For Quick Alerts
ALLOW NOTIFICATIONS  
For Daily Alerts

ದಿಢೀರ್‌ ತಯಾರಿಸಿ ಖಾರವಾದ ಬದನೆಕಾಯಿ ಗೊಜ್ಜು

|

ಮನೆಯಲ್ಲಿ ಮಹಿಳೆಯರು ಯಾವಾಗಲೂ ದಿಢೀರ್‌ ತಯಾರಿಸಬಹುದಾದ ಅಡುಗೆಗಳ ಪಟ್ಟಿಯನ್ನು ಸದಾ ಸಿದ್ಧವಾಗಿಟ್ಟುಕೊಂಡಿರಬೇಕು. ನಾವಿಂದು ನಿಮಗೆ ಅಂಥದ್ದೇ ಒಂದು ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ.
ಸಾಂಬಾರು ಇಲ್ಲದಾಗ ಅಥವಾ ಕಡಿಮೆ ಸಾಂಬಾರು ಇದ್ದಾಗ, ನಿಮಗೆ ಬಾಯಿ ರುಚಿ ಕೆಟ್ಟಾಗ ರುಚಿಕರವಾಗಿ ಖಾರ-ಖಾರವಾಗಿ ದಿಢೀರ್‌ ಅಂತ ತಯಾರಿಸುವ ರೆಸಿಪಿ ಬದನೆಕಾಯಿ ಗೊಜ್ಜು. ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಇಷ್ಟವಾಗುವ ಅಲ್ಲದೇ ಬದನೆಕಾಯಿ ತಿನ್ನದೇ ಇರುವವರೂ ಸಹ ತಿನ್ನಲು ಇಷ್ಟಪಡುವ ರೆಸಿಪಿ ಇದು. ಹೇಗೆ ತಯಾರಿಸುವುದು ಮುಂದೆ ನೋಡೋಣ:

Instant Brinjal Gojju Recipe In kannada
Instant Brinjal Gojju Recipe/ಬದನೆಕಾಯಿ ಗೊಜ್ಜು
Instant Brinjal Gojju Recipe/ಬದನೆಕಾಯಿ ಗೊಜ್ಜು
Prep Time
5 Mins
Cook Time
10M
Total Time
15 Mins

Recipe By: Meghashree Devaraju

Recipe Type: Gojju

Serves: 4

Ingredients
  • ಬೇಕಾಗಿರುವ ಸಾಮಾಗ್ರಿಗಳು

    ಬದನೆಕಾಯಿ -2

    ಟಮೋಟೊ -1

    ಈರುಳ್ಳಿ - 1

    ಮೆಣಸಿನಕಾಯಿ - 5

    ಹುಣಸೆಹಣ್ಣು - 1/4 ನಿಂಬೆಹಣ್ಣು ಗಾತ್ರದ್ದು

    ಜೀರಿಗೆ - 1/4 ಚಮಚ

    ಕೊತ್ತಂಬರಿ - 1/2 ಚಮಚ

    ಉಪ್ಪು ರುಚಿಗೆ

Red Rice Kanda Poha
How to Prepare
  • ತಯಾರಿಸುವ ವಿಧಾನ

    * ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ

    * ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಈರುಳ್ಳಿ, ಟಮೋಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಬದನೆಕಾಯಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಫ್ರೈ ಮಾಡಿ ಅಂತಿಮವಾಗಿ ಕೊತ್ತಂಬರಿ ಹಾಕಿ

    * ಈಗ ಫ್ರೈಗೆ ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಕಲ್ಲಿನಲ್ಲಿ ಅರೆಯಿರಿ ಅಥವಾ ಮಸೆಯಿರಿ.

Instructions
  • ಮಿಶ್ರಣವನ್ನು ಯಾವುದೇ ಕಾರಣಕ್ಕುಮಿಕ್ಸಿಗೆ ಹಾಕಬೇಡಿ ಅದರ ರುಚಿ ಬದಲಾಗುತ್ತದೆ ಅಥವಾ ದೇಸಿ ರುಚಿ ಮರೆಯಾಗುತ್ತದೆ.
Nutritional Information
[ 3.5 of 5 - 103 Users]
X
Desktop Bottom Promotion