Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಗ್ಯಾಸ್ ಬಳಸದೆಯೇ ಬೊಂಬಾಟ್ ರುಚಿಯ ತಿಂಡಿ ರೆಡಿ ಮಾಡಿ..! ಇಲ್ಲಿದೆ ವಿಶೇಷ ರೆಸಿಪಿ
ಬೆಳಗ್ಗೆ ತಿಂಡಿ ಮಾಡೋಕೆ ಎಷ್ಟು ಯೋಚನೆ ಮಾಡಿರುತ್ತೀರಿ. ಯಾವ ತಿಂಡಿ ಮಾಡಬೇಕು? ಬೇಗ ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ತಿಂಡಿ ಯಾವುದು? ಕಡಿಮೆ ವಸ್ತು ಬಳಸಿ ಮಾಡುವ ತಿಂಡಿ ಯಾವುದು ಅಂತ ನೀವು ಯೋಚನೆ ಮಾಡುತ್ತೀರಿ. ಆದ್ರೆ ಯಾವುದು ಅಷ್ಟೊಂದು ಸುಲಭವಾಗಿ ನಿಮ್ಮ ಯೋಚನೆಗೆ ಸಿಗುವುದಿಲ್ಲ.
ಆದ್ರೆ ನಾವಿಂದು ಗ್ಯಾಸ್ ಇಲ್ಲದೆಯೇ ತಿಂಡಿ ಮಾಡಬಹುದು. ಹೌದು ನಿಮಗೆ ಇದು ಅಚ್ಚರಿ ಎನಿಸಬಹುದು. ಗ್ಯಾಸ್ ಬಳಸದೆಯೇ ಬೆಳಗಿನ ತಿಂಡಿ ರೆಡಿ ಮಾಡಬಹುದು. ಅದ್ರಲ್ಲೂ ಬೊಂಬಾಟ್ ರುಚಿಯ ತಿಂಡಿ ಯಾರು ಬೇಕಾದರು ಸವಿಯುವಂತೆ ಮಾಡಬಹುದು. ಹಾಗಾದ್ರೆ ಯಾವುದದು ತಿಂಡಿ, ಗ್ಯಾಸ್ ಬಳಸದೆ ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ನೀವು ಸಹ ಕೆಲವೊಂದು ತಿಂಡಿಯನ್ನು ಒಲೆ ಹಚ್ಚದೆ ಮಾಡಿರುತ್ತೀರಿ, ಆದ್ರೆ ನಾವಿಂದು ರುಚಿ ರುಚಿಯ ಅವಲಕ್ಕಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಅದ್ರಲ್ಲೂ ಒಲೆ ಹಚ್ಚದೆಯೇ ಈ ಅವಲಕ್ಕಿ ಮಾಡಬಹುದು. ಖಾರ ಖಾರವಾಗಿ ಬಾಯಿಗೆ ರುಚಿ ನೀಡುವ ಈ ಅವಲಕ್ಕಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಗ್ಯಾಸ್ ಬಳಸದೆ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು
- ಹಸಿರು ಮೆಣಸಿನಕಾಯಿ - 2
- ಉಪ್ಪು - 1 ಚಮಚ
- ಸೌತೆಕಾಯಿ - 2
- ಅವಲಕ್ಕಿ- ಸ್ವಲ್ಪ
- ತೆಂಗಿನ ತುರಿ - 1 ಬೌಲ್
- ಕೊತ್ತಂಬರಿ ಸೊಪ್ಪು
- ನಿಂಬೆ
ಗ್ಯಾಸ್ ಬಳಸದೆ ತಿಂಡಿ ಮಾಡುವುದು ಹೇಗೆ?
ಮೊದಲು ಎರಡು ಹಸಿ ಮೆಣಸು ತೆಗೆದುಕೊಂಡು ಅದನ್ನು ಕಟ್ಟಾಣಿ ಅಥವಾ ಸಣ್ಣ ಮಿಕ್ಸಿ ಜಾರ್‌ಗೆ ಜಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ರುಬ್ಬಿ. ತರಿ ತರಿಯಾಗಿ ರುಬ್ಬಿಕೊಳ್ಳಿ. ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಎರಡು ಎಳೆ ಸೌತೆಕಾಯಿ ತೆಗೆದುಕೊಳ್ಳಿ. ಅದರ ಸಿಪ್ಪೆಯನ್ನು ತೆಗೆದು ಅದನ್ನು ಚೆನ್ನಾಗು ತುರಿದುಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿ ಎತ್ತಿಟ್ಟುಕೊಳ್ಳಿ. ಈಗ ಅವಲಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿಕೊಂಡು ಇದಕ್ಕೆ ಪುಡಿ ಮಾಡಿದ ಹಸಿ ಮೆಣಸು ಹಾಕಿ ಕಲಸಿ, ನಂತರ ತುರಿದುಕೊಂಡಿರುವ ಸೌತೆಕಾಯಿ ಹಾಕಿಕೊಂಡು ಕಲಸಿ.
ಈಗ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಕಲಸಿಕೊಂಡ ಬಳಿಕ ಅಂತಿಮವಾಗಿ ಅರ್ಧ ನಿಂಬೆ ಹಣ್ಣು ಹಿಂಡಿಕೊಂಡು ಮತ್ತೊಮ್ಮೆ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಅವಲಕ್ಕಿ ರೆಡಿಯಾಗುತ್ತೆ. ಇದಕ್ಕೆ ಗ್ಯಾಸ್‌ನ ಅಗತ್ಯವಿಲ್ಲ, ಒಗ್ಗರಣೆಯೂ ಬೇಡ, ಯಾವುದೇ ವಸ್ತು ಕುದಿಸುವುದು ಬೇಡ ಹಾಗೆ ಮಾಡಬಹುದು.
ಇದಕ್ಕೆ ಯಾವುದೇ ದುಬಾರಿ ವಸ್ತುಗಳು, ಹೆಚ್ಚಿನ ಸಮಯವೂ ತೆಗೆದುಕೊಳ್ಳುವುದಿಲ್ಲ, ಕ್ಷಣ ಮಾತ್ರದಲ್ಲಿ ಮಾಡಿಕೊಳ್ಳಬಹುದು. ಇದೊಂದೇ ಅಲ್ಲ ಇನ್ನು ಹಲವು ತಿಂಡಿಗಳನ್ನು ನಾವು ಒಲೆ ಹಚ್ಚದೆ, ಗ್ಯಾಸ್ ಬಳಸದೆಯೂ ಮಾಡಬಹುದು. ಆದರೆ ಕೆಲವೊಂದು ಮಸಾಲೆ ಇಲ್ಲದೆ ಮಾಡಬೇಕಾಗುತ್ತದೆ. ನೀವು ತರಾತುರಿಯಲ್ಲಿ ಕಡಿಮೆ ಸಮಯದಲ್ಲಿ ಗಡಿಬಿಡಿಯಲ್ಲಿ ಇದ್ದಾಗ ಈ ಖಾದ್ಯವನ್ನ 5 ನಿಮಿಷದಲ್ಲಿ ರೆಡಿ ಮಾಡಬಹುದು.



Click it and Unblock the Notifications