Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಹಿಳೆಯರ ಆರೋಗ್ಯ ಕವಚ ಹಸಿರು ಸೊಪ್ಪು

ಅಧ್ಯಯನವೊಂದರಲ್ಲಿ ಪ್ರಯೋಗಕ್ಕೊಳಗಾದ ಶೇ.40ರಷ್ಟು ಮಹಿಳೆಯರಲ್ಲಿ ಹಸಿರು ಸೊಪ್ಪನ್ನು ಹೆಚ್ಚಾಗಿ ತಿಂದಾಗ ಗರ್ಭಕೋಶದ ಕ್ಯಾನ್ಸರ್ ತಗ್ಗಿರುವುದು ಕಂಡುಬಂದಿದೆ. ಬ್ರೊಕೋಲಿ, ಕೋಸುಗಡ್ಡೆ, ಮೆಂತ್ಯ, ಸಬ್ಬಸಿಗೆ, ಕೆಸುವು, ದೊಡ್ಡಪತ್ರೆ, ಪಾಲಕ್, ನುಗ್ಗೆ ಸೊಪ್ಪು ಮುಂತಾದ ಹಚ್ಚಹಸುರಿನ ಸೊಪ್ಪುಗಳಲ್ಲಿ ವಿಟಮಿನ್ ಎ, ಸಿ, ಕೆ, ಕ್ಯಾಲ್ಶಿಯಂ, ಬೀಟಾ-ಕೆರೊಟಿನ್, ಮ್ಯಾಂಗನೀಸ್, ಮ್ಯಾಗ್ನೇಶಿಯಂ, ಕಬ್ಬಿಣ, ಫೈಬರ್ ಅಧಿಕವಾಗಿರುತ್ತವೆ.
ಬ್ರೊಕೋಲಿ ಕ್ಯಾನ್ಸರ್ ಗೆ ರಾಮಬಾಣವಾದರೆ, ಅಧಿಕ ಕಬ್ಬಿಣದಂಶವಿರುವ ಮೆಂತ್ಯ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಕಬ್ಬಿಣದ ಕೊರತೆ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣುವ ಅಂಶ. ನಾನಾ ತರಹದ ಗುಳಿಗೆಗಳನ್ನು ನುಂಗುವುದಕ್ಕಿಂತ ಮೆಂತ್ಯ ಸೊಪ್ಪು ತಿಂದರೆ ಒಳ್ಳೆಯದಲ್ಲವೆ? ಮೆಂತ್ಯ ಸೊಪ್ಪಿನಿಂದ ಮಾಡಿದ ತರಹೇವಾರಿ ಖಾದ್ಯಗಳು ಕಬ್ಬಿಣದಂಶ ಹೆಚ್ಚಿಸುವುದರ ಜೊತೆಗೆ ಶಕ್ತಿಯನ್ನು ನೀಡುತ್ತವೆ.
ಈ ಹಸಿರು ಸೊಪ್ಪುಗಳೆಲ್ಲ ಮಹಿಳೆಯರಲ್ಲಿ ಬರುವ ನಿದ್ರಾಹೀನತೆಯನ್ನು ತೊಲಗಿಸಿ, ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ. ಮೂಳೆ ಮತ್ತು ಸ್ನಾಯುಗಳನ್ನು ಗಟ್ಟಿಗೊಳಿಸಿ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಹಾಗೆಯೆ, ಖಿನ್ನತೆಯನ್ನು ತಗ್ಗಿಸುವಲ್ಲಿ ಬಹುತೇಕ ಎಲ್ಲಾ ಹಸಿರು ಸೊಪ್ಪುಗಳು ಸಹಕಾರಿ. ಸಂತಸದ ಸಂಗತಿಯೆಂದರೆ, ಬಹುತೇಕ ಸೊಪ್ಪುಗಳೆಲ್ಲ ಎಲ್ಲಾ ಕಾಲದಲ್ಲಿಯೂ ದೊರೆಯುತ್ತವೆ.
ಸೈಡ್ ಎಫೆಕ್ಟ್ : ಗಲ್ಲ ಕೆಂಪಗಾಗಿ, ಬಾಳು ಹಸುರಾಗಿರುತ್ತದೆ. Next ಬೀನ್ಸ್ »
;



Click it and Unblock the Notifications
