For Quick Alerts
ALLOW NOTIFICATIONS  
For Daily Alerts

ಆಹಾ! ಹಲಸಿನ ಪಾಯಸ ಬಲು ರುಚಿ

Posted By:
|

ಇದು ಹಲಸಿನ ಸೀಸನ್. ಹಲಸಿನ ಹಣ್ಣು ಎಂದರೆ ಖಂಡಿತ ಎಲ್ಲರ ಬಾಯಲ್ಲೂ ನೀರೂರುತ್ತದೆ. ತಿಂದಷ್ಟೂ ರುಚಿ ಅನ್ನಿಸೋ ಹಣ್ಣು ಇದು. ಹಸಿದು ಹಲಸು,ಉಂಡು ಮಾವು ಅನ್ನೋ ಗಾದೆ ಮಾತೇ ಇದೆ.

Jackfruit payasa recipe

ಹಲಸಿನ ಹಣ್ಣುಗಳಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಕಡುಬು, ಮುಳ್ಕ ಭಾರೀ ಫೇಮಸ್. ಅದರ ಜೊತೆಗೆ ಹಲಸಿನ ಹಣ್ಣಿನ ಪಾಯಸ ನಿಜಕ್ಕೂ ಬೊಂಬಾಟ್ ಅನ್ನಿಸುವ ರೆಸಿಪಿ. ನಿಮಗೆ ಹಲಸಿನ ಹಣ್ಣಿನಿಂದ ಪಾಯಸ ತಯಾರಿಸುವುದು ಹೇಗೆ ಎಂಬುದು ತಿಳಿಯದೇ ಇದ್ದಲ್ಲಿ ಈ ಲೇಖನ ಓದಿ. ನಿಮ್ಮ ಅಡುಗೆ ಪ್ರಯೋಗ ಶಾಲೆಯಲ್ಲಿ ಖಂಡಿತ ಪ್ರಯತ್ನಿಸಬಹುದು.
Jackfruit payasa recipe/ ಹಲಸಿನ ಪಾಯಸ
Jackfruit payasa recipe/ ಹಲಸಿನ ಪಾಯಸ
Prep Time
15 Mins
Cook Time
15M
Total Time
30 Mins

Recipe By: Sushma

Recipe Type: veg

Serves: 4

Ingredients
  • ಬೇಕಾಗುವ ಸಾಮಗ್ರಿಗಳು-

    ಹಲಸಿನ ಹಣ್ಣು- ನಾಲ್ಕು ಬೌಲ್

    ಕಡಲೆಬೇಳೆ - ಒಂದು ಬೌಲ್

    ಬೆಲ್ಲ - ಒಂದು ಬೌಲ್

    ತೆಂಗಿನ ಹಾಲು - ಮಧ್ಯಮ ಗಾತ್ರದ ಒಂದು ತೆಂಗಿನ ಕಾಯಿ

    ಏಲಕ್ಕಿ ಪುಡಿ- ಚಿಟಿಕೆ

    ಉಪ್ಪು- ಚಿಟಿಕೆ

Red Rice Kanda Poha
How to Prepare
  • ಮಾಡುವ ವಿಧಾನ-

    ಕಡಲೆಬೇಳೆಯನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.ಕುಕ್ಕರ್ ನಲ್ಲಿ ಬೇಯಿಸಿದರೆ ಬೇಗನೆ ಕಡಲೆಬೇಳೆ ಬೇಯುತ್ತದೆ. ಮೂರು ವಿಷಿಲ್ ಬೇಕಾಗಬಹುದು.

    ಹಲಸಿನ ಹಣ್ಣನ್ನ ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

    ಹಲಸಿನ ಹಣ್ಣಿಗೆ ಬೆಲ್ಲ ಹಾಕಿ ಒಂದು ಕುದಿ ಬರುವವರೆಗೆ ಬೇಯಿಸಿಕೊಳ್ಳಿ.

    ಇದಕ್ಕೆ ತೆಂಗಿನ ಕಾಯಿಯನ್ನು ರುಬ್ಬಿಕೊಂಡು ಅದರ ಹಾಲನ್ನು ತೆಗೆದು ಸೇರಿಸಿ.

    ನಂತರ ಬೇಯಿಸಿಕೊಂಡ ಕಡಲೆಬೇಳೆ ಸೇರಿಸಿ, ಚಿಟಿಕೆ ಉಪ್ಪು ಹಾಕಿ ಕುದಿಸಿ.

    ಪಾಯಸದ ಘಮಕ್ಕೆ ಏಲಕ್ಕಿ ಪುಡಿ ಹಾಕಿದರೆ ಬಿಸಿಬಿಸಿ ಹಲಸಿನ ಹಣ್ಣಿನ ಪಾಯಸ ಸವಿಯಲು ಸಿದ್ಧವಾಗುತ್ತದೆ.

Instructions
  • ಹಲಸಿನ ಹಣ್ಣಿನ ಸೇವನೆಯಿಂದ ಹಲವು ಲಾಭಗಳಿವೆ. ಸೀಸನಲ್ ಫ್ರೂಟ್ ಆಗಿರುವ ಇದು ವಿವಿಧ ಖಾದ್ಯಗಳ ತಯಾರಿಕೆಗೆ ಸಹಕಾರಿ ಹಲಸಿನಲ್ಲಿ ಗಾಯ ಗುಣಮುಖಗೊಳಿಸುವ ಗುಣಗಳಿವೆ.ಚರ್ಮ, ಮೂಳೆ,ಸೇರಿದಂತೆ ದೇಹದ ಹಲವು ಅಂಗಗಳಿಗೆ ಇದು ಹೆಚ್ಚಿನ ಆರೋಗ್ಯ ಒದಗಿಸುವುದಕ್ಕೆ ನೆರವಾಗುತ್ತದೆ.
Nutritional Information
  • ಕಾರ್ಬೋಹೈಡ್ರೇಟ್ಸ್ - 38.36 g
  • ಡಯಟರಿ ಫೈಬರ್ - 2.5 g
  • ಸಕ್ಕರೆ - 31.48 g
  • ಕ್ಯಾಲೋರಿಗಳು - 157
  • ಮೆಗ್ನೇಷಿಯಂ - 48 mg
  • ವಿಟಮಿನ್ ಸಿ - 22.6 mg
[ 4.5 of 5 - 99 Users]
X
Desktop Bottom Promotion