Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನು ಮೋಡಿ ಮಾಡಲು ಸ್ಟ್ರಾಬರಿ ಐಸ್ ಕ್ಯಾಂಡಿ

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಸ್ಟ್ರಾಬರಿ
* 1/2 ಭಾಗ ನಿಂಬೆ ಹಣ್ಣು
* 4-5 ಚಮಚ ಸಕ್ಕರೆ
* 1 ಕಪ್ ನೀರು
* ಐಸ್ ಕ್ಯಾಂಡಿ ಮಾಡುವ ಮೌಲ್ಡ್ಸ್
* ಕಡ್ಡಿಗಳು
ತಯಾರಿಸುವ ವಿಧಾನ:
1. ಸ್ಟ್ರಾಬರಿಯನ್ನು ಚೆನ್ನಾಗಿ ತೊಳೆದು ನೀರು ಹಾಕಿ ಮಿಕ್ಸಿಯಲ್ಲಿ ಆಡಿಸಬೇಕು. ನಂತರ ರಸವನ್ನು ಸೋಸಿ ಒಂದು ಬಟ್ಟಲಿನಲ್ಲಿ ಹಾಕಿಡಬೇಕು.
2. ಈಗ ಸ್ಟ್ರಾಬರಿ ರಸಕ್ಕೆ ಸಕ್ಕರೆ ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಮಾಡಬೇಕು.
3. ಈಗ ಈ ರಸವನ್ನು ಐಸ್ ಕ್ಯಾಂಡಿ ಮೌಲ್ಡ್ಸ್ ಅಥವಾ ಗ್ಲಾಸ್ಗೆ ಹಾಕಿ ಗ್ಲಾಸ್ಗಿಂತ ಸ್ವಲ್ಪ ಉದ್ದದ ಕಡ್ಡಿ ಹಾಕಿ ಒಂದು ರಾತ್ರಿ ಫ್ರಿಜ್ನಲ್ಲಿ ಇಡಬೇಕು.
4. ನಂತರ ಕ್ಯಾಂಡಿ ಮೌಲ್ಡ್ಸ್ ತೆಗೆದು ಅದನ್ನು ಸ್ವಲ್ಪ ಹೊತ್ತು ತಣ್ಣೀರಿನಲ್ಲಿ ಹಾಕಿ, ನಂತರ ಅದರಿಂದ ಸ್ಟ್ರಾಬರಿ ಕ್ಯಾಂಡಿ ತೆಗೆದು ಮಕ್ಕಳಿಗೆ ಕೊಡಿ.
ಶಾಲಾ ರಜೆ ಸಮಯದಲ್ಲಿ ಮಕ್ಕಳ ಗಲಾಟೆ ನಿಯಂತ್ರಿಸುವಷ್ಟರಲ್ಲಿ ಅಮ್ಮಂದಿರಿಗೆ ಸಾಕಾಗಿ ಹೋಗುತ್ತದೆ. ಗಲಾಟೆ ಮಾಡದಿದ್ದರೆ ತಿಂಡಿ ಮಾಡಿ ಕೊಡುತ್ತೇನೆ, ಐಸ್ ಕ್ಯಾಂಡಿ ತೆಗೆಸಿಕೊಡುತ್ತೇನೆ ಎಂದು ಆಸೆ ತೋರಿಸುವುದು ಸಾಮಾನ್ಯ. ಈ ಐಸ್ ಕ್ಯಾಂಡಿ ಸುಲಭವಾಗಿ ಮಾಡಬಹುದಾಗಿದ್ದು ಮಕ್ಕಳ ಗಲಾಟೆ ಕಡಿಮೆ ಮಾಡಲು ಈ ಕ್ಯಾಂಡಿಯನ್ನು ಅಸ್ತ್ರವಾಗಿ ಬಳಸಬಹುದಲ್ಲವೆ, ಏನಂತೀರಾ?



Click it and Unblock the Notifications
