Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಗಣೇಶನಿಗೆ ಪ್ರಿಯವಾದ ಹೆಸರು ಬೇಳೆ ಲಾಡು ಮಾಡಿ ನೋಡಿ..!! 3 ವಸ್ತು ಇದ್ರೆ ಸಾಕು..!!
ಹಬ್ಬಗಳು ಬರುತ್ತಿವೆ. ಹಬ್ಬಕ್ಕೆ ಈಗಲೇ ಸಿದ್ಧತೆಯೂ ಆರಂಭಗೊಂಡಿದೆ. ಹಬ್ಬ ಅಂದ ಮೇಲೆ ಅಲ್ಲಿ ಸಿಹಿ ತಿಂಡಿ ಇಲ್ಲದಿದ್ದರೆ ಹೇಗೆ? ಯಾವುದಾದರೊಂದು ಸಿಹಿ ತಿಂಡಿಯನ್ನ ಮಾಡಿಯೇ ಮಾಡುತ್ತಾರೆ. ಅದರಲ್ಲಿ ಈ ಗಣೇಶ ಚುತುರ್ಥಿ ಹಬ್ಬದಂದು ಸಿಹಿ ಕಡಬು, ಮೋದಕ, ಅತ್ರಾಸ, ರವೆ ಉಂಡೆ ಹೀಗೆ ಒಂದಾದರು ತಿಂಡಿ ಇದ್ದೇ ಇರುತ್ತೆ.
ಹಬ್ಬದಲ್ಲಿ ಊಟಕ್ಕೆ ಇಂದು ತಿಂಡಿ ಹಾಗೆ ನೈವೇದ್ಯಕ್ಕೊಂದು ಸಿಹಿ ಮಾಡುವುದು ನಡೆದುಕೊಂಡು ಬಂದಿದೆ. ಗೌರಿ ಗಣೇಶನ ಹಬ್ಬದಲ್ಲಿ ಹೆಚ್ಚಾಗಿ ಬೆಲ್ಲ ಬಳಸಿ ಮಾಡುವ ಸಿಹಿ ಮಾಡುತ್ತಾರೆ. ಗಣಪನಿಗೆ ಸಿಹಿ ಅಂದರೆ ಬಹಳ ಇಷ್ಟವೆಂದು ಮೋದಕ ಮಾಡುತ್ತಾರೆ. ಆದ್ರೆ ನಾವಿಂದು ಲಾಡು ಸಿಹಿ ತಿಂಡಿ ಕುರಿತಂತೆ ತಿಳಿದುಕೊಳ್ಳೋಣ.

ಹಲವು ಬಗೆಯ ಲಾಡುಗಳನ್ನ ಮಾಡಿ ನಾವು ಸವಿದಿರುತ್ತೇವೆ, ಆದ್ರೆ ನಾವಿಂದು ಗಣೇಶನಿಗೆ ಪ್ರಿಯವಾದ ಹೆಸರು ಬೇಳೆಯ ಲಾಡು ಮಾಡುವ ಕುರಿತು ತಿಳಿದುಕೊಳ್ಳೋಣ. ಗಣೇಶನಿಗೆ ಸಿಹಿ ಲಾಡು ಎಂದರೆ ಪಂಚಪ್ರಾಣ. ಹೀಗಾಗಿ ನಾವಿಂದು ಲಾಡುಗಳಲ್ಲಿ ಬಹಳ ಸುಲಭವಾಗಿ, ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ ಅದ್ಭುತ ರುಚಿಯ ಲಾಡು ಮಾಡುವ ಕುರಿತು ತಿಳಿಯೋಣ.
ಈ ಹೆಸರು ಬೇಳೆ ಲಾಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹೆಸರು ಬೇಳೆ ಲಾಡು ಮಾಡುವ ವಿಧಾನವೇನು?, ಹೆಸರು ಬೇಳೆ ಲಾಡು ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ನೋಡೋಣ.
ಹೆಸರು ಬೇಳೆ ಲಾಡು ಮಾಡಲು ಬೇಕಾಗುವ ವಸ್ತುಗಳು
- ಹೆಸರುಬೇಳೆ- ಒಂದು ಕಪ್
- ಸಕ್ಕರೆ- ಅರ್ಧ ಕಪ್
- ತುಪ್ಪ
- ಗೋಡಂಬಿ
- ಬಾದಾಮಿ
- ಏಲಕ್ಕಿ
- ಎಣ್ಣೆ
ಹೆಸರು ಬೇಳೆ ಲಾಡು ಮಾಡುವುದು ಹೇಗೆ?
ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದು ಬಿಸಿಯಾದಾಗ ಅದಕ್ಕೆ ಹೆಸರು ಬೇಳೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಸುಮಾರು 5 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ. ಹೆಸರು ಬೇಳೆ ಕರಿಯಲು ಬಿಡಬೇಕು. ಕಪ್ಪು ಬಣ್ಣಕ್ಕೆ ತಿರುಗಬಾರದು. ಹೆಸರು ಬೇಳೆ ಹುರಿದ ಬಳಿಕ ಅದನ್ನು ತಣ್ಣಗಾಗಲು ಬಿಡಿ.
ನಂತರ ಈ ಹೆಸರು ಬೇಳೆಯನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ನುಣ್ಣಗೆ ಪೌಡರ್ನಂತೆ ಪುಡಿ ಮಾಡಿಕೊಳ್ಳಿ. ಈಗ ಮತ್ತೆ ಅದೇ ಬಾಣಲೆಗೆ ಈ ಪುಡಿ ಮಾಡಿದ ಹಿಟ್ಟು ಹಾಕಿ. ಇದಕ್ಕೆ ತುಪ್ಪ ಹಾಕಿಕೊಂಡು ಚೆನ್ನಾಗಿ ಬೆರೆಸಿಕೊಳ್ಳಬೇಕು. ಹಿಟ್ಟಿಗೆ ತುಪ್ಪ ಚೆನ್ನಾಗಿ ಬೆರೆಯಬೇಕು. ಇದು ಹೂರ್ಣದಂತೆ ಬರಬೇಕು. 5 ನಿಮಿಷ ಮಿಕ್ಸ್ ಮಾಡಿದರೆ ಸಾಕಾಗುತ್ತದೆ.
ಬಳಿಕ ಈ ಹಿಟ್ಟನ್ನು ಒಂದು ಬೌಲ್ಗೆ ಹಾಕಿಕೊಂಡು ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸಿಗೆ ಸಕ್ಕರೆ ಹಾಗೂ ಏಲಕ್ಕಿ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಸಕ್ಕರೆ ಪೌಡರ್ ಅನ್ನು ಈಗ ಹಿಟ್ಟು ಹಾಕಿರುವ ಬೌಲ್ಗೆ ಹಾಕಿಕೊಳ್ಳಿ, ನಂತರ ಇದಕ್ಕೆ ಪುಡಿ ಮಾಡಲಾದ ಹೋಡಂಬಿ ಹಾಗೂ ಬಾದಾಮಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಈ ಹಿಟ್ಟನ್ನು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಉಂಡೆ ಕಟ್ಟಲು ಹಿಟ್ಟು ಹದವಾಗಿ ಬಾರದಿದ್ದರೆ ಒಂದು ಸ್ಪೂನ್ ತುಪ್ಪ ಬಿಸಿ ಮಾಡಿಕೊಂಡು ಈ ಹಿಟ್ಟಿಗೆ ಹಾಕಿ ನಂತರ ಮಿಕ್ಸ್ ಮಾಡಿ ಲಾಡು ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೆಸರು ಬೇಳೆ ಲಾಡು ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಹಬ್ಬಕ್ಕೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
