Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಖತ್ ರುಚಿಯ ಸಬ್ಬಕ್ಕಿ ವಡೆ ಮಾಡಿದ್ದೀರಾ? ಹೇಗೆ ಮಾಡೋದು ಗೊತ್ತಾ?
ಮನೆಯಲ್ಲಿ ಅತಿಥಿಗಳು ಯಾರಾದರು ಬಂದಾಗ ಹಬ್ಬವಿದ್ದಾಗ ಸಿಹಿ ಮಾಡುತ್ತೇವೆ. ಆದ್ರೆ ಇದರ ಜೊತೆ ಯಾವುದಾದರು ಒಳ್ಳೆಯ ತಿಂಡಿ ಮಾಡಿದರೆ ಅದರ ರುಚಿಯೇ ಬೇರೆ. ಅದ್ರಲ್ಲೂ ಫ್ರೀ ಆಗಿದ್ದಾಗ ಯಾವ ತಿಂಡಿ ಮಾಡಬೇಕು. ಫ್ರೀ ಆಗಿದ್ದಾಗ ಯಾವ ತಿಂಡಿ ಮಾಡಬೇಕು? ಅಂದರೆ ಇದು ಬೆಳಗ್ಗೆಯ ತಿಂಡಿಗೆ ಅಲ್ಲ ಬದಲಾಗಿದೆ ಸಂಜೆಯ ಸ್ನ್ಯಾಕ್ಸ್ ಆಗಿ ಇಲ್ಲವೆ ಊಟದ ಜೊತೆ ಸವಿಯಲು ಈ ಸಬ್ಬಕ್ಕಿಯಿಂದ ವಡೆ ತಿಂಡಿ ಮಾಡಿ ನೋಡಿ.
ವಡೆಯಲ್ಲಿ ಹಲವು ವಿಧಗಳಿವೆ. ಅದ್ರಲ್ಲಿ ಕಡ್ಲಿ ವಡೆ, ಕಡಲೇ ಬೇಳೆ, ಮದ್ದೂರು ವಡೆ, ತುಂಬಾನೆ ಫೇಮಸ್ ಆದ್ರೆ ನೀವು ಎಂದಾದರು ಸಬ್ಬಕ್ಕಿಯಿಂದ ವಡೆ ಮಾಡಿದ್ದೀರಾ? ಸಬ್ಬಕ್ಕಿಯಿಂದ ನೀವು ಪಾಯಸ ಮಾಡಿ ಸವಿದಿರಬಹುದು. ಈ ಪಾಯಸ ತುಂಬಾನೆ ರುಚಿಕರವಾಗಿರುತ್ತದೆ. ಆದ್ರೆ ಸಬ್ಬಕ್ಕಿಯಿಂದ ವಡೆ ಮಾಡುತ್ತಾರೆ. ಸಂಜೆ ವೇಳೆ ಕಾಫಿ, ಟೀ ಜೊತೆ ಈ ಮಸಾಲ ವಡೆ ಸೇವಿಸುತ್ತಾರೆ, ಜೊತೆಗೆ ಬೆಳಗ್ಗೆಯ ತಿಂಡಿಗೂ ಈ ವಡೆ ಹೆಚ್ಚಾಗಿ ಬಳಸುತ್ತಾರೆ.

ಹಾಗಾದರೆ ನಾವಿಂದು ಸಬ್ಬಕ್ಕಿಯಿಂದ ವಡೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಮಸಾಲೆ ವಡೆ ಮಾಡಲು ಬೇಕಾಗುವ ಪದಾರ್ಥವೇನು? ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಬ್ಬಕ್ಕಿ ವಡೆ ಮಾಡಲು ಬೇಕಾಗುವ ವಸ್ತುಗಳು
- ಸಬ್ಬಕ್ಕಿ
- ಶೇಂಗಾ
- ಖಾರದ ಪುಡಿ
- ಅಜ್ವೈನಾ
- ಅರಶಿನ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಸಬ್ಬಕ್ಕಿ ವಡೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್ನಲ್ಲಿ ಸಬ್ಬಕ್ಕಿಯನ್ನು ರಾತ್ರಿಯೇ ನೆನೆಸಿಟ್ಟುಕೊಳ್ಳಬೇಕು. ಬಳಿಕ ಬೆಳಗ್ಗೆ ನೀರು ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಚೆನ್ನಾಗಿ ಬೇಯಿಸಿಕೊಂಡಿರುವ ಮೂರು ಆಲೂಗಡ್ಡೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಪೇಸ್ಟ್ ಮಾಡುವಂತೆ ಮಾಡಿಕೊಳ್ಳಿ.
ಇದಕ್ಕೆ ಶೇಂಗಾ ಪುಡಿ, ಉಪ್ಪು, ಖಾರದ ಪುಡಿ, ಸಕ್ಕರೆ, ಅರಶಿಣ ಪುಡಿ, ಅಜ್ವೈನ ಹಾಕಿಕೊಳ್ಳಿ. ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೂ ಮೊದಲು ಶೇಂಗಾ ವನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ಬಳಿಕ ಚೆನ್ನಾಗಿ ಪುಡಿ ಮಾಡಿಕೊಳ್ಳಲು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಇದಕ್ಕೆ ಹಾಕಿಕೊಳ್ಳಿ.
ಈಗ ಹಿಟ್ಟು ರೆಡಿ ಮಾಡುವಾಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬಳಿಕ ಕೈಗೆ ಎಣ್ಣೆ ಹಚ್ಚಿಕೊಂಡು ಹಿಟ್ಟು ತೆಗೆದುಕೊಂಡು ನಿಮಗೆ ಎಷ್ಟು ದೊಡ್ಡ ವಡೆ ಬೇಕೋ ಅಷ್ಟು ದೊಡ್ಡದಾಗಿ ತಟ್ಟಿಕೊಳ್ಳಿ. ಬಳಿಕ ಒಲೆ ಮೇಲೆ ಎಣ್ಣೆ ಇಟ್ಟು ಎಣ್ಣೆ ಕಾದ ಬಳಿಕ ವಡೆಯನ್ನು ಹಾಕಿ. ಉರಿ ನಿಧಾನವಾಗಿ ಇಟ್ಟುಕೊಂಡು ಎಲ್ಲಾ ವಡೆಗಳನ್ನು ಸಹ ಹಾಕಿಕೊಳ್ಳಿ, 3ರಿಂದ 4 ನಿಮಿಷ ಚೆನ್ನಾಗಿ ಕರಿದುಕೊಂಡ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸಬ್ಬಕ್ಕಿ ವಡೆ ರೆಡಿಯಾಗಿರುತ್ತದೆ, ಇದು ಊಟದ ಜೊತೆಗೆ ತಿಂಡಿಯ ಜೊತೆ ಸವಿಯಲು ಬೊಂಬಾಟ್ ರುಚಿ ನೀಡಲಿದೆ.



Click it and Unblock the Notifications
