Latest Updates
-
ದೆಹಲಿ ಮಾಲಿನ್ಯದ ಹೊಗೆಯಿಂದ ಪಾರಾಗಲು ಕನ್ನಡಿಗರ ಸೂಪರ್ ಡಯಟ್: ದಿನಕ್ಕೆ 150 ರೂ. ಸಾಕು! -
ಮುಂಬೈಗೆ ಬಂದಿಳಿದ ಬ್ರಿಟನ್ ರಾಜಕುಮಾರ ವಿಲಿಯಂ: ಟ್ರಾಫಿಕ್ ನಿರ್ಬಂಧ, ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ! -
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ಕರಾವಳಿ ಜನರೇ ಎಚ್ಚರ, ಮನೆಯಲ್ಲೇ ಸುರಕ್ಷಿತವಾಗಿರಲು ಇಲ್ಲಿದೆ ಟಿಪ್ಸ್! -
ಚಾತ್ ಪೂಜೆ: ಸಂಧ್ಯಾ ಅರ್ಘ್ಯದ ವೇಳೆ ಸಂಗಾತಿಯೊಂದಿಗೆ ಜಗಳ ತಪ್ಪಿಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು ಹೇಗೆ? -
ದಕ್ಷಿಣ ಭಾರತದಲ್ಲಿ ಮಳೆ ಅಬ್ಬರ: ₹120 ರಲ್ಲೇ ಪೌಷ್ಟಿಕ ಊಟದ ಪ್ಲಾನ್ ಮತ್ತು ಸುರಕ್ಷಿತ ಆಹಾರ ಟಿಪ್ಸ್ -
ಬೆಂಗಳೂರು-ಗೋವಾ ವಂದೇ ಭಾರತ್ ರೈಲು ಸಂಚಾರ ಆರಂಭ: ಪ್ರಯಾಣಿಕರ ಸಂಭ್ರಮ, ಟಿಕೆಟ್ ದರ ಮತ್ತು ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ -
ದೆಹಲಿ-ಎನ್ಸಿಆರ್ ಮಳೆ: AQI ಸುಧಾರಣೆ, 15 ನಿಮಿಷದ ವಾಕಿಂಗ್ಗೆ ಈ ಟಿಪ್ಸ್ ಪಾಲಿಸಿ! -
ವಿಶ್ವ ಮಧುಮೇಹ ದಿನ: ಸಿಹಿ ತಿನ್ನುವಾಗ 'ಶುಗರ್-ಪೋಲೀಸ್' ಆಗಬೇಡಿ, ದಂಪತಿಗಳಿಗಾಗಿ ಇಲ್ಲಿದೆ ಬೆಸ್ಟ್ ಸಂವಹನ ಸೂತ್ರ! -
ಅಕ್ಕಿ, ಬೇಳೆ ಬೆಲೆ ಏರಿಕೆ ಬಿಸಿ: ತಮಿಳುನಾಡು ಸರ್ಕಾರದ ಹೊಸ ನಿಯಮದಿಂದ ಗ್ರಾಹಕರಿಗೆ ಸಿಗುತ್ತಾ ರಿಲೀಫ್? -
ಮಕ್ಕಳ ದಿನಾಚರಣೆ: ಇಂದೇ ಮಕ್ಕಳನ್ನು ಹೊರಗೆ ಕರೆದೊಯ್ಯಲು ಬೆಸ್ಟ್ ಪ್ಲೇಸ್ ಮತ್ತು ಉಚಿತ ಆಫರ್ಗಳ ಮಾಹಿತಿ ಇಲ್ಲಿದೆ!
ಚಪಾತಿ, ಅನ್ನ, ದೋಸೆಗೆ ಈರುಳ್ಳಿ-ಟೊಮೆಟೋ ಚಟ್ನಿ..! ಮಾಡೋದು ಸುಲಭ..!
ಬೆಳಗ್ಗೆಯ ತಿಂಡಿಯ ಜೊತೆಗೆ ಒಂದು ಚಟ್ನಿ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಆದ್ರೆ ಯಾವ ಕಾಂಬಿನೇಷನ್ ಚಟ್ನಿ ಯಾವ ತಿಂಡಿಗೆ ರುಚಿಕರವಾಗಿರುತ್ತೆ ಅನ್ನೋದು ಮಾತ್ರ ಗೊತ್ತಿರಲ್ಲ. ಏಕೆಂದರೆ ನಾವು ಬಹುತೇಕ ಎಲ್ಲಾ ಖಾದ್ಯಕ್ಕೂ ತೆಂಗಿನ ಕಾಯಿ ಚಟ್ನಿ ಮಾಡುತ್ತೇವೆ. ಇದು ಚಪಾತಿ, ದೋಸೆ, ಇಡ್ಲಿ ಸೇರಿ ಎಲ್ಲಾ ಬಗೆಯ ಖಾದ್ಯಕ್ಕೂ ರುಚಿ ತರುತ್ತದೆ. ಹೀಗಾಗಿ ನಾವು ಹೊಸ ರುಚಿಯ ಹೊಸ ಬಗೆಯ ಚಟ್ನಿ ಮಾಡುವುದಿಲ್ಲ ಯಾವಾಗಲು ಇದೇ ಚಟ್ನಿ ಮಾಡುತ್ತಿರುತ್ತೇವೆ.
ಆದ್ರೆ ಚಪಾತಿ, ದೋಸೆ, ಇಡ್ಲಿ ಸೇರಿದಂತೆ ಎಲ್ಲಾ ಖಾದ್ಯದ ಜೊತೆಗೆ ಸರಿಯಾಗಿ ಹಿಡಿಸುವ ಚಟ್ನಿ ಅಂದ್ರೆ ಅದು ಟೊಮೆಟೋ, ಈರುಳ್ಳಿ ಚಟ್ನಿಯಾಗಿದೆ. ಇದರ ರುಚಿಯನ್ನ ನೀವು ಒಮ್ಮೆ ನೋಡಿದರೆ ಮತ್ತೆಂದಿಗೂ ನೀವು ಕಾಯಿ ಚಟ್ನಿ ಮಾಡಲು ಮನಸ್ಸಾಗಲ್ಲ. ಅಷ್ಟೊಂದು ರುಚಿಕರ ಚಟ್ನಿ ಇದಾಗಿದೆ.

ಹಾಗೆ ಈ ಟೊಮೆಟೋ ಈರುಳ್ಳಿ ಚಟ್ನಿ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಸುಲಭವಾಗಿ ಕಡಿಮೆ ವಸ್ತು ಹಾಕಿ ಗಡಿಬಿಡಿಯ ನಡುವೆಯೇ ಮಾಡಿ ಬಿಡಬಹುದು. ಹಾಗಾದ್ರೆ ನಾವಿಂದು ಈ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ? ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ ನೋಡಿ.
ಈರುಳ್ಳಿ, ಟೊಮೆಟೋ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ - 2
- ಟೊಮೆಟೋ -3
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಪುದಿನ ಸೊಪ್ಪು
- ಹಸಿಮೆಣಸಿನ ಕಾಯಿ
- ಒಣ ಮೆಣಸಿನಕಾಯಿ
- ಎಣ್ಣೆ
- ಬೆಳ್ಳುಳ್ಳಿ
- ಶುಂಠಿ
- ಹುಣಸೆಹಣ್ಣು
- ಸಾಸಿವೆ
- ಉಪ್ಪು
ಈರುಳ್ಳಿ, ಟೊಮೆಟೋ ಚಟ್ನಿ ಮಾಡುವ ವಿಧಾನ
ಮೊದಲು ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿ ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಒಣ ಮೆಣಸು 4, ಹೆಚ್ಚಿರುವ 2 ಈರುಳ್ಳಿ ಹಾಕಿಕೊಂಡು 5 ನಿಮಿಷ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಚೆನ್ನಾಗಿ ಬೇಯಬೇಕು. ಬಣ್ಣ ಬದಲಾಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಟೊಮೆಟೋ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಕೊತ್ತಂಬರಿ, ಪುದಿನ ಸೊಪ್ಪು, ಕರಿಬೇವಿನ ಸೊಪ್ಪು ಸಹ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಹುಣಸೆ ಹುಳಿ, ತೆಂಗಿನ ತುರಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಆದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದನ್ನು ರುಬ್ಬಿಕೊಳ್ಳಬೇಕು. ರುಬ್ಬುವಾಗ ಉಪ್ಪು ಹಾಕಿಕೊಳ್ಳಿ. ಹಾಗೆ ನೀರು ಸಹ ಯಾವ ಹದಕ್ಕೆ ಬೇಕೋ ಆ ರೀತಿ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ನಂತರ ರುಬ್ಬಿದ ಚಟ್ನಿ ಒಂದು ಬೌಲ್ಗೆ ಹಾಕಿಕೊಳ್ಳಿ. ಈಗ ಇಂದು ಸಣ್ಣ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಗೂ ಕರಿಬೇವು ಬಿಸಿ ಮಾಡಿಕೊಂಡು ಈ ಚಟ್ನಿಗೆ ಹಾಕಿಕೊಂಡರೆ ರುಚಿ ರುಚಿಯ ಚಟ್ನಿ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ಚಟ್ನಿ ಮಾಡಿ ನೋಡಿ. ಇದು ಚಪಾತಿ, ಇಡ್ಲಿ, ದೋಸೆ ಸೇರಿ ಅನ್ನಕ್ಕೂ ಕೂಡ ಬಳಸಬಹುದು. ಇದರ ರುಚಿಯನ್ನು ಒಮ್ಮೆ ಸವಿದು ನೋಡಿ.



Click it and Unblock the Notifications
