Just In
- 7 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 7 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 8 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 9 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಹಿ ಬೆಂಡೆಯ ಪಾಕ ವಿಧಾನ
ಬೆಂಡೆ, ಓಕ್ರಾ, ಲೇಡೀ ಫಿಂಗರ್ ಎಂದೆಲ್ಲಾ ಕರೆಯುವ ಈ ತರಕಾರಿ ಸಮೃದ್ಧವಾದ ಕಬ್ಬಿಣಾಂಶವನ್ನು ಹೊಂದಿದೆ. ಇದರಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಭಾರತೀಯರು ಹೆಚ್ಚು ಪ್ರೀತಿಸುತ್ತಾರೆ. ಹೃದಯದ ಆರೋಗ್ಯಕ್ಕೆ ಬಹು ಉತ್ತಮವಾದ ತರಕಾರಿ. ಇದರಲ್ಲಿ ಕ್ಯಾಲೋರಿ ಗುಣವು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಸಲು ಸಹ ಇದು ಸಹಾಯ ಮಾಡುತ್ತದೆ. ಮೊಸರಿನೊಂದಿಗೆ ಬೆಂಡೆಕಾಯಿ ಸೇರಿಸಿ ಮಾಡುವ ಆಹಾರ ಪದಾರ್ಥವು ಅತ್ಯುತ್ತಮವಾದ ಆಹಾರ ಪದಾರ್ಥ ಎನ್ನಬಹುದು.
ಮೊಸರಿನೊಂದಿಗೆ ಬೆಂಡೆಯನ್ನು ಬೆರೆಸಿ ತಯಾರಿಸುವ ವಿಶೇಷ ಪದಾರ್ಥವನ್ನು ಅನ್ನ ಮತ್ತು ಚಪಾತಿಯೊಂದಿಗೆ ಸಹ ಸವಿಯಬಹುದು. ಮೊಸರು, ವಿಶೇಷ ಬಗೆಯ ಮಸಾಲ ಪದಾರ್ಥಗಳು ಹಾಗೂ ಬೆಂಡೆಯ ಮಿಶ್ರಣದಿಂದ ತಯಾರಾಗುವ ದಹಿ ಬೆಂಡೆ ವಿಭಿನ್ನವಾದ ರುಚಿಯೊಂದಿಗೆ ನಾಲಿಗೆ ಚಪ್ಪರಿಸುವಂತೆ ಮಾಡುವುದು. ಕಡಿಮೆ ಪ್ರಮಾಣದ ಕ್ಯಾಲೋರಿ ಹಾಗೂ ಮಸಾಲೆ ಭರಿತ ಪಾಕವಿಧಾನವನ್ನು ಬಯಸುವವರಿಗೆ ಇದು ಅತ್ಯುತ್ತಮವಾದ ಪಾಕವಿಧಾನ ಆಗುವುದು.
ಸಾಮಾನ್ಯವಾಗಿ ಭಾರತದೆಲ್ಲೆಡೆ ತಯಾರಿಸುವ ಈ ಪಾಕವಿಧಾನವನ್ನು ಬಹಳ ಕಡಿಮೆ ಸಮಯದಲ್ಲಿ, ಸರಳ ವಿಧಾನದ ಮೂಲಕ ಸುಲಭವಾಗಿ ತಯಾರಿಸಬಹುದು. ನಿಮಗೂ ಈ ಪಾಕವಿಧಾನವನ್ನು ತಯಾರಿಸಬೇಕು ಹಂಬಲವಾಗುತ್ತಿದ್ದರೆ ಈ ಮುಂದೆ ನೀಡಲಾಗಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ವಿವರಿಸಿ.
Recipe By: ಮೀನಾ ಭಂಡಾರಿ.
Recipe Type: ಪ್ರಮುಖ ಖಾದ್ಯ
Serves: 2
-
ಹೆಚ್ಚಿಕೊಂಡ ಬೆಂಡೆಕಾಯಿ -2 ಕಪ್
ಉಪ್ಪು - 1 ಟೀ ಚಮಚ
ಖಾರದ ಪುಡಿ/ಮೆಣಸಿನ ಪುಡಿ -1 ಟೀಚಮಚ
ಮೊಸರು -1 ಕಪ್
ದನಿಯಾ ಪುಡಿ- 2 ಟೇಬಲ್ ಚಮಚ
ಕಡ್ಲೇ ಹಿಟ್ಟು -1 ಟೀಚಮಚ
ಸೋಂಪು - 1 ಟೀಚಮಚ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು -ಅಲಂಕಾರಕ್ಕೆ
ಜೀರಿಗೆ - 1 ಟೀಚಮಚ
-
1. ಒಂದು ಪಾತ್ರೆಯಲ್ಲಿ ಮೂರು ಗ್ಲಾಸ್ ನೀರನ್ನು ಸೇರಿಸಿ, ಕುದಿಯಲು ಬಿಡಿ.
2. ಕುದಿ ಬರುವವರೆಗೆ ಮುಚ್ಚಳವನ್ನು ಮುಚ್ಚಿ.
3. ಕುದಿ ಬಂದ ನಂತರ ಮುಚ್ಚಳವನ್ನು ತೆರೆಯಿರಿ.
4. ಸ್ಟಟೀಮರ್ ಅನ್ನು ಜೋಡಿಸಿ.
5. ಸ್ಟೀಮರ್ ಮೇಲೆ ಹೆಚ್ಚಿಕೊಂಡ ಬೆಂಡೆಕಾಯನ್ನು ಹಾಕಿ, ಮುಚ್ಚಳವನ್ನು ಮುಚ್ಚಿ.
6. 5 ನಿಮಿಷ ಹಬೆಯಲ್ಲಿ ಬೇಯಲು ಬಿಡಿ.
7. ಇನ್ನೊಂದು ಬೌಲ್ ತೆಗೆದುಕೊಂಡು, ಮೊಸರನ್ನು ಸೇರಿಸಿ.
8. ಅದಕ್ಕೆ ಉಪ್ಪು, ಕಡ್ಲೇ ಹಿಟ್ಟು ಮತ್ತು ಅರಿಶಿನ ಪುಡಿಯನ್ನು ಸೇರಿಸಿ.
9. ಖಾರದ ಪುಡಿ ಮತ್ತು ದನಿಯಾ ಪುಡಿಯನ್ನು ಸೇರಿಸಿ.
10. ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕೆ ಇಡಿ.
11. ಬೆಂಡೆಕಾಯಿ ಬೆಂದಿದೆಯೇ ಎಂದು ಪರೀಕ್ಷಿಸಿ, ಹಬೆಯಿಂದ ತೆಗೆಯಿರಿ.
12. ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಿ.
13. ಒಂದು ಟೀ ಚಮಚ ಎಣ್ಣೆಯನ್ನು ಸೇರಿಸಿ.
14. ಸೋಂಪು ಮತ್ತು ಜೀರಿಗೆಯನ್ನು ಸೇರಿಸಿ.
15. ಚೆನ್ನಾಗಿ ಹುರಿಯಿರಿ.
16. ತಯಾರಿಸಿಟ್ಟುಕೊಂಡ ಮೊಸರಿನ ಮಿಶ್ರಣವನ್ನು ಇದಕ್ಕೆ ಸೇರಿಸಿ.
17. ಒಂದು ಕಪ್ ನೀರನ್ನು ಸೇರಿಸಿ.
18. ಇದನ್ನು ಕುದಿಯಲು ಬಿಡಿ.
19. ಹಬೆಯಲ್ಲಿ ಬೆಂದ ಬೆಂಡೆಕಾಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. 3-4 ನಿಮಿಷಗಳ ಕಾಲ ಕುದಿಯಲು ಬಿಡಿ.
20. ಮುಚ್ಚಳವನ್ನು ತೆರೆದು ಒಮ್ಮೆ ಚೆನ್ನಾಗಿ ತಿರುವಿ.
21. ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ.
- 1. ಈ ಪಾಕವಿಧಾನವನ್ನು ಬಿಸಿ ಇರುವಾಗಲೇ ಸವಿಯಲು ನೀಡಿ. ಬೆಂಡೆಕಾಯನ್ನು ಹುರಿಯ ಬಾರದು. ಹಬೆಯಲ್ಲಿಯೇ ಬೇಯಿಸಿಕೊಳ್ಳಬೇಕು.
- 2. ಹುರಿಯದೇ ಹಬೆಯಲ್ಲಿಯೇ ಬೇಯಿಸಿ ತಯಾರಿಸುವ ಈ ಪಾಕವಿಧಾನ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ.
- ಬಡಿಸುವ ಪ್ರಮಾಣ - 2 ಬೌಲ್
- ಕ್ಯಾಲೋರಿ - 235 ಕ್ಯಾಲ್
- ಕೊಬ್ಬು - 16.4 ಗ್ರಾಂ.
- ಪ್ರೋಟೀನ್ - 6.9 ಗ್ರಾಂ.
- ಕಾರ್ಬೋಹೈಡ್ರೇಟ್ - 21.7 ಗ್ರಾಂ.
- ಫೈಬರ್ - 8.5 ಗ್ರಾಂ.
ಚಿತ್ರ ಬರಹ:
1. ಒಂದು ಪಾತ್ರೆಯಲ್ಲಿ ಮೂರು ಗ್ಲಾಸ್ ನೀರನ್ನು ಸೇರಿಸಿ, ಕುದಿಯಲು ಬಿಡಿ.
2. ಕುದಿ ಬರುವವರೆಗೆ ಮುಚ್ಚಳವನ್ನು ಮುಚ್ಚಿ.
3. ಕುದಿ ಬಂದ ನಂತರ ಮುಚ್ಚಳವನ್ನು ತೆರೆಯಿರಿ.
4. ಸ್ಟಟೀಮರ್ ಅನ್ನು ಜೋಡಿಸಿ.
5. ಸ್ಟೀಮರ್ ಮೇಲೆ ಹೆಚ್ಚಿಕೊಂಡ ಬೆಂಡೆಕಾಯನ್ನು ಹಾಕಿ, ಮುಚ್ಚಳವನ್ನು ಮುಚ್ಚಿ.
6. 5 ನಿಮಿಷ ಹಬೆಯಲ್ಲಿ ಬೇಯಲು ಬಿಡಿ.
7. ಇನ್ನೊಂದು ಬೌಲ್ ತೆಗೆದುಕೊಂಡು, ಮೊಸರನ್ನು ಸೇರಿಸಿ.
8. ಅದಕ್ಕೆ ಉಪ್ಪು, ಕಡ್ಲೇ ಹಿಟ್ಟು ಮತ್ತು ಅರಿಶಿನ ಪುಡಿಯನ್ನು ಸೇರಿಸಿ.
9. ಖಾರದ ಪುಡಿ ಮತ್ತು ದನಿಯಾ ಪುಡಿಯನ್ನು ಸೇರಿಸಿ.
10. ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕೆ ಇಡಿ.
11. ಬೆಂಡೆಕಾಯಿ ಬೆಂದಿದೆಯೇ ಎಂದು ಪರೀಕ್ಷಿಸಿ, ಹಬೆಯಿಂದ ತೆಗೆಯಿರಿ.
12. ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಿ.
13. ಒಂದು ಟೀ ಚಮಚ ಎಣ್ಣೆಯನ್ನು ಸೇರಿಸಿ.
14. ಸೋಂಪು ಮತ್ತು ಜೀರಿಗೆಯನ್ನು ಸೇರಿಸಿ.
15. ಚೆನ್ನಾಗಿ ಹುರಿಯಿರಿ.
16. ತಯಾರಿಸಿಟ್ಟುಕೊಂಡ ಮೊಸರಿನ ಮಿಶ್ರಣವನ್ನು ಇದಕ್ಕೆ ಸೇರಿಸಿ.
17. ಒಂದು ಕಪ್ ನೀರನ್ನು ಸೇರಿಸಿ.
18. ಇದನ್ನು ಕುದಿಯಲು ಬಿಡಿ.
19. ಹಬೆಯಲ್ಲಿ ಬೆಂದ ಬೆಂಡೆಕಾಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. 3-4 ನಿಮಿಷಗಳ ಕಾಲ ಕುದಿಯಲು ಬಿಡಿ.
20. ಮುಚ್ಚಳವನ್ನು ತೆರೆದು ಒಮ್ಮೆ ಚೆನ್ನಾಗಿ ತಿರುವಿ.
21. ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ.