Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
7 ಬಗೆಯ ಆರೋಗ್ಯಕರ ಪಾನೀಯ ರೆಸಿಪಿ
ಸುಸ್ತಾಗಿ ಬಂದಾಗ ಒಂದು ಲೋಟ ಪಾನೀಯ ಸಿಕ್ಕರೆ ಸುಸ್ತು ಕ್ಷಣಾರ್ಧದಲ್ಲಿ ಮಾಯ. ಪಾನೀಯಗಳಲ್ಲಿ ನಿಂಬೆ ಶರಬತ್ತು ಮಾಡುವುದು ಸುಲಭ ಎಂದು ಹೆಚ್ಚಾಗಿ ಅದನ್ನೇ ಮಾಡುತ್ತೇವೆ. ಆದರೆ ಈ ಪಾನೀಯದಷ್ಟೆ ಮಾಡಲು ಸುಲಭವಾದ ಮತ್ತು ಆರೋಗ್ಯಕರವಾದ ಇತರ ಅನೇಕ ಪಾನೀಯಗಳಿವೆ. ಅವುಗಳಲ್ಲಿ ಕೆಲವೊಂದು ಪಾನೀಯಗಳನ್ನು ತಯಾರಿಸುವ ವಿಧಾನ ಈ ಕೆಳಗ್ಗೆ ನೀಡಲಾಗಿದೆ ನೋಡಿ.

ಪಾನೀಯಗಳು:
1. ಲಸ್ಸಿ: ಮೊಸರಿಗೆ ಕಲ್ಲುಸಕ್ಕರೆ ಹಾಕಿ ಮಿಕ್ಸಿಯಲ್ಲಿ ಒಮ್ಮೆ ಆಡಿಸಿದರೆ ರುಚಿಕರವಾದ ಲಸ್ಸಿ ರೆಡಿ. ಆಯಾಸದ ಕೆಲಸ ಮಾಡುವಾಗ ಇದು ಕುಡಿದರೆ ಬೇಗನೆ ಸುಸ್ತಾಗುವುದಿಲ್ಲ.
* ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದು ಸಾಮಾನ್ಯ. ಆದರೆ ಈ ಮಿಶ್ರಣದ ಜೊತೆ ಒಂದು ಅರ್ಧ ಗ್ಲಾಸ್ ಕಿತ್ತಳೆ ಸರ ಸೇರಿಸಿದರೆ ರುಚಿಕರವಾದ ಲಸ್ಸಿ ರೆಡಿ.
2. ಕಲ್ಲಂಗಡಿ ಜ್ಯೂಸ್: ಕಲ್ಲಂಗಡಿ ಹಣ್ಣಿನ ತಿರುಳಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನಪುಡಿ ಬೆರೆಸಿ ಮಿಕ್ಸಿ ಯಲ್ಲಿ ಅರೆದರೆ ಆರೋಗ್ಯಕರ ಪಾನೀಯ ರೆಡಿ.
3. ರಾಗಿ ಪಾನೀಯ: ರಾಗಿಯನ್ನು ಮೊಳಕೆ ಬರಿಸಿದ ರುಬ್ಬಿ ಸೋಸಿಡಬೇಕು. ಅದಕ್ಕೆ ಅದಕ್ಕೆ ಬೆಲ್ಲ ಹಾಕಿ ತಣ್ಣಗೆ ಅಥವಾ ಬಿಸಿ ಮಾಡಿ ಕುಡಿಯಬಹುದು.
4. ಟೊಮೇಟೋ ಮಿಶ್ರ ಪಾನೀಯ: ಟೋಮೆಟೊ ಕಿತ್ತಳೆ, ನಿಂಬೆ ಅಥವಾ ಮೂಸಂಬಿ ಹಾಕಿ ಪಾನೀಯ ತಯಾರಿಸಬಹುದು.
5. ಹೆಸರಿನ ಕಾಳು ಪಾನೀಯ: ಹೆಸರು ಕಾಳನ್ನು ಹುರಿದು ಪುಡಿ ಮಾಡಿ, ನೀರು ಹಾಗೂ ಬೆಲ್ಲ ಸೇರಿಸಿ ಪಾನೀಯ ಮಾಡಿ ಕುಡಿಯಬಹುದು.
6. ಎಳ್ಳಿನ ಪಾನೀಯ: ಬಿಳಿ ಎಳ್ಳನ್ನು ಹುರಿದು ಪುಡಿ ಮಾಡಿ ಅದಕ್ಕೆ ನೀರು, ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ ಬೆರೆಸಿ ಕುಡಿಯಲು ರುಚಿಕರವಾಗಿರುತ್ತದೆ.
7. ದಾಳಿಂಬೆ ಜ್ಯೂಸ್: ದಾಳಿಂಬೆ ಬಿಡಿಸಿ ದಾಳಿಂಬೆ ಕಾಳುಗಳನ್ನು ತೆಗೆದುಕೊಂಡು ಮಿಕ್ಸರ್ ನಲ್ಲಿ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಸ್ವಲ್ಪ ನೀರಿನೊಂದಿಗೆ ಬೆರೆಸಿ ರುಬ್ಬಿಕೊಳ್ಳಬೇಕು. ದಾಳಿಂಬೆ ಕಾಳುಗಳನ್ನು ರುಬ್ಬಿಕೊಂಡ ನಂತರ ನೀರನ್ನು ಸೋಸಿಕೊಳ್ಳಬೇಕು. ನಂತರ ಸೋಸಿದ ನೀರಿಗೆ ನಿಂಬೆರಸ, ಕರಿ ಮೆಣಸಿನ ಪುಡಿ, ಸ್ವಲ್ಪ ಉಪ್ಪು ಮತ್ತು ಚಾಟ್ ಮಸಾಲ ಬೆರೆಸಬೇಕು. ಚೆನ್ನಾಗಿ ಇದನ್ನು ಕಲಕಿದ ಮೇಲೆ ಪುದೀನಾ ಎಲೆಯನ್ನು ಸಣ್ಣದಾಗಿ ಹೆಚ್ಚಿ ಉದುರಿಸಿದರೆ ರುಚಿಕರ ದಾಳಿಂಬೆ ಪಾನೀಯ ಕುಡಿಯಲು ಸಿದ್ಧವಾಗಿರುತ್ತೆ.



Click it and Unblock the Notifications
