Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸುಲಭದ ಅಕ್ಕಿ ಹಿಟ್ಟಿನ ನಿಪ್ಪಟ್ಟು; ಡಬಲ್ ರುಚಿಯ ಸ್ನ್ಯಾಕ್ಸ್!
ದಿನಾಲು ಸಂಜೆ ಸಮಯದಲ್ಲಿ ನೀವು ರುಚಿ ರುಚಿಯಾದ ಯಾವುದಾದರು ಖಾದ್ಯಗಳ ಮಾಡಿ ಸವಿಯುವ ಬಯಕೆ ಹೊಂದಿದ್ದರೆ ಹಲವು ರುಚಿಯ ಸ್ನ್ಯಾಕ್ಸ್ ಮಾಡಿಯೇ ಮಾಡುತ್ತೀರಿ. ಅದ್ರಲ್ಲೂ ಸಂಜೆಯಾಗುತ್ತಿದ್ದಂತೆ ರಸ್ತೆ ಬದಿಯ ವ್ಯಾಪಾರಿಗಳು ಗ್ರಾಹಕರಿಂದ ಹತ್ತಾರು ಬಗೆಯ ಆರ್ಡರ್ ಪಡೆಯುತ್ತಾರೆ. ಹಾಗೆ ಎಲ್ಲಾ ಅಂಗಡಿಗಳು ಕೂಡ ಜನರಿಂದ ತುಂಬಿರುತ್ತವೆ.
ಅದ್ರಲ್ಲೂ ಸಂಜೆ ಸಮಯದಲ್ಲಿ ಬೋಂಡಾ, ಬಜ್ಜಿ, ನಿಪ್ಪಟ್ಟು ಸವಿಯೋದು ಅಂದ್ರೆ ಎಲ್ಲರೂ ಇಷ್ಟಪಡುತ್ತಾರೆ. ಹಾಗೆ ಮನೆಯಲ್ಲೇ ಈ ಖಾದ್ಯ ಮಾಡಿ ಸವಿಯೋದು ಅಂದರೂ ಎಲ್ಲರೂ ಬಯಸುತ್ತಾರೆ. ನಾವಿಂದು ಸುಲಭವಾಗಿ ನಿಪ್ಪಟ್ಟು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಒಂದೇ ಒಂದು ಕಪ್ ಅಕ್ಕಿ ಹಿಟ್ಟು ಬಳಸಿಕೊಂಡು ಅದ್ಭುತವಾದ ನಿಪ್ಪಟ್ಟು ಮಾಡಬಹುದು.

ಹೌದು ಮನೆಯಲ್ಲಿ ಬೋಂಡಾ ಬಜ್ಜಿಯ ರುಚಿಯಂತೆ ಸಣ್ಣ ನಿಪ್ಪಟ್ಟು ಮಾಡಿ ಸವಿಯಬಹುದು. ಹಲವು ದಿನಗಳ ಕಾಲ ಇದನ್ನು ಒಂದು ಬಾಕ್ಸ್ಗೆ ಹಾಕಿಟ್ಟು ಸವಿಯಬಹುದು ಹಾಗೆ ಮಾಡುವುದು ಕೂಡ ಬಹಳ ಸುಲಭವಾಗಿರಲಿದೆ. ಅಲ್ಲದೆ ಸ್ನ್ಯಾಕ್ಸ್ ಆಗಿ ಮಾತ್ರವಲ್ಲ ಊಟದೊಂದಿಗೆ ಸವಿಯಲು ಸಹ ಇದು ಬಹಳ ರುಚಿ ನೀಡಲಿದೆ.
ಹಾಗಾದ್ರೆ ಅಕ್ಕಿ ಹಿಟ್ಟು ಬಳಸಿ ಸುಲಭವಾಗಿ ನಿಪ್ಪಟ್ಟು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡಲು ಬೇಕಾಗುವ
ವಸ್ತುಗಳು
- ಅಕ್ಕಿ ಹಿಟ್ಟು
- ಉಪ್ಪು
- ಬಿಳಿ ಎಳ್ಳು
- ಎಣ್ಣೆ
- ಖಾರದ ಪುಡಿ
- ಬೆಣ್ಣೆ
ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ವಿಧಾನವೇನು?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅಳತೆ ಕಪ್ನಲ್ಲಿ ಒಂದು ಕಪ್ ನೀರು ಹಾಕಿ ಅದಕ್ಕೆ 1 ಸ್ಪೂನ್ ಬೆಣ್ಣೆ ಹಾಕಿಕೊಳ್ಳಿ. ಹಾಗೆ ಉಪ್ಪು ಹಾಕಿ ಕುದಿಬರಲು ಬಿಡಿ. ಈಗ ಅದೇ ಕಪ್ನಲ್ಲಿ ಒಂದು ಕಪ್ ಅಕ್ಕಿ ಹಿಟ್ಟು ಹಾಕಿ ಒಲೆ ಆಫ್ ಮಾಡಿ ಮಿಕ್ಸ್ ಮಾಡಬೇಕು. ನಿಧಾನವಾಗಿ ಅಕ್ಕಿಯೊಂದಿಗೆ ಹಿಟ್ಟು ಬೆರೆಯುವಂತೆ ಮಾಡಿ.
ಈಗ ಹಿಟ್ಟು ತಣ್ಣಗಾಗಲು ಬಿಡಿ. ಇದಕ್ಕೆ ಬಿಳಿ ಎಳ್ಳು, ಖಾರದ ಪುಡಿ ಹಾಕಿ ಕೈಯಿಂದ ಮಿಶ್ರಣ ಮಾಡಿ. ಇದು ಗಟ್ಟಿಯಾಗಿ ಹಿಟ್ಟು ಬರಬೇಕು. ನಂತರ ಒಂದು ಸಣ್ಣ ಉಂಡೆಗಳ ಮಾಡಿಕೊಳ್ಳಬೇಕು. ನಂತರ ಉಂಡೆಯನ್ನ ಕೈ ಮಧ್ಯದಲ್ಲಿ ಇಟ್ಟು ಒತ್ತಿಕೊಂಡು ನಿಪ್ಪಟ್ಟು ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಒತ್ತಿಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಈ ನಿಪ್ಪಟ್ಟುಗಳನ್ನು ಹಾಕಿಕೊಂಡು ಎರಡೂ ಕಡೆಗಳಲ್ಲೂ ಕೂಡ ಕರಿದುಕೊಳ್ಳಬೇಕು. ನಂತರ ತೆಗೆದು ಜರಡಿಯಲ್ಲಿ ಹಾಕಿ ಎಣ್ಣೆ ಇಳಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ನಿಪ್ಪಟ್ಟು ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ಎಲ್ಲರಿಗೂ ಇದು ಇಷ್ಟವಾಗುತ್ತೆ.
ಇದನ್ನು ನೀವು ಸಂಜೆ ಸ್ನ್ಯಾಕ್ಸ್ ಆಗಿ, ಮಧ್ಯಾಹ್ನದ ಊಟದ ಸಮಯಕ್ಕೆ ಹಾಗೆ ಸಂಜೆ ಸ್ನ್ಯಾಕ್ಸ್ ಆಗಿಯೂ ಇದನ್ನು ಸವಿಯಬಹುದು.



Click it and Unblock the Notifications
