅಲಂಕರಿಸಿ, ಸವಿಯಲು ನೀಡಿ.

Instructions
 • 1. ಕಪ್ಪು ಕಡ್ಲೆಯನ್ನು ಒಂದುರಾತ್ರಿ ಅಥವಾ 6-8 ಗಂಟೆಗಳಕಾಲ ನೆನೆಯಿಟ್ಟಿರಬೇಕು.
 • 2. ಕುಕ್ಕರ್‍ನಲ್ಲಿ ಕಡ್ಲೆಯನ್ನು ಬೇಯಿಸುವಾಗ ಚಿಟಕಿ ಉಪ್ಪನ್ನು ಹಾಕಿ, 8-10 ಸೀಟಿ ಕೂಗುವಷ್ಟು ಬೇಯಿಸಬೇಕು.
 • 3. ಕಡ್ಲೆ ಬೇಯಿಸಿಕೊಂಡ ನೀರನ್ನು ಹಾಗೆಯೇ ತೆಗೆದಿಟ್ಟಿರಬೇಕು. ನಂತರ ಪಾಕವಿಧಾನದ ಬಳಕೆಗೆ ಬೇಕಾಗುವುದು.
 • 4. ಕೊನೆಯಲ್ಲಿ ಗ್ರೇವಿಯನ್ನು ತೆಗೆದು ಸವಿಯಲು ನೀಡುವುದು ಅಲಂಕಾರಕ್ಕಾಗಿ ಮಾಡುವ ಒಂದು ವಿಧಾನ. ಇದು ಆಯ್ಕೆ ಅಷ್ಟೆ.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರಿ - 198 ಕ್ಯಾಲ್
 • ಫ್ಯಾಟ್ - 9 ಗ್ರಾಂ.
 • ಪ್ರೋಟೀನ್ - 6 ಗ್ರಾಂ.
 • ಕಾರ್ಬೋಹೈಡ್ರೇಟ್ - 23 ಗ್ರಾಂ.
 • ಫೈಬರ್ - 2 ಗ್ರಾಂ.
 • ಐರನ್ - ಶೇ.2
 • ವಿಟಮಿನ್ ಎ - ಶೇ. 386

ಸ್ಟೆಪ್ ಬೈ ಸ್ಟೆಪ್ ಕಾಲಾ ಚನ್ನಾ ಕಡಿ ರೆಸಿಪಿ ಮಾಡುವ ವಿಧಾನ

1. ದಪ್ಪ ತಳದ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.

kala chana kadhi recipe

2. ಜೀರಿಗೆ ಹಾಗೂ ಇಂಗನ್ನು ಹಾಕಿ. ಜೀರಿಗೆ ಕಂದು ಬಣ್ಣ ಬರುವಷ್ಟು ಹುರಿಯ ಬೇಕು.

kala chana kadhi recipe
kala chana kadhi recipe
kala chana kadhi recipe

3. ನಂತರ ಬೇಯಿಸಿಕೊಂಡ ಕಡ್ಲೆಯನ್ನು ಬೆರೆಸಿ.

kala chana kadhi recipe

4. ಎರಡು ನಿಮಿಷದ ವರೆಗೆ ಚೆನ್ನಾಗಿ ತಿರುವಿ.

kala chana kadhi recipe

5. ಅರಿಶಿನ ಪುಡಿ ಮತ್ತು ಕಾಶ್ಮೀರಿ ಖಾರದ ಪುಡಿಯನ್ನು ಸೇರಿಸಿ.

kala chana kadhi recipe
kala chana kadhi recipe

6. ನಂತರ ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

kala chana kadhi recipe
kala chana kadhi recipe

7. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ.

kala chana kadhi recipe

8. ಅರ್ಧ ಕಪ್ ನೀರನ್ನು ಬೆರೆಸಿ 3-5 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.

kala chana kadhi recipe
kala chana kadhi recipe

9. 3-5 ಚಮಚದಷ್ಟು ಮೇಲಿರುವ ಗ್ರೇವಿಯನ್ನು ತೆಗೆದು, ನಂತರದ ಬಳಕೆಗೆಗಾಗಿ ಪಕ್ಕಕ್ಕಿಡಿ.

kala chana kadhi recipe

10. ಉಪ್ಪನ್ನು ಬೆರೆಸಿ ಸಣ್ಣ ಉರಿ ಮಾಡಿಕೊಂಡು ಚೆನ್ನಾಗಿ ತಿರುವಿ.

kala chana kadhi recipe
kala chana kadhi recipe
kala chana kadhi recipe

11. ಈ ನಡುವೆಯೇ ಕಡ್ಲೆ ಬೇಯಿಸಿಕೊಂಡ ನೀರನ್ನು ತೆಗೆದುಕೊಳ್ಳಿ.

kala chana kadhi recipe

12. ಇದಕ್ಕೆ ಕಡಲೇ ಹಿಟ್ಟನ್ನು ಬೆರೆಸಿ. ಗಂಟಾಗದಂತೆ ಚೆನ್ನಾಗಿ ಮಿಶ್ರಗೊಳಿಸಿ.

kala chana kadhi recipe
kala chana kadhi recipe

13. ಕಪ್ಪು ಕಡ್ಲೆ ಮಿಶ್ರಣದ ಪಾತ್ರೆಗೆ ಸುರಿಯಿರಿ.

kala chana kadhi recipe

14. ನಂತರ ಗಂಟಾಗದಂತೆ ಮತ್ತು ತಳ ಹಿಡಿಯದಂತೆ ನಿರಂತರವಾಗಿ ತಿರುವುತ್ತಿರಿ.

kala chana kadhi recipe

15. ಇದಕ್ಕೆ 2 ಕಪ್ ನೀರನ್ನು ಬೆರೆಸಿ 6-6 ನಿಮಿಷ ಬೇಯಲು ಬಿಡಿ.

kala chana kadhi recipe
kala chana kadhi recipe

16. ಚೆನ್ನಾಗಿ ಕುದಿಯಲು ಆರಂಭವಾದಮೇಲೆ ಗರಮ್ ಮಸಾಲವನ್ನು ಸೇರಿಸಿ.

kala chana kadhi recipe
kala chana kadhi recipe

17. ನಂತರ ಇನ್ನೊಂದು ನಿಮಿಷ ಬೇಯಲು ಬಿಡಿ.

kala chana kadhi recipe

18. ನಂತರ ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ.

kala chana kadhi recipe

19. ಮೇಲಿರುವ ಗ್ರೇವಿಯನ್ನು ತೆಗೆದು ಅಲಂಕರಿಸಿ ಸವಿಯಲು ನೀಡಿ.

kala chana kadhi recipe
kala chana kadhi recipe
[ 5 of 5 - 83 Users]
Story first published: Thursday, August 24, 2017, 9:47 [IST]
Subscribe Newsletter