Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹೋಟೆಲ್ ರುಚಿಯ ಮೈಸೂರು ಬೋಂಡಾ ಮನೆಯಲ್ಲಿ ಮಾಡಿ.! ಎಷ್ಟೊಂದು ಸುಲಭ ಗೊತ್ತಾ?
ರಾಜ್ಯದ ಒಂದೊಂದು ಜಿಲ್ಲೆ ಒಂದೊಂದು ಖಾದ್ಯಕ್ಕೆ ಹೆಸರುವಾಸಿ ಅದರಲ್ಲಿ ಮೈಸೂರು ಕೆಲವು ವಿಶಿಷ್ಟ ಖಾದ್ಯಗಳ ಪಟ್ಟಿಗೆ ಸೇರುವ ಜಿಲ್ಲೆ. ಮೈಸೂರು ಪಾಕ್ ಸಿಹಿತಿಂಡಿಗಳ ಸಾಲಿನ ಅತ್ಯಂತ ರುಚಿಕರ ಖಾದ್ಯ. ಹಾಗೆ ಮೈಸೂರು ಬೋಂಡಾ ಸಹ ಹಲವರ ನೆಚ್ಚಿನ ತಿಂಡಿ.
ಬೆಳಗ್ಗೆ ತಿಂಡಿಗೆ ಅಥವಾ ಸಂಜೆ ಸ್ನ್ಯಾಕ್ಸ್ ರೀತಿ ಇದನ್ನು ಸವಿಯೋದನ್ನು ನೋಡಬಹುದು. ಬರೀ ರಾಜ್ಯದ ಹೋಟೆಲ್, ಕ್ಯಾಂಟೀನ್ಗಳಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ಮೈಸೂರು ಬೋಂಡಾ ಸವಿಯಲು ಸಿಗುತ್ತದೆ. ಕೆಲವರಿಗೆ ಈ ಬೋಂಡಾ ತುಂಬಾನೆ ರುಚಿಸುತ್ತೆ.

ಮಕ್ಕಳಿಂದ ಹಿರಿಯರ ವರೆಗೂ ಇದನ್ನು ಇಷ್ಟಪಡುವವರು ಇದ್ದಾರೆ. ಏಕೆಂದರೆ ಇದು ಅತ್ಯಂತ ಮೃದುವಾಗಿರುವ ಕಾರಣದಿಂದಾಗಿ ಹೆಚ್ಚು ಸವಿಯಬಹುದು. ಹೀಗಾಗಿ ದಕ್ಷಿಣ ಭಾರತದ ಈ ಖಾದ್ಯ ಎಲ್ಲೆಡೆ ಫೇಮಸ್ ಆಗಿದೆ. ಈ ಮೈಸೂರು ಬೋಂಡಾದ ಜೊತೆಗೆ ತೆಂಗಿನಕಾಯಿ ಚಟ್ನಿ ಇದ್ದರೆ ಅದರ ರುಚಿಯೇ ಬೇರೆಯಾಗಿರುತ್ತೆ.
ಹಾಗಾದ್ರೆ ನಾವಿಂದು ಈ ಮೈಸೂರು ಬೋಂಡಾ ಹಾಗೂ ಚಟ್ನಿಯನ್ನು ಮನೆಯಲ್ಲಿ ಮಾಡುವುದು ಹೇಗೆ ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ. ಮೈಸೂರು ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಮೈಸೂರು ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು- ಕಾಲು ಕೆ.ಜಿ
- ಮೊಸರು- 200 ಎಂಎಲ್
- ಸೋಡಾ
- ಹಸಿರು ಮೆಣಸಿನಕಾಯಿ - 5
- ಶುಂಠಿ
- ಕೊತ್ತಂಬರಿ
- ಜಿರಿಗೆ
- ಉಪ್ಪು
ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ತೆಂಗಿನಕಾಯಿ- ಒಂದು ಮುಷ್ಟಿ
- ಹುರಿಗಡಲೆ- 4 ಟಿಸ್ಪೂನ್
- ಹಸಿ ಮೆಣಸು
- ಹುಣಸೆ ಹುಳಿ
- ಶುಂಠಿ
- ಕೊತ್ತಂಬರಿ ಸೊಪ್ಪು
- ಉಪ್ಪು
ಮೈಸೂರು ಬೋಂಡಾ ಮಾಡುವುದು ಹೇಗೆ?
ಮೊದಲು ಒಂದು ಬೌಲ್ಗೆ ಮೈದಾ ಹಿಟ್ಟು ಹಾಕಿಕೊಂಡು ಅದನ್ನು ಜರಡಿ ಹಿಡಿದುಕೊಳ್ಳಿ. ಬಳಿಕ ಇದಕ್ಕೆ ಉಪ್ಪು, ಶುಂಠಿ, ಕೊತ್ತಂಬರಿ ಸೊಪ್ಪು ಹೆಚ್ಚಿಕೊಂಡು ಇದಕ್ಕೆ ಹಾಕಿ. ಇದಕ್ಕೆ ಮೊಸರು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕೈಯಿಂದಲೇ ಮಿಕ್ಸ್ ಮಾಡಿ.
ಈ ಹಿಟ್ಟು ಗಂಟು ಗಂಟಾಗಬಾರದು. ಹೀಗೆ ಮಿಕ್ಸ್ ಮಾಡಿದ ಬಳಿಕ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಮುಚ್ಚಿಟ್ಟುಕೊಳ್ಳಿ. 15 ನಿಮಿಷ ಮುಚ್ಚಿ ಇಟ್ಟರೆ ಸಾಕಾಗುತ್ತದೆ. ಹೀಗೆ ಹಿಟ್ಟು ಮಾಡಿಟ್ಟ ಬಳಿಕ ಬಳಿಕ ಈ ಸಮಯದಲ್ಲಿ ಚಟ್ನಿ ರೆಡಿ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಸ್ವಲ್ಪ ತೆಂಗಿನಕಾಯಿ, ಹುರಿಗಡಲೆ, ಹುಣಸೆಹುಳಿ, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿ ಮೆಣಸು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಹಾಕಬೇಕು ಎಂದೇನಿಲ್ಲ. ಇಷ್ಟಾದರೆ ಚಟ್ನಿ ರೆಡಿಯಾಗುತ್ತೆ.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಕಾಯಲು ಬಿಡಿ. ಮಧ್ಯಮ ಉರಿಯಲ್ಲಿ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರದಲ್ಲಿ ಹಿಟ್ಟು ತೆಗೆದುಕೊಂಡು ಎಣ್ಣೆಗೆ ಬಿಡಿ. ನಿಂಬೆ ಹಣ್ಣಿನ ಗಾತ್ರದಲ್ಲಿ ಮೈಸೂರು ಬೋಂಡಾ ಮಾಡಿಕೊಂಡರೆ ಉತ್ತಮ. ಇಷ್ಟಾದರೆ ನಿಮ್ಮ ಮುಂದೆ ಮೈಸೂರು ಬೋಂಡಾ ರೆಡಿಯಾಗುತ್ತದೆ. ಇದೊಂದು ಸುಲಭದ ರೆಸಿಪಿಯಾಗಿದ್ದು ಸವಿಯಲು ಬಹಳ ರುಚಿ ನೀಡುತ್ತೆ.
ಇದನ್ನು ಕಾಯಿ ಚಟ್ನಿ ಜೊತೆ ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೆಸಿಪಿಯನ್ನು ಮನೆಯಲ್ಲಿ ಮಾಡಿ ನೋಡಿ. ನಮಗೂ ಸಹ ಇಷ್ಟವಾಗುತ್ತೆ.



Click it and Unblock the Notifications