Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಜೆ ವೇಳೆ ಸವಿಯಲು ಕೊಡಿ ಗಿರ್ಮಿಟ್..! ಸಿಕ್ಕಾಪಟ್ಟೆ ಸಿಂಪಲ್..!
ನೀವು ಸಂಜೆ ವೇಳೆ ಸೈಡ್ ಡಿಶ್ ಸೇವಿಸುವ ಅಭ್ಯಾಸ ಇದ್ದರೆ ಖಂಡಿತ ನೀವು ಚುರುಮುರಿ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಂತು ಚುರುಮುರಿ ಅಂದ್ರೆ ಜನರಿಗೆ ಪಂಚಪ್ರಾಣ. ಮಸಾಲೆ ಬರಿತ ಚುರುಮುರಿ ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಾಯಿ ಚಪ್ಪರಿಸಿ ಸವಿಯುತ್ತಾರೆ.
ಇದನ್ನ ಬೇರೆ ಬೇರೆ ಹೆಸರಿಂದ ಕರೆಯುತ್ತಾರೆ. ಗಿರ್ಮಿಟ್, ಮಸಾಲ ಮಂಡಕ್ಕಿ, ಚುರುಮುರಿ ಹೀಗೆ ನಾನಾ ಹೆಸರಿಂದ ಕರೆಯುತ್ತಾರೆ. ಸಂಜೆ ವೇಳೆ ಚುರುಮುರಿ ತಿನ್ನುತ್ತಾ ಟಿವಿ ನೋಡೋ ಮಜಾನೆ ಬೇರೆ. ಆದ್ರೆ ಕೆಲವರಿಗೆ ಈ ಚುರುಮುರಿ ಮಾಡೋದು ಸುಲಭ ಅನ್ನೋದೆ ತಿಳಿದಿಲ್ಲ. ಜೊತೆಗೆ ಹೇಗೆ ಮಾಡಬೇಕು ಅನ್ನೋದು ಸಹ ಗೊತ್ತಿರಲ್ಲ.

ಹಾಗಾದ್ರೆ ನಾವಿಂದು ಈ ಚುರುಮುರಿ ಮಾಡೋದು ಹೇಗೆ? ಗಿರ್ಮಿಟ್ ಮಾಡಲು ಬೇಕಾಗುವ ವಸ್ತುಗಳು ಯಾವುದು? ಸುಲಭವಾಗಿ ಮಾಡೋದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಗಿರ್ಮಿಟ್ ಮಾಡಲು ಬೇಕಾಗುವ ಪದಾರ್ಥಗಳು
- ಮಂಡಕ್ಕಿ- 1 ಬೌಲ್
- ಸಾಸಿವೆ 1/2 ಟೀಸ್ಪೂನ್
- ಜೀರಿಗೆ - 1/2 ಟೀಸ್ಪೂನ್
- ಬೆಳ್ಳುಳ್ಳಿ-8
- ಈರುಳ್ಳಿ (ಕತ್ತರಿಸಿದ) - 1
- ಇಂಗು - 1/4 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 5
- ಕರಿಬೇವಿನ ಎಲೆಗಳು - 2
- ಟೊಮೆಟೊ - 1
- ಹುರಿ ಗಡಲೆ ಪುಡಿ-2 ಟೀಸ್ಪೂನ್
- ಅರಿಶಿನ ಪುಡಿ - 1/2 ಟೀಸ್ಪೂನ್
- ಹುಣಸೆ ಹುಳಿ
- ಬೆಲ್ಲ - 1 tbs
- ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 ಚಮಚ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಗಿರ್ಮಿಟ್ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಹಾಕಿಕೊಳ್ಳಿ ಎಣ್ಣೆ ಸ್ವಲ್ಪ ಜಾಸ್ತಿ ಹಾಕಿಕೊಳ್ಳಿ. ಬಳಿಕ ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಇಂಗು, ಹಸಿ ಮೆಣಸಿನಕಾಯಿ, ಕರಿಬೇವು ಹಾಕಿಕೊಂಡು ತಿರುಗಿಸಿಕೊಳ್ಳಿ.
30 ಸೆಕೆಂಡ್ಗಳ ಬಳಿಕ ಟೊಮೆಟೋ ಹಾಕಿಕೊಳ್ಳಿ. ಟೊಮೆಟೊ ಸಣ್ಣದಾಗಿ ಹೆಚ್ಚಿಕೊಳ್ಳಿ. ಬಳಿಕ ಇದಕ್ಕೆ ಅರಶಿಣ, ಹುಣಸೆ ಹುಳಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದೇ ವೇಳೆ ಬೆಲ್ಲ ಹಾಗೂ ಉಪ್ಪು ಸಹ ಹಾಕಿ, ಇದಕ್ಕೆ ಗರಂ ಮಸಾಲ ಹಾಕಿಕೊಂಡು 2 ನಿಮಿಷ ಕುದಿಸಿಕೊಳ್ಳಿ. ಇದಕ್ಕೆ ಹುರಿಕಡಲೆಯ ಹಿಟ್ಟು ಮಾಡಿಕೊಂಡು ಅದನ್ನು ಹಾಕಿಕೊಳ್ಳಿ.
ಹೀಗೆ ಮಸಾಲೆ ಮಾಡಿಕೊಂಡು ಅದನ್ನು ಒಂದು ನಿಮಿಷ ಫ್ರೈ ಮಾಡಿ ಇಳಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಂಡು ನಿಮಗೆ ಎಷ್ಟು ಬೇಕೋ ಅಷ್ಟು ಗೊಜ್ಜು ಹಾಕಿಕೊಂಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಬೇಕಾದರೆ ನೀವು ಮಿಕ್ಸರ್ ಹಾಕಿಕೊಳ್ಳಬಹುದು. ಇದಕ್ಕೆ ಕೊನೆಯದಾಗಿ ಟೊಮೆಟೊ, ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಂಡು ಹಾಕಿ ಮಿಕ್ಸ್ ಮಾಡಿ ಸವಿಯಲು ನೀಡಬಹುದು.
ಟೀ-ಕಾಫಿ ಜೊತೆಗೆ ಈ ಗಿರ್ಮಿಟ್ ಸವಿಯಲು ನೀಡಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಈ ಮಸಾಲೆ ಮಾಡಿಕೊಳ್ಳೋದು ಸಹ ತುಂಬಾನೆ ಸುಲಭ, ಯಾವಾಗ ಬೇಕಾದರು ಈ ಮಸಾಲೆ ಮಾಡಬಹುದು. ಈ ಗೊಜ್ಜನ್ನು ಮಾಡಿಟ್ಟುಕೊಂಡು ಫ್ರಿಡ್ಜ್ನಲ್ಲಿಟ್ಟರೆ ಎಷ್ಟು ಬಾರಿ ಬೇಕಾದರು ಚುರುಮುರಿ ಮಾಡಿ ಸವಿಯಬಹುದು.
ಮಕ್ಕಳಿಗೆ ಸ್ವಲ್ಪ ಖಾರ ಕಡಿಮೆ ಬಳಸಿ ಮಾಡಿದರೆ ಇದರ ರುಚಿಗೆ ಅವರಿ ಮಾರುಹೋಗುತ್ತಾರೆ. ಮಳೆಗಾಲದ ಸಮಯದಲ್ಲಂತು ಗಿರ್ಮಿಟ್ ಸವಿಯೋದೆ ಒಂದು ಮಜಾ. ಹಾಗಾದ್ರೆ ಈ ಸುಲಭ ರೆಸಿಪಿಯನ್ನ ನೀವು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications