For Quick Alerts
ALLOW NOTIFICATIONS  
For Daily Alerts

ಜಾಯಿಕಾಯಿ ಸಿಪ್ಪೆಯ ಉಪ್ಪಿನಕಾಯಿ ರೆಸಿಪಿ

Posted By:
|

ಉಪ್ಪಿನಕಾಯಿ ಕಂಪೆನಿಯೊಂದು ಹೇಗೆ ಉಪ್ಪಿನಕಾಯಿ ತಯಾರಿಸುತ್ತದೆ ಎಂದು ಟಿವಿ ಚಾನಲ್ ವೊಂದರಲ್ಲಿ ರಹಸ್ಯ ಕಾರ್ಯಾಚರಣೆಯ ವೀಡಿಯೋ ನೋಡಿದ ಮೇಲೆ ಜೀವಮಾನದಲ್ಲಿ ಯಾವತ್ತೂ ಕೂಡ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಉಪ್ಪಿನಕಾಯಿಯನ್ನು ಖರೀದಿಸಲೇಬಾರದು ಎಂದೆನಿಸಿತ್ತು. ಹಾಗಾಗಿ ಆದಷ್ಟು ಮನೆಯಲ್ಲೇ ಉಪ್ಪಿನಕಾಯಿ ತಯಾರಿಸಿಕೊಳ್ಳುವುದು ಬಹಳ ಒಳ್ಳೆಯದು.

ಉಪ್ಪಿನಕಾಯಿ ಎಂದಾಕ್ಷಣ ಕೇವಲ ಮಾವಿನಕಾಯಿ,ನಿಂಬೆಕಾಯಿ ಅಂದುಕೊಳ್ಳಬೇಡಿ. ನಮ್ಮ ಪ್ರಕೃತಿಯಲ್ಲಿ ಉಪ್ಪಿನಕಾಯಿ ಯೋಗ್ಯ ಹಲವು ಆಹಾರ ಪದಾರ್ಥಗಳಿವೆ. ಅವುಗಳಲ್ಲಿ ಜಾಯಿಕಾಯಿ ಸಿಪ್ಪೆಗಳು ಕೂಡ ಒಂದು.

ಸ್ವಲ್ಪ ಒಗರು, ಸ್ವಲ್ಪ ಖಾರ,ಸ್ವಲ್ಪ ಹುಳಿ ಅಂಶದಿಂದ ಕೂಡಿರುವ ಈ ಸಿಪ್ಪೆಗಳಿಂದ ಆರೋಗ್ಯಕರವಾದ ಉಪ್ಪಿನಕಾಯಿಯನ್ನು ತಯಾರಿಸಿಕೊಳ್ಳಬಹುದು. ಹಾಗಾದ್ರೆ ಜಾಯಿಕಾಯಿ ಸಿಪ್ಪೆಯ ಉಪ್ಪಿನಕಾಯಿ ತಯಾರಿಸುವುದು ಹೇಗೆ ನೋಡೋಣ ಬನ್ನಿ.

Netmug Peel Pickle Recipe/ ಜಾಯಿಕಾಯಿ ಸಿಪ್ಪೆಯ ಉಪ್ಪಿನಕಾಯಿ ರೆಸಿಪಿ
Netmug Peel Pickle Recipe/ ಜಾಯಿಕಾಯಿ ಸಿಪ್ಪೆಯ ಉಪ್ಪಿನಕಾಯಿ ರೆಸಿಪಿ
Prep Time
15 Mins
Cook Time
5M
Total Time
20 Mins

Recipe By: Sushma

Recipe Type: Pickle

Serves: 100

Ingredients
 • ಬೇಕಾಗುವ ಸಾಮಗ್ರಿಗಳು:

  ಜಾಯಿಕಾಯಿ ಸಿಪ್ಪೆಗಳು- 30

  ಉಪ್ಪು- 250 ಗ್ರಾಂ

  ಸಾಸಿವೆ- ನಾಲ್ಕು ಟೀ ಸ್ಪೂನ್

  ಇಂಗು- ಎರಡು ಹುಣಸೆ ಬೀಜದ ಗಾತ್ರ

  ಕೆಂಪು ಮೆಣಸಿನಪುಡಿ - 250 ಗ್ರಾಂ

  ಎಣ್ಣೆ- 100 ಗ್ರಾಂ

Red Rice Kanda Poha
How to Prepare
 • ಮಾಡುವ ವಿಧಾನ:

  ಜಾಯಿಕಾಯಿ ಸಿಪ್ಪೆಯನ್ನು ತೊಳೆದು ಒಂದು ಬಿಳಿಯ ಬಟ್ಟೆಯ ಮೇಲೆ ಹರವಿಡಿ.

  ಅದರ ನೀರು ಒಣಗುವವರೆ ಕಾಯಿರಿ.

  ನಂತರ ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ.

  ಅದಕ್ಕೆ ಉಪ್ಪು ಹಾಕಿ ಕೈಯಾಡಿಸಿ.

  ಉಪ್ಪಿನಕಾಯಿ ಆಗಿರುವುದರಿಂದಾಗಿ ಅಧಿಕವೇ ಉಪ್ಪು ಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

  ನಂತರ ಅದಕ್ಕೆ ಖಾರಕ್ಕೆ ಅನುಗುಣವಾಗಿ ಅಚ್ಚಖಾರದಪುಡಿಯನ್ನು ಸೇರಿಸಿ.

  ನಂತರ ಎಣ್ಣೆ ಹಾಕಿ ಸಾಸಿವೆ, ಇಂಗಿನ ಒಗ್ಗರಣೆ ಮಾಡಿ.

  ಮಿಶ್ರಣವನ್ನು ಚೆನ್ನಾಗಿ ಕಲಸಿ.

  ಒಂದೆರಡು ತಾಸಿನ ನಂತರ ಗಾಜಿನ ಇಲ್ಲವೇ ಪಿಂಗಾಣಿ ಬಾಟಲಿಗೆ ಉಪ್ಪಿನಕಾಯಿಯನ್ನು ತುಂಬಿಸಿ ಇಡಿ.

  ಇವೆರಡೂ ಇಲ್ಲದೆ ಇದ್ದರೆ ಪ್ಲಾಸ್ಟಿಕ್ ಡಬ್ಬಿಯಲ್ಲಿ ತುಂಬಿ ಇಡಿ.

  ಆದರೆ ಡಬ್ಬದಲ್ಲಿ ನೀರಿನ ಪಸೆ ಇರುವಂತಿಲ್ಲ.

  ಉಪ್ಪಿನಕಾಯಿಗೆ ನೀರು ತಗುಲಿದರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.

  ಒಂದು ವಾರದ ನಂತರ ಸವಿಯಲು ಸಿದ್ಧವಾಗಿರುತ್ತದೆ.

Instructions
 • 6 ತಿಂಗಳವರೆಗೂ ಬಳಸಬಹುದಾದ ಉಪ್ಪಿನಕಾಯಿ ಇದಾಗಿರುತ್ತದೆ. ತಂಡಿ ದೇಹ ಪ್ರಕೃತಿಯವರು ಇದನ್ನು ಬಳಸುವುದರಿಂದಾಗಿ ಮಳೆಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದಕ್ಕೆ ನೆರವಾಗುತ್ತದೆ. ಬಾಣಂತಿಯರಿಗೆ ಬಡಿಸುವುದಕ್ಕೆ ಇದು ಉತ್ತಮವಾದ ಉಪ್ಪಿನಕಾಯಿ ಆಗಿದೆ. ಜಾಯಿಕಾಯಿಯ ಸತ್ವಗಳು ನಿಮಗೆ ಇದರಿಂದ ಲಭ್ಯವಾಗುತ್ತದೆ.
Nutritional Information
 • ಪ್ರೊಟೀನ್ - - 6 ಗ್ರಾಂ
 • ಕಾರ್ಬೊಹೈಡ್ರೇಟ್ - - 49 ಗ್ರಾಂ
 • ಪೊಟಾಷಿಯಂ - - 350 ಮಿಲಿಗ್ರಾಂ
 • ಕ್ಯಾಲೊರಿ - - 525
 • ಸೋಡಿಯಂ - - 16ಮಿಲಿಗ್ರಾಂ
[ 4.5 of 5 - 30 Users]
X