Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತಂಪು-ಖಾರಾ : ಕ್ಯಾಪ್ಸಿಕಂ ಮೊಸರು ಮಸಾಲಾ!
ನಾವೀಗ ಮಾಡಹೊರಟಿರುವುದು- ಪಲ್ಯವೂ ಅಲ್ಲ, ಬೋಂಡಾ ಕೂಡ ಅಲ್ಲ. ಇದು ಕ್ಯಾಪ್ಸಿಕಂ ಮೊಸರು ಮಸಾಲಾ. ಭಾರತದಲ್ಲಿ ಬೇಸಿಗೆ ಝಳ ಸುರಿಯುತ್ತಿದೆಯಲ್ಲ, ಅದಕ್ಕೆ.
- ಕುಮಾರಿ ಗೀತಾ, ಬೆಂಗಳೂರು
ಕ್ಯಾಪ್ಸಿಕಂ ಬಜ್ಜಿ ಯಾರು ತಾನೇ ತಿಂದಿಲ್ಲ ? ಬೊಂಡ ಬಜ್ಜಿ ತಿಂದು ಯಾರು ತಾನೆ ಆಮೇಲೆ ಯಾಕಾದರೂ ತಿಂದನೋ ಅಂದುಕೊಂಡಿಲ್ಲ ! ಆದರೆ, ಮೆಣಸಿನಕಾಯಿ ಎಂದರೆ ಮುಖ ಸಿಂಡರಿಸುವ ಸಿಹಿ ನಾಲಗೆಯ ಮಂದಿಯೂ ಕ್ಯಾಪ್ಸಿಕಂ ಕುರಿತು ಮೆದುಧೋರಣೆ ವ್ಯಕ್ತಪಡಿಸುತ್ತಾರೆ.
ಕ್ಯಾಪ್ಸಿಕಂನಿಂದ ಅನೇಕಾನೇಕ ಅಡುಗೆಗಳನ್ನು ಮಾಡಬಹುದು. ಪಲ್ಯ ಕೂಡ ಭಲೇ ರುಚಿ! ಅಂದಹಾಗೆ, ನಾವೀಗ ಮಾಡಹೊರಟಿರುವುದು- ಪಲ್ಯವೂ ಅಲ್ಲ , ಬೋಂಡಾ ಕೂಡ ಅಲ್ಲ . ಇದು ಕ್ಯಾಪ್ಸಿಕಂ ಮೊಸರು ಮಸಾಲಾ. ಭಾರತದಲ್ಲಿ ಬೇಸಿಗೆ ಝಳ ಸುರಿಯುತ್ತಿದೆಯಲ್ಲ, ಅದಕ್ಕೆ.
ಬೇಕಾಗುವ ಸಾಮಗ್ರಿಗಳು :
- ತುಂಡು ಮಾಡಿದ ಈರುಳ್ಳಿ- 1 ಕಪ್.
- ಕತ್ತರಿಸಿದ ಟೊಮಾಟೊ- 1 ಕಪ್.
- ಕತ್ತರಿಸಿದ ದೊಣ್ಣೆ ಮೆಣಸಿನ ಕಾಯಿ (ಕ್ಯಾಪ್ಸಿಕಂ)- 1 ಕಪ್.
- 2-3 ಟೀ ಸ್ಪೂನ್ ರೀಫೈನ್ಡ್ ಎಣ್ಣೆ .
- ಜೀರಿಗೆ- 1 ಟೀ ಸ್ಪೂನ್.
- ಹಸಿ ಮೆಣಸಿನ ಕಾಯಿ- 3. ಉದ್ದುದ್ದ ಕತ್ತರಿಸಿಕೊಳ್ಳಿ.
- ಒಂದು ಎಸಳು ಕರಿಬೇವಿನ ಸೊಪ್ಪು.
- ರುಚಿಗೆ ತಕ್ಕಷ್ಟು ಉಪ್ಪು .
- ಬಣ್ಣಕ್ಕೆ ಒಗ್ಗುವಷ್ಟು ಅರಿಷಿಣ ಪುಡಿ.
- 1 ಟೀ ಸ್ಪೂನ್ ಖಾರದ ಪುಡಿ (ಒಣ ಮೆಣಸಿನಕಾಯಿ ಪುಡಿ).
- 1 ಟೀ ಸ್ಪೂನ್ ಕೊತ್ತಂಬರಿ ಬೀಜದ ಪುಡಿ.
- ಅರ್ಧ ಟೀ ಸ್ಪೂನ್ ಗರಂ ಮಸಾಲಾ.
- ಸಿಹಿ ಮೊಸರು- 100 ಮಿಲೀ. ಮೊಸರು ಗಟ್ಟಿಯಾಗಿರಲಿ.
- ನೀರು- 1 ಲೋಟ.
ಮಾಡುವ ವಿಧಾನ :
ಮೊದಲಿಗೆ- ಅಗಲ ತಳದ ಪಾತ್ರೆಯಾಂದರಲ್ಲಿ 2-3 ಟೀ ಸ್ಪೂನ್ ಎಣ್ಣೆ ಹಾಕಿ. ಪಾತ್ರೆಯನ್ನು ಸ್ಟವ್ ಮೇಲಿಡಿ. ಮಧ್ಯಮ ಉರಿಯಲ್ಲಿ ಜೀರಿಗೆಯನ್ನು ಹುರಿದುಕೊಳ್ಳಿ. ಜೀರಿಗೆ ಹುರಿಯಲು 1 ನಿಮಿಷ ಸಾಕು.
ಜೀರಿಗೆ ಹುರಿದಿದ್ದಾಯಿತಾ ? ಅದೇ ಪಾತ್ರೆಗೆ- ಕತ್ತರಿಸಿಟ್ಟುಕೊಂಡ ಈರುಳ್ಳಿ ತುಂಡುಗಳು, ತೊಳೆದಿಟ್ಟುಕೊಂಡ ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ ತುಂಡುಗಳನ್ನು ಹಾಕಿ. ಈರುಳ್ಳಿ ತುಂಡುಗಳು ಬಂಗಾರ ಬಣ್ಣಕ್ಕೆ ಬರುವವರೆಗೆ ಬೇಯಲಿ. ಆನಂತರ ಕತ್ತರಿಸಿ ಸಿದ್ಧಪಡಿಸಿಕೊಂಡ ಟೊಮೊಟಾ ಹಾಗೂ ದೊಣ್ಣೆ ಮೆಣಸಿನಕಾಯಿ ತುಂಡುಗಳನ್ನು ಪಾತ್ರೆಗೆ ಸೇರಿಸಿ. ಚೆನ್ನಾಗಿ ಕಲಕಿ.
1 ಲೋಟ ನೀರನ್ನು ಪಾತ್ರೆಗೆ ಸೇರಿಸಿ, ಪ್ಲೇಟ್ ಮುಚ್ಚಿ . ಪಾತ್ರೆಯಲ್ಲಿನ ಪದಾರ್ಥಗಳು ಚೆನ್ನಾಗಿ ಕುದಿಯಲಿ. ತರಕಾರಿ ಚೆನ್ನಾಗಿ ಬೆಂದ ನಂತರ ಉಪ್ಪು , ಅರಿಷಿಣ ಹಾಗೂ ಕೊತ್ತಂಬರಿ ಪುಡಿ ಸೇರಿಸುವುದು. ಮಿಶ್ರಣವನ್ನು ಚೆನ್ನಾಗಿ ಕಲಕಿದ ನಂತರ ಮತ್ತೆ 5 ನಿಮಿಷ ಬೇಯಿಸುವುದು. ಈಗ ಸಿಹಿ ಮೊಸರು ಸೇರಿಸುವ ಸರದಿ. ಮೊಸರು ಸೇರಿಸಿದ ನಂತರದ ಮಿಶ್ರಣವನ್ನು ಮತ್ತೆ ಸ್ಟವ್ ಮೇಲಿಡಿ. ಉರಿ ಮಧ್ಯಮವಾಗಿರಲಿ. ಮೊಸರಿನಲ್ಲಿನ ನೀರಿನಂಶ ಸಂಪೂರ್ಣ ಆವಿಯಾಗುವ ತನಕ ಕುದಿಸುವುದು. ಒಲೆಯಿಂದ ಕೆಳಗಿಳಿಸುವ ಮುನ್ನ - ಗರಂ ಮಸಾಲಾ ಸೇರಿಸುವುದು.
ಪೂರಿ ಹಾಗೂ ಪರೋಟಾಗಳಿಗೆ ಕ್ಯಾಪ್ಸಿಕಂ ಮೊಸರು ಮಸಾಲಾ ತುಂಬಾ ರುಚಿ. ಬಿಸಿಯಾಗಿರುವಾಗಲೇ ಬಳಸುವುದು ಒಳ್ಳೆಯದು. ಹಸಿ ಈರುಳ್ಳಿ ಹಾಗೂ ಟೊಮೊಟೊ ತುಂಡುಗಳನ್ನು ಕ್ಯಾಪ್ಸಿಕಂ ಮೊಸಲು ಮಸಾಲಾದ ಮೇಲೆ ಹರಡಬಹುದು.



Click it and Unblock the Notifications
