For Quick Alerts
ALLOW NOTIFICATIONS  
For Daily Alerts

ರೋಗನಿರೋಧಕ ಶಕ್ತಿ ಹೆಚ್ಚಿಸುವ ಬ್ರೊಕೋಲಿ ರೈಸ್ ರೆಸಿಪಿ ಮಾಡುವ ವಿಧಾನ

Posted By:
|

ಮೊದಲು ಮಕ್ಕಳನ್ನು ಶಾಲೆಗೆ ಕಳುಹಿಸುವ ತರಾತುರಿ ತಾಯಂದಿರಿಗೆ ಇರುತ್ತಿತ್ತು. ಆದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಶಾಲೆ ಇಲ್ಲದಿದ್ದರೇನಂತೆ ಶಾಲೆಯ ವಾತಾವರಣವನ್ನು ಮನೆಯಲ್ಲೇ ಸೃಷ್ಟಿಸಬೇಕಾದ ಒತ್ತಡವಿದೆ. ಶಾಲೆಯ ಯುನಿಫಾರ್ಮ್ ತೊಡಿಸಿ ಲ್ಯಾಪ್ ಟಾಪ್ ಮುಂದೆ ಕೂರಿಸಿ ಆನ್ ಲೈನ್ ತರಗತಿಗೆ ಮಕ್ಕಳನ್ನು ಅಣಿಗೊಳಿಸಬೇಕು.

ಅಷ್ಟೇ ಅಲ್ಲ ಮಕ್ಕಳು ಕೇಳಿಸಿಕೊಳ್ಳುವ ಪಾಠವನ್ನು ಪೋಷಕರೂ ಕೇಳಿಸಿಕೊಳ್ಳಬೇಕು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಅಡುಗೆ ಕೆಲಸಗಳನ್ನು ಮುಗಿಸಿಕೊಳ್ಳಬೇಕು.ಮನೆಯಲ್ಲೇ ಮಕ್ಕಳು ಇರುವುದರಿಂದಾಗಿ ಅದೂ ಇದೂ ಬೇಕು ಎಂದು ಕೇಳುತ್ತಲೇ ಇರುತ್ತಾರೆ.

ಹಾಗಾಗಿ ಅದೆಷ್ಟೋ ಮಹಿಳೆಯರಿಗೆ ಅಡುಗೆಮನೆ ಇದೀಗ 24/7 ಕೆಲಸದ ಕೋಣೆಯಾಗಿದೆ. ತಮ್ಮ ಕೆಲಸಗಳನ್ನು ಬೇಗ ಬೇಗ ಮುಗಿಸಬೇಕು ಎಂದರೆ ಫಟಾಫಟ್ ತಯಾರಾಗುವ ಅಡುಗೆಗಳನ್ನು ಹೆಚ್ಚೆಚ್ಚು ಕಲಿತುಕೊಳ್ಳುವುದು ಬಹಳ ಮುಖ್ಯ.


ಅಡುಗೆ ಬೇಗ ಮುಗಿಯಬೇಕು ಎಂದು ಪೌಷ್ಟಿಕಾಂಶದಲ್ಲಿ ರಾಜಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೇ? ಅದರಲ್ಲೂ ಸದ್ಯ ಇರುವ ಪರಿಸ್ಥಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿಯೇ ನಾವಿಲ್ಲಿ ವಿಶೇಷ ಅಡುಗೆಯೊಂದನ್ನು ತಿಳಿಸಿಕೊಡುತ್ತಿದ್ದೇವೆ. ಅದುವೆ ಬ್ರಾಕೋಲಿ ರೈಸ್.

ಹಸಿರು ತರಕಾರಿಗಳು ಯಾವಾಗಲೂ ಕೂಡ ನಮ್ಮ ದೇಹಕ್ಕೆ ಹೆಚ್ಚಿನ ಲಾಭ ಮಾಡುತ್ತದೆ. ಆ ಹಸಿರು ತರಕಾರಿಗಳಲ್ಲಿ ಬ್ರೊಕೋಲಿ ಕೂಡ ಒಂದು. ನಿಮ್ಮ ಅಡುಗೆಯಲ್ಲಿ ಆಗಾಗ ಇದರ ಬಳಕೆ ಬಹಳ ಲಾಭಾದಾಯಕ. ಸ್ವಲ್ಪ ದುಬಾರಿ ಅನ್ನಿಸುವ ತರಕಾರಿಯೇ ಆದರೂ ಪೌಷ್ಟಿಕಾಂಶದ ವಿಚಾರದಲ್ಲಿ ಮೇಲುಗೈ ಸಾಧಿಸುವ ತರಕಾರಿ ಇದು. ಹಾಗಾದ್ರೆ ರೆಸಿಪಿ ತಯಾರಿಕೆಗೆ ಏನೆಲ್ಲಾ ಬೇಕು ನೋಡೋಣ ಬನ್ನಿ.

Broccoli Rice Recipe/ ಬ್ರೊಕೋಲಿ ರೈಸ್ ರೆಸಿಪಿ ಮಾಡುವ ವಿಧಾನ
Broccoli Rice Recipe/ ಬ್ರೊಕೋಲಿ ರೈಸ್ ರೆಸಿಪಿ ಮಾಡುವ ವಿಧಾನ
Prep Time
10 Mins
Cook Time
20M
Total Time
30 Mins

Recipe By: Sushma

Recipe Type: Ricebath

Serves: 4

Ingredients
 • ಬೇಕಾಗುವ ಸಾಮಗ್ರಿಗಳು

  ಬ್ರೊಕೋಲಿ- ಒಂದು ಮಧ್ಯಮಗಾತ್ರದ್ದು

  ಗೇರುಬೀಜ- ಅರ್ಧ ಮುಷ್ಟಿ

  ಈರುಳ್ಳಿ- ಎರಡು

  ಅರಿಶಿನ- ಚಿಟಿಕೆ

  ಹಸಿಮೆಣಸು - ಮೂರರಿಂದ ನಾಲ್ಕು

  ಉಪ್ಪು- ರುಚಿಗೆ ತಕ್ಕಷ್ಟು

  ಜೀರಿಗೆ - ಅರ್ಧ ಸ್ಪೂನ್

  ಶುಂಠಿ- ಸಣ್ಣ ತುಂಡು(ಎರಡು ಬೆಳ್ಳುಳ್ಳಿ ಗಾತ್ರ)

  ಬೆಳ್ಳುಳ್ಳಿ- 5 ರಿಂದ 6

  ಚಕ್ಕೆ- ಒಂದು ಸಣ್ಣ ತುಂಡು

  ಮೊಗ್ಗು- 2

  ಏಲಕ್ಕಿ - 2

  ಲವಂಗ - 2

  ಚಕ್ಕೆಎಲೆ- 1

  ಅಕ್ಕಿ-250 ಗ್ರಾಂ

  ಅಡುಗೆ ಎಣ್ಣೆ ಅಥವಾ ತುಪ್ಪ - 4 ಸ್ಪೂನ್

  ಬೇವಿನ ಸೊಪ್ಪು- ಐದರಿಂದ ಆರು ಎಸಳು

  ಕೊತ್ತುಂಬರಿ ಸೊಪ್ಪು - ಒಂದೆರಡು ಎಸಳು

Red Rice Kanda Poha
How to Prepare
 • ಮಾಡುವ ವಿಧಾನ:

  ಅಕ್ಕಿಯನ್ನು ತೊಳೆದು ಐದು ನಿಮಿಷ ನೀರಿನಲ್ಲಿ ನೆನಸಿಡಿ.

  ಮೊದಲಿಗೆ ಕುಕ್ಕರ್ ಗೆ ಎರಡು ನಾಲ್ಕು ಸ್ಪೂನ್ ಎಣ್ಣೆ ಹಾಕಿ.

  ಅದಕ್ಕೆ ಜೀರಿಗೆಯನ್ನು ಹಾಕಿ. ನಂತರ ಏಲಕ್ಕಿ, ಲವಂಗ, ಚಕ್ಕೆ, ಚಕ್ಕೆಎಲೆ, ಮೊಗ್ಗು ಹಾಕಿ ಸ್ವಲ್ಪ ಕೈಯಾಡಿಸಿ.

  ಜೀರಿಗೆ ಕೆಂಬಣ್ಣಕ್ಕೆ ಬಂದಾಗ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಸೇರಿಸಿ. (ಶುಂಠಿಯ ಬೆಲೆ ಕಡಿಮೆ ಇದ್ದಾಗ ನೀವು ಅದನ್ನು ಪುಡಿ ಮಾಡಿಟ್ಟುಕೊಳ್ಳಬಹುದು.)

  ಶುಂಠಿ ಬೆಳ್ಳುಳ್ಳಿಯ ಹಸಿ ವಾಸನೆ ಹೋದ ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ. ಈರುಳ್ಳಿ ಕೆಂಬಣ್ಣಕ್ಕೆ ಬಂದಾಗ ಹಸಿಮೆಣಸನ್ನು ಹಾಕಿ ಚಿಟಿಕೆ ಅರಿಶಿನ ಸೇರಿಸಿ.

  ನಂತರ ಗೇರುಬೀಜ ಹಾಕಿ ಸ್ವಲ್ಪ ಹುರಿಯಿರಿ. ನಂತರ ಚೆನ್ನಾಗಿ ತೊಳೆದು ನೆನಸಿಟ್ಟ ಅಕ್ಕಿಯನ್ನು ಸೇರಿಸಿ.

  ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅಗತ್ಯವಿರುವಷ್ಟು ನೀರು ಸೇರಿಸಿ. ನೆನಪಿರಲಿ ಬಾಸುಮತಿ ಅಕ್ಕಿಗೆ ಬಹಳ ಕಡಿಮೆ ನೀರು ಸಾಕಾಗುತ್ತದೆ.

  ಬ್ರಕೋಲಿಯಲ್ಲೂ ನೀರಿನಂಶ ಅಧಿಕವಿರುವುದರಿಂದಾಗಿ ಅಗತ್ಯಕ್ಕಿಂತ ಅರ್ಧ ಲೋಟ ಕಡಿಮೆ ನೀರು ಹಾಕುವುದು ಒಳ್ಳೆಯದು.

  ಒಂದು ಕುದಿ ಬಂದ ನಂತರ ಅದಕ್ಕೆ ಕೊತ್ತುಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಬ್ರೊಕೋಲಿ ಸೇರಿಸಿ ಒಂದು ವಿಷಿಲ್ ಬರುವವರೆಗೆ ಕಾಯಿರಿ. ವಿಷಿಲ್ ಇಳಿದ ನಂತರ ಬ್ರೊಕೋಲಿ ರೈಸ್ ರೆಡಿಯಾಗಿರುತ್ತದೆ.

Instructions
 • ಬ್ರಕೋಲಿಯಲ್ಲಿ ವಿಟಮಿನ್ ಗಳು ಹೇರಳವಾಗಿರುತ್ತದೆ.ರೈಬೋಫ್ಲೇವಿನ್,ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಇದರಲ್ಲಿ ಅಧಿಕವಾಗಿರುತ್ತದೆ. ಬ್ರಕೋಲಿ ರೈಸ್ ಟಿಫಿನ್ ಬಾಕ್ಸ್ ಗೆ ಕೂಡ ಅತ್ಯುತ್ತಮವಾಗಿರುತ್ತದೆ. ಬ್ರಕೋಲಿ ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿಯೂ ಇದೆ.ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಕೂಡ ಇದಕ್ಕಿದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಇದು ಹೇಳಿ ಮಾಡಿಸಿದ ತರಕಾರಿಯಾಗಿದೆ.
Nutritional Information
 • ಕ್ಯಾಲೋರಿಗಳು: - 31
 • ಕೊಬ್ಬಿನಾಂಶ: - 0.4 ಗ್ರಾಂಗಳು.
 • ಪ್ರೋಟೀನ್: - 2.5 ಗ್ರಾಂಗಳು.
 • ಕಾರ್ಬೋಹೈಡ್ರೇಟ್ಸ್: - 6 ಗ್ರಾಂಗಳು
 • ಸಕ್ಕರೆ: - 1.5 ಗ್ರಾಂಗಳು
 • ನೀರು: - 89%
[ 5 of 5 - 76 Users]
X