Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಯೋಗ್ಯ ರಾಗಿ ಭೋಗ್ಯ ಮ್ಯಾಗಿ!

* ಗೋಪಾಲ್ ಕುಲಕರ್ಣಿ, ಬೆಂಗಳೂರು
"ಒಂದು ಬಾರಿ ಉಣ್ಣುವವನು ಯೋಗಿ. ಎರಡು ಬಾರಿ ಉಣ್ಣುವವನು ಭೋಗಿ. ಮೂರು ಬಾರಿ ಉಣ್ಣುವವನು ರೋಗಿ. ನಾಲ್ಕು ಬಾರಿ ಉಣ್ಣುವವನನ್ನು ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ. ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ!
ಹೇಗೋ ಎಂತೋ, ರಾಗಿ ಜಾಗ ಖಾಲಿಯಾಗಿ ಮ್ಯಾಗಿ ನಮ್ಮನೆಯ ಮಹಾಪ್ರಸಾದವಾಗಿ ಪರಿಣಮಿಸಿದೆ. ಮೊದಮೊದಲು ಈ ಮ್ಯಾಗಿಯನ್ನು ನಾನು ಕಂಡಿದ್ದು 8 ವರ್ಷಗಳ ಹಿಂದೆ ನನ್ನ ಗೆಳೆಯ ಶ್ರೀಧರ ಬೆಂಗಳೂರಿನಲ್ಲಿ ಒಂದು ಹೋಟೆಲ್ಲಿಗೆ ಕರೆದುಕೊಂಡು ಹೋಗಿದ್ದಾಗ. ಒಳಗೆ ಹೋಗುವ ಮೊದಲೇ ಇದು ಸಸ್ಯಾಹಾರಿ ಹೋಟೆಲ್ ಹೌದೋ ಅಲ್ಲವೋ ಎಂದು ದೃಢಪಡಿಸಿಕೊಂಡ ಮೇಲೆ ಒಳಗೆ ಹೋಗಿದ್ದು. ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ ಆಗಿದ್ದರೂ engineering ಕಲೆತು ಮುಗಿಸುವಷ್ಟರಲ್ಲೇ ಎಲ್ಲ ಜಾನುವಾರುಗಳನ್ನು ಜಗಿದಿದ್ದ.
ಆನಂತರ ಅವನು ನನಗೆ ಕೇಳಿದ 'ಏನ್ಬೇಕು ಆರ್ಡರ್ ಮಾಡು' ಎಂದು. ನಾನು ಮಸಾಲೆ ದೋಸೆ ಎಂದೆ. ಅದಕ್ಕೆ ಅವನು "ಎ ಡಾಲ್ಡಾ" (ಜಿಡ್ಡು ನನ್ನ ಮಗನೆ) ಏನಾದರು ಸ್ಪೆಷಲ್ ಆರ್ಡರ್ ಮಾಡೋ ಎಂದ. ಈ ಸ್ಪೆಷಲ್ ಗಳ ಅನುಭವ ನನಗೆ ಸಾಕಷ್ಟಾಗಿರುವುದರಿಂದ (ಒಂದು ದಿವಸ ಹೋಟೆಲ್ಗೆ ಹೋದಾಗ ಪಾಯಸವನ್ನು ಅಂದರೆ "ನವರತ್ನ ಕುರ್ಮಾ"ವನ್ನು ನೆಂಚಿಕೊಂಡು ರೋಟಿ ತಿಂದಿದ್ದು) ಇರಲಿ ಬಿಡು ಮಗ ನನಗೆ ಮಸಾಲೆ ಅಥವಾ ತುಪ್ಪದ ದೋಸೆನೆ ಸಾಕು, ನಿನಗೇನು ಬೇಕೋ ನೀನು ಆರ್ಡರ್ ಮಾಡಿಕೋ ಎಂದೆ. ಅವನು ನನಗೆ ಒಂದು ತುಪ್ಪದ ದೋಸೆ ಮತ್ತು ತನಗೆ ಮಂಚೂರಿ ಮತ್ತು ನೂಡಲ್ಸ್ ಆರ್ಡರ್ ಮಾಡಿ ಕಾಯುತ್ತಾ ಕುಳಿತ.
ಮಾಣಿ ಸ್ವಲ್ಪ ಸಮಯದ ನಂತರ ಇಬ್ಬರ ತಿಂಡಿಯನ್ನು ತಂದಿಟ್ಟ. ನಾನು ಮಾತ್ರ ನನ್ನ ಪ್ಲೇಟ್ ನಲ್ಲಿರೋ ತಿಂಡಿ ಮಾತ್ರ ತಿನ್ನುತ್ತಿದ್ದೆ. ಶ್ರೀಧರನಿಗೆ ಎಲ್ಲ ಪ್ಲೇಟ್ ಗಳಿಗೆ ಕೈಹಾಕಿ ರುಚಿ ನೋಡುವ ಅಭ್ಯಾಸ. ನನ್ನ ಪ್ಲೇಟಿಗೂ ಕೈ ಹಾಕಿದ 'ಏ ಮಚ್ಚ ಬೇಡ' ಅಂದೆ ಸಿಟ್ಟಿಂದ. ಏಕೆ? ಎಂದಾಗ ಇದೇನೋ ಚಿಕನ್ನು ಮತ್ತು ಅದರ ಕರಳುಗಳನ್ನ ತಿಂತ ಇದ್ದೀಯ. ನನ್ನ ತಿಂಡಿ ಮುಟ್ಟಬೇಡ please ...ಎಂದೆ. ಅದಕ್ಕೆ ಅವನು ನಗುತ್ತ ಇದು ಗೋಬಿ ಮಂಚೂರಿ ಅಂತ ಇದನ್ನ ಎಲೆ ಕೋಸಿನಿಂದ ಮಾಡುತ್ತಾರೆ, ಪೂರ್ತಿ ಸಸ್ಯಾಹಾರಿ ಕಣ್ಲೇ ಎಂದ.
ಮತ್ತೇ ಅದು ...ಎಂದು ನಾನು ರಾಗವೆತ್ತಿದಾಗ ಅದು ನಮ್ಮ ಶಾವಿಗೆ ತರಹನೆ ಕಣೋ ಆದರೆ ಸ್ವಲ್ಪ ದಪ್ಪಗಾಗಿರುತ್ತೆ. ಇದು ಕೂಡ ಸಸ್ಯಹಾರಿನೆ, Chinese Special ಆಹಾರ ಎಂದು ಸಣ್ಣ ಭಾಷಣ ಬಿಗಿದ . ಅವನಿಗೆ ನನ್ನ ತಿಂಡಿಯಲ್ಲಿಯ ಸ್ವಲ್ಪ ಭಾಗ ನಾನೇ ಕೊಟ್ಟು, ಇನ್ನು ನನ್ನ ಪ್ಲೇಟ್ ಕಡೆ ತಲೆ ಹಾಕಬೇಡಪ್ಪ ಅಂತ ಹೇಳಿ ನನ್ನ ತಿಂಡಿಯನ್ನ ತಿಂದು ಮುಗಿಸಿದೆ. ಅವನು ತಿನ್ನುವ ಅವಸ್ಥೆ ನೋಡಿ ದಂಗಾದೆ. ಎರಡು ಕಡ್ಡಿಗಳಿಂದ ಹಿಡಿದು ತಿನ್ನುತಿದ್ದ. ಲೇ ಕೈಗಳಿಂದಲೇ ತಿನ್ನಪ್ಪ ಎಷ್ಟು ಹೊತ್ತು ಮಾಡ್ತಿಯ ನನ್ನ ಬಸ್ ಇರೋದು 7 ಗಂಟೆಗೆ ಗೊತ್ತು ತಾನೆ ಎಂದೆ. ಅದು ಟೇಬಲ್ ಮ್ಯಾನರ್ಸ್, ಹಾಗೆನೆ ತಿನ್ನಬೇಕು ಅಂತ ಹೇಳಿ ಹಾಗೆಯೆ ತಿಂದು ಮುಗಿಸಿದ್ದ. ಬೆಂಕಿ ಪೊಟ್ಟಣದ ಕಡ್ಡಿಗಳೆಲ್ಲ ಆ ಗೋಬಿ ಮಂಚುರಿಯ ಮೇಲೆ ಇರುವುದ ನೋಡಿ ನಕ್ಕು ಸುಮ್ಮನಾದೆ.
ಹೋಟೆಲಿನಿಂದ ಹೊರಗೆ ಬಂದ ಮೇಲೆ ಚೈನೀಸ್ ತಿಂದಿದ್ದಕ್ಕೆ ಕಣೋ ನಿನ್ನ ಕಣ್ಣುಗಳು ಸ್ವಲ್ಪ ಚಿಕ್ಕದಾಗಿವೆ ಎಂದೆ ತಮಾಷೆಗಾಗಿ. ಹೀಗೆ ಚೈನೀಸ್ ತಿಂತ ಇದ್ರೆ ನಿನಗ್ಯಾರು ಬ್ರಾಹ್ಮಣ ಕನ್ಯಾ ಕೊಡಲ್ಲ ಎಂದು ರೇಗಿಸಿದೆ. ಈಗ ನಮ್ಮನೆಯಲ್ಲಿ ಮಾಗಿಯ ಚಳಿಯೇ ಇರಲಿ, ಇಲ್ಲ ಉರಿಬಿಸಿಲೆ ಇರಲಿ ಮನೆಯಲ್ಲಿ ನಿತ್ಯ ಮ್ಯಾಗಿಯ ಮಂತ್ರ. ನನ್ನ ಮಡದಿ ಮತ್ತು ಮಗನಿಗೆ ಮ್ಯಾಗಿ ಇದ್ದರೆ ಸಾಕು ಅದೇ ಪಂಚ ಪಕ್ವಾನವಿದ್ದಹಾಗೆ. ಅಷ್ಟೇ ಏಕೆ ಒಂದು ದಿವಸ ತಿಂದು ಉಳಿದ ಮ್ಯಾಗಿಯನ್ನು ನಮ್ಮನೆಯ ಗೋಡೆ ಮೇಲೆ ಹಾಕಿದ್ದೆ ಅದನ್ನು ತಿಂದ ಒಂದು ಕಾಗೆ ಮರುದಿನವೂ ಹಾಜರಾಗಿ ಕಾ.. ಕಾ.. ಎನ್ನುವ ಬದಲು ಮ್ಯಾಗಿ.. ಮ್ಯಾಗಿ.. ಅಂತ ಜಪ ಮಾಡುತ್ತಿತ್ತು!
ಹೀಗೆ ಒಂದು ದಿವಸ ಬ್ರಿಗೇಡ್ ರೋಡ್ನಲ್ಲಿ ನನ್ನ ಮಡದಿ, ಮಗನೊಂದಿಗೆ ಹೋಗುತ್ತಿದ್ದಾಗ ಒಬ್ಬಳು ಆಫ್ರಿಕನ್ ಹುಡುಗಿಯ ತಲೆ ನೋಡಿ "ಮ್ಯಾಗಿ .. ಮ್ಯಾಗಿ .." ಅಂತ ಅಳಹತ್ತಿದ. ಮತ್ತೇ Chinees ಹೋಟೆಲ್ಲಿಗೆ ಹೋಗಿ ಮ್ಯಾಗಿ ತಿನ್ನಿಸಿ ಕರೆದುಕೊಂಡು ಬಂದಾಗ ಸಮಾಧಾನವಾಗಿತ್ತು. ಹೀಗಾಗಿ ಮಗನ ಜೊತೆ ಈ ಜೋಗಿಗೂ ಮ್ಯಾಗಿ ಅಭ್ಯಾಸವಾಗಿಬಿಟ್ಟಿದೆ. ನಿಮಗೆ ಯಾವತ್ತಾದರೂ ಕತ್ತರಿಗುಪ್ಪೆ ಶ್ರೀನಿವಾಸನಗರದ ಕಡೆಯಿಂದ ಹೋಗುತ್ತಿದ್ದರೆ ದಯವಿಟ್ಟು ಅಲ್ಲಿ ನಿಲ್ಲದೆ ಹಾಗೆ ಮುಂದೆ ಹೋಗಿ, ಇಲ್ಲದಿದ್ದರೆ ನಿಮಗೂ ಮ್ಯಾಗಿ ಕಟ್ಟಿಟ್ಟಬುತ್ತಿ!



Click it and Unblock the Notifications
