Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಡ ಅನ್ನೋರು ಕೂಡ ತಿಂತಾರೆ..ಈ ರೀತಿ ಮಾಡಿ ಹಾಗಲಕಾಯಿ ಪಲ್ಯ!
ಊಟದೊಂದಿಗೆ ನೀವು ಹಲವು ತರಕಾರಿಯ ಪಲ್ಯವನ್ನಂತು ಸವಿದಿರುತ್ತೀರಿ. ಹಾಗೆ ಆರೋಗ್ಯಕ್ಕೆ ಬಹಳ ಉತ್ತಮ ಎನ್ನುವಂತಹ ಹಾಗಲಕಾಯಿಯ ಪಲ್ಯ ಸೇರಿ ಹಲವು ರೀತಿಯ ಖಾದ್ಯಗಳ ಕೂಡ ನೀವು ಮಾಡಿರುತ್ತೀರಿ. ಹಾಗಲಕಾಯಿ ಅಂದ್ರೆ ಕೆಲವರು ಮೂಗು ಮುರಿಯುತ್ತಾರೆ. ಅದರ ಕಹಿ ಗುಣದಿಂದ ಕೆಲವರಿಗೆ ಇದು ಇಷ್ಟವಾಗದೆ ಇರಬಹುದು.
ಆದ್ರೆ ಹಾಗಲಕಾಯಿ ಬಹಳಷ್ಟು ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿದೆ. ಹಾಗಲಕಾಯಿ ಹಲವು ಸಮಸ್ಯೆಗಳಿಗೆ ಮದ್ದು. ಇದರ ಕಹಿ ಗುಣವು ನಿಮಗೆ ಹಲವು ರೀತಿಯ ಪ್ರಯೋಜನ ತರಲಿದೆ. ಇನ್ನ ಹಾಗಲಕಾಯಿ ಸಾಂಬಾರ್, ಪಲ್ಯ ಹೆಚ್ಚಾಗಿ ಮಾಡುತ್ತಾರೆ. ಅಪರೂಪಕ್ಕೆ ಹಾಗಲಕಾಯಿ ರೋಸ್ಟ್ ಸಹ ಮಾಡಲಾಗುತ್ತೆ.

ಇನ್ನು ಹಾಗಲಕಾಯಿ ಪಲ್ಯ ಅಂದ್ರೆ ಎಲ್ಲರು ಇಷ್ಟಪಡೋದಿಲ್ಲ. ಅದು ಕಹಿ ಹಾಗೆ ರುಚಿ ರಹಿತ ಎಂದು ಭಾವಿಸುತ್ತಾರೆ. ಆದ್ರೆ ನಾವಿಂದು ರುಚಿ ರುಚಿಯಾಗಿ ಈ ಹಾಗಲಕಾಯಿ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ನೀವೆಂದು ಸವಿಯದೇ ಇರದಂತಹ ರುಚಿಯಲ್ಲಿ ಇಂದು ವಿಶೇಷ ರೀತಿಯಲ್ಲಿ ಈ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ.
ಹಾಗಾದ್ರೆ ರುಚಿ ರುಚಿಯ ಈ ಹಾಗಲಕಾಯಿ ಪಲ್ಯ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನ ಹಾಗೂ ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಿ.
ಹಾಗಲಕಾಯಿ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಹಾಗಲಕಾಯಿ
- ಕಡಲೆ ಬೇಳೆ
- ಉದ್ದಿನ ಬೇಳೆ
- ಎಣ್ಣೆ
- ಜೀರಿಗೆ
- ಸಾಸಿವೆ
- ಒಣ ಮೆಣಸು
- ಅರಶಿಣ
- ತೆಂಗಿನಕಾಯಿ ತುರಿ
- ಇಂಗು
- ಹುಣಸೆ ಹುಳಿ
- ಬೆಲ್ಲ
- ಉಪ್ಪು
ಹಾಗಲಕಾಯಿ ಪಲ್ಯ ಮಾಡುವುದು ಹೇಗೆ?
ಮೊದಲು ಹಾಗಲಕಾಯಿಯನ್ನು ಕತ್ತರಿಸಿಕೊಂಡು ಬೀಜ ತೆಗೆದು ಅದನ್ನು ಉಪ್ಪು ನೀರಿನಲ್ಲಿ ನೆನೆಸಿಡಬೇಕು. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ಹುರಿದ ಈ ಪದಾರ್ಥ ತೆಗೆದಿಟ್ಟು ಬಳಿಕ ಬಾಣಲೆಗೆ 4 ಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಇಂಗು, ಅರಶಿಣ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
1 ನಿಮಿಷ ಬಿಟ್ಟು ಈಗ ಹೆಚ್ಚಿಕೊಂಡಿರುವ ಹಾಗಲಕಾಯಿಯನ್ನು ಹಾಕಿ 2 ನಿಮಿಷ ಹುರಿದುಕೊಳ್ಳಿ. ನಂತರ ಉಪ್ಪು, ಸ್ವಲ್ಪ ಬೆಲ್ಲ, ಹುಣಸೆ ಹುಳಿ ಕೂಡ ಹಾಕಿಕೊಂಡು ಚೆನ್ನಾಗಿ ಬೇಯಿಸಿಕೊಳ್ಳಿ. ಹಾಗಲಕಾಯಿ ಮೆತ್ತಗಾಗುವರೆಗೂ ಬೇಯಿಸಿಕೊಳ್ಳಿ. ನೀರು ಕೂಡ ಹಾಕಿ ಬೇಯಿಸಿಕೊಳ್ಳಿ. ಈ ಬೇಯುವ ಸಮಯದಲ್ಲಿ ಮೊದಲು ಹುರಿದು ಇಟ್ಟುಕೊಂಡಿದ್ದ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ತೆಂಗಿನಕಾಯಿ ತುರಿ ಕೂಡ ಹಾಕಿಕೊಂಡು ರುಬ್ಬಿಕೊಳ್ಳಿ.
ಇದು ತರಿ ತರಿಯಾದ ಪುಡಿಯನ್ನಾಗಿ ಮಾಡಿ. ಹೀಗಾಗಿ ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ಇದನ್ನು ಬೇಯುತ್ತಿರುವ ಹಾಗಲಕಾಯಿಯೊಂದಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ನೀರಾಗಿ ಈ ಪಲ್ಯ ಇರಲಿ. ಈ ಮಸಾಲೆ ಹಾಕಿಕೊಂಡು 3ರಿಂದ 4 ನಿಮಿಷ ಹಾಗೆ ಒಲೆ ಮೇಲೆ ಬಿಟ್ಟು ನಂತರ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಹಾಗಲಕಾಯಿ ಪಲ್ಯ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
