Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಕೆಂಗಾರ್ ಎಲೆಯಲ್ಲಿ ಹಲಸಿನ ಕಡುಬು
ಪ್ರಕೃತಿಯಲ್ಲಿ ಅನೇಕ ರೀತಿಯ ಪರಿಮಳಯುಕ್ತ ಎಲೆಗಳಿವೆ. ಹಿಂದೆಲ್ಲಾ ಆ ಎಲೆಗಳೇ ಅದೆಷ್ಟೋ ಅಡುಗೆಗೆ ನೆರವು ನೀಡುತ್ತಿದ್ದವು. ಪ್ಲೇಟ್ ಗಳಿಲ್ಲದ ಕಾಲದಲ್ಲಿ ದೊಡ್ಡದೊಡ್ಡ ಎಲೆಗಳೆ ಆಹಾರ ಸರಬರಾಜಿಗೆ ಉಪಯೋಗಿಸಲಾಗುತ್ತಿತ್ತು.
ಉದಾಹರಣೆಗೆ ಬಾಳೆ ಎಲೆಯನ್ನೆ ತೆಗೆದುಕೊಳ್ಳಿ, ಅದೆಷ್ಟೋ ಸಿಹಿತಿಂಡಿಗಳನ್ನು
ಇದರಲ್ಲಿ ಮಾಡಲಾಗುತ್ತದೆ. ಊಟ ಬಡಿಸಲು ಇಂದಿಗೂ ಬಾಳೆಎಲೆಗೆ ಪ್ರಮುಖ
ಸ್ಥಾನ.

ಎಲೆಯನ್ನು ಪ್ಯಾಕೆಟ್ ನಂತೆ ಮಾಡಿ ಅಪ್ಪಚ್ಚಿ ತಯಾರಿಸುವುದು ಅಡುಗೆಯಲ್ಲಿರುವ ಒಂದು ಪರಿಪಾಠ. ಅದಕ್ಕಾಗಿ ಬಾಳೆಎಲೆ, ಅರಿಶಿನದ ಎಲೆ ಇತ್ಯಾದಿ ಅನೇಕ ಎಲೆಗಳನ್ನು ಬಳಸಲಾಗುತ್ತದೆ. ಅದ್ರಲ್ಲೂ ಅರಿಶಿನದೆಲೆಯ ಕಡುಬು ಎಲ್ಲರಿಗೂ ಪರಿಚಿತ. ಹೀಗೆ ಅರಿಶಿನದ ಎಲೆಯಂತೆಯೇ ವಿಭಿನ್ನ ಪರಿಮಳ ಹೊಂದಿರುವ ಮತ್ತೊಂದು ಎಲೆ ಕೆಂಗಾರ್ ಎಲೆ.

ಪರಾವಲಂಬಿ ಸಸ್ಯವಾಗಿರುವ ಇದು ಬೇರೆ ಮರಕ್ಕೆ ಅಪ್ಪಿಕೊಂಡಂತೆ ಹಬ್ಬುತ್ತದೆ. ವಿಶೇಷ ಪರಿಮಳದ ಈ ಎಲೆಯನ್ನು ಕಡುಬು ತಯಾರಿಸುವುದಕ್ಕೆ ಬಳಸಲಾಗುತ್ತದೆ. ಇದೀಗ ಹಲಸಿನ ಸೀಸನ್. ಹಲಸಿನ ಕಡುಬನ್ನು ಕೆಂಗಾರ್ ಎಲೆಯಲ್ಲಿ ತಯಾರಿಸುವುದು ಕರಾವಳಿ ಪ್ರದೇಶದಲ್ಲಿ ಭಾರೀ ಫೇಮಸ್..


Recipe By: Sushma
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
ಹಲಸಿನ ಹಣ್ಣು - ಮೂರು ಬೌಲ್
ಅಕ್ಕಿ - ಒಂದು ಬೌಲ್
ತೆಂಗಿನತುರಿ- ಒಂದು ಬೌಲ್
ಬೆಲ್ಲ - ಒಂದು ಬೌಲ್
ಉಪ್ಪು - ರುಚಿಗೆ ತಕ್ಕಷ್ಟು
-
ಮಾಡುವ ವಿಧಾನ -
ಅಕ್ಕಿಯನ್ನು ಎರಡರಿಂದ ಮೂರು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ಮಿಕ್ಸಿಯಲ್ಲಿ ಹಲಸಿನ ಹಣ್ಣುಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಅದಕ್ಕೆ ತೆಂಗಿನತುರಿ, ಬೆಲ್ಲ ಸೇರಿಸಿ ರುಬ್ಬಿ.
ನಂತರ ಅಕ್ಕಿಯನ್ನು ಸೇರಿಸಿ ತರಿತರಿ ಕಡಿಕಡಿಯಾಗುವಂತೆ ರುಬ್ಬಿ.
ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಾಡಿ.
ಮಿಶ್ರಣವನ್ನು ಎರಡು ನಿಮಿಷ ಹಾಗೆಯೇ ಬಿಡಿ.
ಮಿಶ್ರಣವು ಇಡ್ಲಿ ಹಿಟ್ಟಿನಂತೆ ಗಟ್ಟಿಯಾಗಿರಬೇಕು.
ನಂತರ ಕಡುಬಿನ ಅಟ್ಟದಲ್ಲಿ ನೀರು ಹಾಕಿ. ನೀರು ಕುದಿಬರುವ ಹೊತ್ತಿಗೆ ನೀವು ತಯಾರು ಮಾಡಿಟ್ಟುಕೊಂಡ ಮಿಶ್ರಣವನ್ನು ಕೆಂಗಾರು ಎಲೆಗೆ ಹಚ್ಚಿ ಎಲೆಯನ್ನು ಮಡಚಿ ಅಟ್ಟದಲ್ಲಿ ಇಡಿ.
ಸುಮಾರು 45 ನಿಮಿಷ ಬೇಯಲು ಬಿಡಿ.
ಕೆಂಗಾರ್ ಎಲೆಯ ಘಮವು ಕಡುಬಿಗೆ ಅಂಟಿ ವಿಶೇಷ ಸ್ವಾದ ಒದಗಿಸುತ್ತದೆ.
ಬಡಿಸುವಾಗ ಎಲೆಯನ್ನು ಬಿಡಿಸಿ ಕಡುಬು ತೆಗೆದು ಬಡಿಸಿದರೆ ಕೆಂಗಾರು ಎಲೆಯ ಹಲಸಿನ ಕಡುಬು ತಿನ್ನಲು ಮಜಬೂತಾಗಿರುತ್ತದೆ.
- ಕೆಂಗಾರು ಎಲೆ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದು ಕಡಿಮೆ. ಈ ರೆಸಿಪಿಗಾಗಿ ನಿಮಗೆ ಕೆಂಗಾರು ಎಲೆ ಸಿಗದೆ ಇದ್ದಲ್ಲಿ ಬಾಳೆಎಲೆ, ಅರಿಶಿನದ ಎಲೆಯಲ್ಲೂ ಟ್ರೈ ಮಾಡಬಹುದು. ಹಲಸಿನಲ್ಲಿರುವ ಅನೇಕ ಪೋಷಕಾಂಶಗಳು ನಿಮ್ಮ ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸಬಲ್ಲದು. ಹಸಿದು ಹಲಸು, ಉಂಡ್ ಮಾವು ಅನ್ನೋ ಮಾತೇ ಇದೆ. ನೆರಿಗೆಗಳನ್ನು ತಡೆಯುವುದಕ್ಕೆ ಇದು ಸಹಕಾರಿ.ಕೂದಲಿನ ಆರೋಗ್ಯ, ಕಣ್ಣಿನ ಆರೋಗ್ಯ ಹೆಚ್ಚಿಸಲು ಉಪಯೋಗಕಾರಿ.
- ಕ್ಯಾಲೊರಿಗಳು - 157
- ವಿಟಮಿನ್ ಸಿ - 22.6 mg
- ಡಯಟರಿ ಫೈಬರ್ - 2.5 g
- ಪ್ರೋಟೀನ್ - 2.84 g
- ಸಕ್ಕರೆ - 31.48
- ಕಾರ್ಬೋಹೈಡ್ರೇಟ್ - 38.36 g



Click it and Unblock the Notifications