Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ತರಕಾರಿ ಪಲಾವ್ ಮಾಡುವ ವಿಧಾನ
ಆಹಾರ ಎಂದರೆ ಬಾಯಿ ರುಚಿಯ ಜತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಮಹಿಳೆಯರ ಜವಾಬ್ದಾರಿಯಾಗಿದೆ. ದಿನ ನಿತ್ಯ ರುಚಿಕರ ಹಾಗೂ ಆರೋಗ್ಯಕರ ತಿಂಡಿ ಮಾಡುವುದು ಕಷ್ಟವೇ ಹೌದು. ಆರೋಗ್ಯದ ಜತೆಗೆ ಮನೆಯ ಹಿರಿಯರಿಂದ ಕಿರಿಯವರೆಗೆ ಎಲ್ಲರೂ ಇಷ್ಟಪಡುವ, ರುಚಿಗೂ ಸೈ ಎನಿಸುವ ತಿಂಡಿ ತರಕಾರಿ ಪಲಾವ್.

ದಕ್ಷಿಣ ಹಾಗೂ ಉತ್ತರ ಭಾರತದ ಎಲ್ಲೆಡೆ ತನ್ನದೇ ಶೈಲಿಯಲ್ಲಿ ತಯಾರಿಸುವ ಪಲಾವ್ ಅನ್ನು ಹತ್ತಾರು ವಿಧಾನಗಳಲ್ಲಿ ತಯಾರಿಸಬಹುದು. ನಾವಿಲ್ಲಿ ಸಿಂಪಲ್ ಹಾಗೂ ಶೀಘ್ರದಲ್ಲೇ ತಯಾರಿಸಬಹುದಾದ ಪಲಾವ್ ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ.

Recipe By: Meghashree Devaraju
Recipe Type: Breakfast
Serves: 4
-
ಬೇಕಾಗುವ ವಸ್ತುಗಳು
ಅರ್ಧ ಕೆಜಿ ಸೋನಾಮಸೂರಿ ಅಥವಾ ಬಾಸುಮತಿ ಅಕ್ಕಿ
ಕ್ಯಾರೆಟ್ 100 ಗ್ರಾಂ
ಬೀನ್ಸ್ 100 ಗ್ರಾಂ
ಹಸಿ ಬಟಾಣಿ 100 ಗ್ರಾಂ
ಗೆಡ್ಡೆಕೋಸು 100 ಗ್ರಾಂ
ಅಲೂಗಡ್ಡೆ 100 ಗ್ರಾಂ
ಹೂಕೋಸು 100 ಗ್ರಾಂ
ಪುದೀನಾ ಒಂದು ಕಪ್
ಕೊತ್ತಂಬರಿ ಸೊಪ್ಪು ಒಂದು ಕಪ್
ಬೆಳ್ಳುಳ್ಳಿ ಎರಡು
ಶುಂಠಿ
ಮೆಣಸಿನಕಾಯಿ 8
ಟಮೋಟೋ 2
ಈರುಳ್ಳಿ 2
ಪಲಾವ್ ಎಲೆ 2
ಚಕ್ಕೆ ಒಂದು
ಲವಂಗ 3
ಏಲಕ್ಕಿ 2
ಮೆಣಸು 4
ಜೀರಿಗೆ ಅರ್ಧ ಚಮಚ
ಕಸೂರಿ ಮೇತಿ ಒಂದು ಸ್ಪೂನ್
ತುಪ್ಪು 2 ಚಮಚ
ಎಣ್ಣೆ ಅರ್ಧ ಕಪ್
ಉಪ್ಪು
-
ತಯಾರಿಸುವ ವಿಧಾನ
* ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ
* ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿಟ್ಟು ಪಾತ್ರೆಗೆ ಅರ್ಧ ಕಪ್ ಎಣ್ಣೆ ಹಾಕಿ ನಂತರ ಅದಕ್ಕೆ ಪಲಾವ್, ಚಕ್ಕೆ, ಲವಂಗ, ಏಲಕ್ಕಿ, ಮೆಣಸು, ಜೀರಿಗೆ, ಕಸೂರಿ ಮೇತಿ ಹಾಕಿ
* ಸಣ್ಣದಾಗಿ ಕತ್ತರಿಸಿರಿಸಿದ ಅರ್ಧ ಈರುಳ್ಳಿಯನ್ನು ಹಾಕಿ
* ನಂತರ ಚೆನ್ನಾಗಿ ಪೇಸ್ಟ್ ಮಾಡಿದ ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ
* ಪೇಸ್ಟ್ ಮಾಡಿದ ಈರುಳ್ಳಿ ಮತ್ತು ಟಮೋಟೋ ಪ್ಯೂರಿ ಹಾಕಿ
* ಪೇಸ್ಟ್ ಮಾಡಿದ ಕೊತ್ತಂಬರಿ, ಪುದೀನ ಹಾಗೂ ಮೆಣಸಿನಕಾಯಿ ಹಾಕಿ ಎಲ್ಲವನ್ನು ಚೆನ್ನಾಗಿ ಎಣ್ಣೆಯಲ್ಲಿ ಬಾಡಿಸಿ
* ನಂತರ ಎಲ್ಲಾ ತರಕಾರಿಗಳನ್ನು ಹಾಕಿ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಲಸಿ ತಟ್ಟೆ ಮುಚ್ಚಿ 10 ನಿಮಿಷ ಚೆನ್ನಾಗಿ ಬೇಯಿಸಿ
* ತರಕಾರಿ ಅರ್ಧ ಬೆಂದ ನಂತರ ಬಟಾಣಿ ಹಾಗೂ ಅಕ್ಕಿಯನ್ನು ಹಾಕಿ ಅಕ್ಕಿಗೆ ಎರಡು ಪ್ರಮಾಣದಷ್ಟು ನೀರು ಹಾಕಿ
* ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಂತಿಮವಾಗಿ ತುಪ್ಪ ಹಾಕಿ ತಟ್ಟೆ ಮುಚ್ಚಿಡಿ
- ಪಲಾವ್ ರುಚಿಗೆ ಮಾತ್ರ ಸೀಮಿತವಾಗದೆ ಹಲವಾರು ತರಕಾರಿಗಳು ಇರುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇನ್ನು ಹೆಚ್ಚು ಮಸಾಲೆ ಬೇಕು ಎನ್ನುವವರು ಸ್ವಲ್ಪ ಗರಂ ಮಸಾಲೆ, ಒಂದು ಚಮಚ ದನಿಯಾ ಪುಡಿ ಹಾಗೂ ಕಾರದ ಪುಡಿ ಹಾಕಬಹುದು.
- Protein - 9.5 g
- Magnesium - 17.9 %
- Calories - 264.9
- Fat - 9.1 g
- Zinc - 7.2 %



Click it and Unblock the Notifications
