Latest Updates
-
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ
ಈ ಮಸಾಲೆ ಉಪ್ಪಿಟ್ಟು ರುಚಿ ನೋಡಿದರೆ ಮತ್ತೆ ಮತ್ತೆ ಸವಿಯೋದು ಪಕ್ಕಾ..!
ಬೆಳಗಿನ ತಿಂಡಿಯ ಸಾಲಿನಲ್ಲಿ ಉಪ್ಪಿಟ್ಟು ಕೂಡ ನೀವು ಮಾಡಿರುತ್ತೀರಿ. ಆದ್ರೆ ಉಪ್ಪಿಟ್ಟು ಅಂದ್ರೆ ಕೆಲವರು ಮೂಗು ಮುರಿಯುತ್ತಾರೆ. ಕೆಲವರು ಮಾತ್ರ ಉಪ್ಪಿಟ್ಟನ್ನು ಬೆಳಗ್ಗೆ, ಸಂಜೆಯೂ ಕೂಡ ಸವಿಯಲು ಇಷ್ಟಪಡುತ್ತಾರೆ. ಇನ್ನು ಉಪ್ಪಿಟ್ಟು ಅಂದ್ರೆ ಕೆಲವರಿಗೆ ಬಹಳ ಇಷ್ಟ. ಈ ಉಪ್ಪಿಟ್ಟನ್ನು ಚಿತ್ರಾನ್ನದಂತೆ ಬಗೆ ಬಗೆಯಲ್ಲಿ ಮಾಡಬಹುದು. ಹತ್ತಾರು ಬಗೆಯ ಉಪ್ಪಿಟ್ಟು ಇಂದು ನಾವು ಸವಿಯಬಹುದು.
ಉಪ್ಪಿಟ್ಟನ್ನು ಹಲವು ರೀತಿಯಲ್ಲಿ ಮಾಡಬಹುದು. ಅದರಲ್ಲೂ ನೀರು ಉಪ್ಪಿಟ್ಟು, ರವೆ ಉಪ್ಪಿಟ್ಟು, ಬಟಾಣಿ ಹಾಗೂ ತರಕಾರಿ ಹಾಕಿ ಮಾಡುವಂತಹ ಉಪ್ಪಿಟ್ಟು ಬಹಳ ರುಚಿಯಾಗಿರುತ್ತೆ. ಇದರ ಜೊತೆಗೆ ಉಳಿದ ಇಡ್ಲಿ, ಕಡಬನ್ನು ಬಳಸಿಯೂ ಉಪ್ಪಿಟ್ಟು ಮಾಡುತ್ತಾರೆ. ಆದರೆ ನಾವಿಂದು ಮಸಾಲೆ ಭರಿತ ಅತ್ಯಂತ ರುಚಿಕರ ಉಪ್ಪಿಟ್ಟು ಮಾಡುವುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ರೀತಿಯ ಮಸಾಲೆ ಉಪ್ಪಿಟ್ಟು ಮಾಡಿದರೆ ಎಲ್ಲರು ಬಾಯಲ್ಲಿ ನೀರು ಸುರಿಸಿಕೊಂಡು ಸವಿಯುತ್ತಾರೆ. ಈ ಉಪ್ಪಿಟ್ಟನ್ನು ತರಕಾರಿ ಹಾಕಿ ಮಾಡುವುದು, ಮಸಾಲೆಗಳ ಬಳಸಿ ಮಾಡುವುದರಿಂದ ಅತ್ಯಂತ ರುಚಿಕರವಾಗಿರುತ್ತೆ. ಹಾಗಾದ್ರೆ ನಾವು ಇಂದು ಮಸಾಲೆ ಭರಿತ ಹೊಸ ರುಚಿಯಲ್ಲಿ ಉಪ್ಪಿಟ್ಟು ಮಾಡುವುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಸ್ಪೆಷಲ್ ಉಪ್ಪಿಟ್ಟು ಮಾಡುವುದು ಹೇಗೆ? ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳೇನು? ಮಾಡುವ ವಿಧಾನವೇನು? ಮಾಡುವಾಗ ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ಮಸಾಲೆ ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳು
- ರವೆ 1 ಕಪ್
- ಈರುಳ್ಳಿ- 1
- ಟೊಮೆಟೋ 3
- ಸಾಸಿವೆ
- ಜೀರಿಗೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕಡಲೆಕಾಯಿ ಬೀಜ
- ಗೋಡಂಬಿ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಶುಂಠಿ
- ಹಸಿಮೆಣಸು
- ಖಾರದ ಪುಡಿ
- ಅರಿಶಿನ ಪುಡಿ
- ಧನಿಯಾ ಪುಡಿ
- ಗರಂ ಮಸಾಲ
- ನಿಂಬೆ ಹಣ್ಣಿನ ರಸ
- ಉಪ್ಪು
- ಎಣ್ಣೆ
ಸ್ಪೆಷಲ್ ಮಸಾಲೆ ಉಪ್ಪಿಟ್ಟು ಮಾಡುವ ವಿಧಾನ
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ರವೆ ಹಾಕಿ ಹುರಿದುಕೊಳ್ಳಬೇಕು. 4 ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಹುರಿದ ರವೆಯನ್ನು ಒಂದು ತಟ್ಟೆಗೆ ಹಾಕಿಕೊಳ್ಳಿ. ಈಗ ಟೊಮೆಟೋವನ್ನು ಮಿಕ್ಸಿ ಹಾರ್ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಅದನ್ನು ಒಂದು ಬೌಲ್‌ಗೆ ಹಾಕಿಕೊಂಡು ಇಡಿ.
ಈಗ ಮತ್ತೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಜಿರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಒಂದು ಈರುಳ್ಳಿ ಕತ್ತರಿಸಿ ಹಾಕಿಕೊಳ್ಳಿ. ನಂತರ ಇದಕ್ಕೆ ಹಸಿ ಮೆಣಸು, ಶುಂಠಿ, ಕರಿಬೇವು ಕೂಡ ಹಾಕಿ 4 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಕಾರದ ಪುಡಿ, ಅರಶಿನ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಬಿಸಿ ಮಾಡಿದರೆ ಸಾಕು. ನಂತರ ಈ ಮೊದಲು ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಟೊಮೆಟೋ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಳ್ಳಿ. ರುಚಿಗರ ತಕ್ಕಷ್ಟು ಉಪ್ಪು ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಕಪ್ ನೀರು ಹಾಕಿಕೊಂಡು ಕುದಿಬರಲು ಬಿಡಬೇಕು.
ಕುದಿ ಬರಲು ಆರಂಭಿಸಿದಾಗ ಅದಕ್ಕೆ ಮಿಕ್ಸ್ ಮಾಡಿಕೊಳ್ಳುತ್ತಾ ರವೆಯನ್ನು ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಕೈ ಆಡಿಸುತ್ತಾ ಇರಿ. ಚೆನ್ನಾಗಿ ಬೇಯುವಂತೆ ಮಾಡಿ. ರವೆ ಬೇಯಲು ಅಳತೆ ಪ್ರಕಾರ ನೀರು ಹಾಕಿಕೊಳ್ಳುವುದನ್ನು ಮರೆಯದಿರಿ. ಕೊನೆಯದಾಗಿ ಮುಚ್ಚಳ ಮುಚ್ಚಿ 2 ನಿಮಿಷ ಸಣ್ಣ ಉರಿಯಲ್ಲಿ ಬಿಡಿ.
ಈಗ ಸಣ್ಣ ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಕಡಲೆ ಕಾಯಿ ಬೀಜ, ಗೋಡಂಬಿಯನ್ನು ಹುರಿದು ಈ ಉಪ್ಪಿಟ್ಟಿಗೆ ಸೇರಿಸಿಕೊಳ್ಳಿ. ಕೊನೆಯದಾಗಿ ನಿಂಬೆ ಹಣ್ಣಿನ ರಸ ಹಾಕಿಕೊಳ್ಳಬಹುದು. ಹಾಕದಿದ್ದರೂ ನಡೆಯುತ್ತೆ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ, ಇಷ್ಟಾದರೆ ಸ್ಪೆಷಲ್ ಮಸಾಲೆ ಉಪ್ಪಿಟ್ಟು ರೆಡಿಯಾಗುತ್ತೆ. ನೀವು ಸಹ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications