For Quick Alerts
ALLOW NOTIFICATIONS  
For Daily Alerts

ಹಾಲಿನಿಂದ ಗಿಣ್ಣು ಮಾಡುವುದು ಹೇಗೆ?

Posted By:
|

ನಮ್ಮ ದೇಹಕ್ಕೆ ಲಭ್ಯವಾಗುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಜಗತ್ತಿನ ಏಕೈಕ ಆಹಾರವೆಂದರೆ ಅದು ಹಸುವಿನ ಹಾಲು. ಬಹುಶಃ ಅದೇ ಕಾರಣಕ್ಕೆ ಅಲ್ಲವೇ ಗೋವನ್ನು ಕಾಮಧೇನು ಎಂದು ಕರೆಯುವುದು.

ಗೋವಿನಿಂದ ಹಾಲು,ಮೊಸರು,ಮಜ್ಜಿಗೆ, ಬೆಣ್ಣೆ,ತುಪ್ಪ ಎಲ್ಲವೂ ಕೂಡ ಆರೋಗ್ಯಕ್ಕೆ ಲಾಭದಾಯಕವಾಗಿವೆ. ಇವುಗಳ ಸೇವನೆಯಿಂದ ನಮ್ಮ ದೇಹಸ್ಥಿತಿ ಸದೃಢವಾಗುವುದಕ್ಕೆ ಸಾಧ್ಯ. ಅದರಲ್ಲೂ ಸಸ್ಯಾಹಾರಿಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಹಳ ಮಹತ್ವ ನೀಡುತ್ತಾರೆ.

ನಾವಿಲ್ಲಿ ಹಾಲಿನ ಮತ್ತೊಂದು ರೂಪವಾಗಿರುವ ಗಿಣ್ಣಾಲು ತಯಾರಿಸುವುದು ಹೇಗೆ ಎಂಬ ಬಗ್ಗೆ ಹೇಳುತ್ತಿದ್ದೇವೆ. ಅಷ್ಕಕ್ಕೂ ಗಿಣ್ಣಾಲು ಎಂದರೆ ಏನು ಎಂಬ ಬಗ್ಗೆ ಮೊದಲು ಹೇಳುತ್ತೇವೆ ಕೇಳಿ. ಪ್ರಾಕೃತಿಕ ವಿಧಾನದ ಗಿಣ್ಣು ಅಥವಾ ಚೀಸ್ ಎಂದರೆ ಗೋವು ಕರು ಹಾಕಿದ 11 ದಿನಗಳವರೆಗೆ ನೀಡುವ ಹಾಲಿನಿಂದ ತಯಾರಿಸುವುದಾಗಿದೆ. ಈ ಹಾಲು ಸಾಮಾನ್ಯ ಹಾಲಿನಂತೆ ಇರುವುದಿಲ್ಲ.

How To Make Ginnu

ಅದರಲ್ಲೂ ಕರು ಹಾಕಿದ ಮೊದಲ ಐದು ದಿನದ ಹಾಲು ಸ್ವಲ್ಪ ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತದೆ. ಇದರಲ್ಲಿ ಫ್ಯಾಟ್ ಅಂಶ ಅಧಿಕವಾಗಿರುತ್ತದೆ. ಗಿಣ್ಣು ತಯಾರಿಸುವುದಕ್ಕೆ ಈ ಹಾಲು ಬಹಳ ಪ್ರಶಸ್ತವಾಗಿರುತ್ತದೆ. ನೈಜವಾದ ಗಿಣ್ಣು ತಯಾರಿಕೆಗೆ ಇದು ಯೋಗ್ಯ. ಇನ್ನು ಸಾಮಾನ್ಯ ಹಾಲಿನಲ್ಲೂ ನಿಂಬೆರಸ ಅಥವಾ ಯಾವುದೇ ಹುಳಿ ಹಿಂಡುವ ಮೂಲಕ ಗಿಣ್ಣು ಅಥವಾ ಚೀಸ್ ತಯಾರಿಸಬಹುದು. ಆದರೆ ಅದು ಶತಮಾನದ ಹಿಂದೆ ರೂಢಿಯಲ್ಲಿದ್ದ ವಿಧಾನವಲ್ಲ.

ಈಗಲೂ ಮಲೆನಾಡಿನ ಕೆಲವು ಹಳ್ಳಿಗಳಲ್ಲಿ ಯಾರದ್ದಾದ್ರು ಮನೆಯಲ್ಲಿ ಹಸುವು ಕರು ಹಾಕಿದರೆ ಮೊದಲ 11 ದಿನದ ಹಾಲನ್ನು ಗಿಣ್ಣು ತಯಾರಿಸಿ ಊರಿನವರೆಲ್ಲಾ ಹಂಚಿಕೊಂಡು ಸೇವಿಸುತ್ತಾರೆ.

ಹಾಗಾದ್ರೆ ಗಿಣ್ಣು ತಯಾರಿಸುವುದು ಹೇಗೆ ನೋಡೋಣ ಬನ್ನಿ

Ancient Cheese Using Cow Milk, ಹಾಲಿನಿಂದ ಗಿಣ್ಣು ಮಾಡುವುದು ಹೇಗೆ
Ancient Cheese Using Cow Milk, ಹಾಲಿನಿಂದ ಗಿಣ್ಣು ಮಾಡುವುದು ಹೇಗೆ
Prep Time
2 Mins
Cook Time
8M
Total Time
10 Mins

Recipe By: Sushma Chatra

Recipe Type: sweet

Serves: 4

Ingredients
  • ಬೇಕಾಗುವ ಸಾಮಗ್ರಿಗಳು:

    ಹಾಲು- ದನ ಕರು ಹಾಕಿದ 11 ದಿನದ ಒಳಗಿನ ಹಾಲು 1 ಲೀಟರ್

    ಬೆಲ್ಲ - ಒಂದು ಅಚ್ಚು ಬೆಲ್ಲ

    ಏಲಕ್ಕಿ- ಚಿಟಿಕೆ

Red Rice Kanda Poha
How to Prepare
  • ಮಾಡುವ ವಿಧಾನ:

    ಹಾಲನ್ನು ಒಂದು ಅಗಲ ಬಾಯಿಯ ಪಾತ್ರೆಯಲ್ಲಿ ಹಾಕಿ. ಸ್ವಲ್ಪ ಕುದಿಯಲು ಆರಂಭಿಸಿದಾಗ ಬೆಲ್ಲ ಸೇರಿಸಿ.

    ನಂತರ ಸುಮಾರು ಐದು ನಿಮಿಷ ಹಾಗೆಯೆ ಕೈಯಾಡುತ್ತಾ ಕುದಿಸುತ್ತಲೇ‌ ಇರಿ.

    ಚೆನ್ನಾಗಿ ಕುದಿ ಬಂದ ನಂತರ‌ ಏಲಕ್ಕಿ ಪುಡಿ ಸೇರಿಸಿ ಕೈಯಾಡಿ. ಬಿಸಿಬಿಸಿ ಗಿಣ್ಣಾಲು ರೆಡಿ.

Instructions
  • ಇದರಲ್ಲಿ ಅತ್ಯಂತ ಹೆಚ್ಚು ಕ್ಯಾಲೊರಿ ಲಭ್ಯ. ಅಷ್ಟೇ ಅಲ್ಲ ಕೊಬ್ಬಿನಾಂಶ ಕೂಡ ಅಧಿಕವಾಗಿರುತ್ತದೆ. ಗಿಣ್ಣಾಲು ಸೇವನೆಯಿಂದ ಅಧಿಕ ಶಕ್ತಿ ಲಭ್ಯವಾಗುತ್ತದೆ. ನಿಶ್ಯಕ್ತಿ ಯಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಬಹಳ ಒಳ್ಳೆಯದು. ಅಷ್ಟೇ ಅಲ್ಲ ದೇಹ ತೂಕ ಹೆಚ್ಚಿಸಲು ಬಯಸುವವರು ಗಿಣ್ಣಾಲು ಸೇವಿಸುವುದು ಒಳಿತು. ಇನ್ನು ಪೋಷಕಾಂಶಗಳ ಕೊರತೆ ಎದುರಿಸುತ್ತಿರುವವರು ಗಿಣ್ಣಾಲು ಸೇವಿಸುವ ಮೂಲಕ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸಿಗುತ್ತದೆ.
Nutritional Information
  • ಕ್ಯಾಲೊರಿ - 402
  • ಕೊಬ್ಬಿನಾಂಶ - 32ಗ್ರಾಂ
  • ಕಾರ್ಬ್ಸ್ - 3.7 ಗ್ರಾಂ
[ 4 of 5 - 37 Users]
X
Desktop Bottom Promotion