Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಂಜೆಯ ಸ್ನೇಹಿತರಿಗಾಗಿ ಆರೇಂಜ್ ಮಾಕ್‌ಟೇಲ್

ಅತಿಥಿಗಳಿಗೆ ನೀಡುವ ಪಾನೀಯವೂ ಡಿಫರೆಂಟ್ ಆದಾಗ ಸಹಜವಾಗಿ ಇಷ್ಟಪಡುತ್ತಾರೆ. ಹಾಗೆಯೆ, ಎಂಥ ಪಾನೀಯ ತಯಾರಿಸಬೇಕು ಎಂಬ ವಿಚಾರ ಬಂದಾಗ ತಲೆಕೆಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವ ಕಾರಣವಿಲ್ಲ. ಸ್ವಲ್ಪ ತಲೆ ಓಡಿಸಿದರೆ ನೋಡಲು ಮಸ್ತಾಗಿರುವ ಮತ್ತು ರುಚಿಯಲ್ಲಿ ಸಖತ್ತಾಗಿರುವ ಐದೇಐದು ನಿಮಿಷದಲ್ಲಿ ತಯಾರಿಸಬಹುದು.
ಅದೇ ಆರೇಂಜ್ ಮಾಕ್‌ಟೇಲ್. ಹೆಸರೇ ಸೂಪರಾಗಿದೆ. ರುಚಿ ಕೂಡ ಅಷ್ಟೇ ಬೊಂಬಾಟಾಗಿರುತ್ತದೆ. ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಕೂಡ ಬೆರಳೆಣಿಕೆಯಷ್ಟು. ಸ್ನೇಹಿತರೊಂದಿಗೆ ಗೆಟ್ ಟುಗೆದರ್ ಮಾಡಿದಾಗ, ಪಾರ್ಟಿ ಇಟ್ಟುಕೊಂಡಾಗ ಈ ಹೊಸರುಚಿಯನ್ನು ತಯಾರಿಸಿ ನೋಡಿ.
ಬೇಕಾಗುವ ಸಾಮಗ್ರಿಗಳು : ಫಾಂಟಾ - ಅರ್ಧ ಲೀಟರ್, ನಿಂಬೆ ರಸ - ಕಾಲು ಚಮಚ, ವೆನಿಲ್ಲಾ ಐಸ್ ಕ್ರೀಂ ಎರಡು ಚಮಚ, ಕಿತ್ತಳೆ ಹಣ್ಣು 1.
ತಯಾರಿಸುವ ವಿಧಾನ
ಎಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ 1 ನಿಮಿಷ ಗಿರ್ರಂಗಿಟ್ಟ ಅನ್ನಿಸಿಬಿಡಿ. ಮಾಕ್‌ಟೇಲನ್ನು ಗಾಜಿನ ಲೋಟಗಳಿಗೆ ಬಗ್ಗಿಸಿ ಬೇಕಿದ್ದರೆ ಐಸ್ ಕ್ಯೂಬ್ ತೇಲಿಸಿಬಿಡಿ. ಆರೇಂಜ್ ಹಣ್ಣನ್ನು ಕತ್ತರಿಸಿ ಜ್ಯೂಸಲ್ಲಿ ಹಾಕಿರಿ. ಅಷ್ಟೇ ಆರೇಂಜ್ ಮಾಕ್‌ಟೇಲ್ ತಯಾರ್.



Click it and Unblock the Notifications
