Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಸವಿದವನೇ ಬಲ್ಲ ಆ ತಾಟಿನುಂಗಿನ ಸವಿಯ

ಬೆತ್ತದ ಬುಟ್ಟಿಯಲಿ ತರುತ್ತಿದ್ದ ತಾಜಾ ತಾಜಾ ತಣ್ಣನೆಯ ನುಂಗನ್ನು ಕೈಯಲ್ಲಿ ಹಿಡಿದು, ತೆಳ್ಳನೆಯ ಸಿಪ್ಪೆ ಬಿಡಿಸಿ -ಮೃದುವಾದ ನುಂಗು ಎಲ್ಲಿ ಕೈಯಿಂದ ಜಾರಿ ಬೀಳುವುದೋ ಎಂದು ಜೋಪಾನವಾಗಿ ಕಚ್ಚುತ್ತಾ, ಚಿಮ್ಮುವ ತಂಪು ಸಿಹಿ ನೀರನ್ನು ಕುಡಿಯುತ್ತಾ ಆಹಾ-ಸುವೆಯೋ ಸುವೆ. ಸವಿದವನೇ ಬಲ್ಲ ಆ ನುಂಗಿನ ಸವಿಯ. ಗಟ್ಟಿಯಾಗಿ ಹಿಡಿಯದಿದ್ದರೆ ಥಟ್ಟನೆ ಜಾರುವ ನುಂಗು ಬಿದ್ದರಂತೂ ಗೊಳ್ಳನೆ ನಗು. ಅಯ್ಯೋ, ತೊಳ್ಕೊಂಡು ತಿನ್ನೋ ಏನೂ ಆಗೊಲ್ಲ ಎನ್ನುತ್ತಿದ್ದ ಕಾಲವೂ ಒಂದಿತ್ತು. ಹಾಗೆಯೇ ಏನೊಂದೂ ಅನಿಸದೆ ತೊಳೆದು ತಿಂದದ್ದೂ ಉಂಟು. ಈಗ?
ಕರ್ನಾಟಕದಲ್ಲಿ ತಾಟಿನುಂಗು, ತಾಟೀ ಹಣ್ಣು, ತುಳುವಿನಲ್ಲಿ ತಾಟಿಬೋಂಡ, ತಮಿಳಿನಲ್ಲಿ ನುಂಗು, ಮರಾಠಿಯಲಿ ತಾಡ್‌ಗೋಳ್, ಬೆಂಗಾಲಿಯಲ್ಲಿ ತಾಳ್, ಬಿಹಾರಿ ಭಾಷೆಯಲ್ಲಿ ತಾರಿ, ತೆಲುಗಿನಲ್ಲಿ ತಾಟಿ ಗೊಂಚಲು-ಗೊಂಚಲಾಗಿ ಕಂದುಬಣ್ಣದಲಿ ಬೊಡ್ಡೆಗಳಂತೆ ಇರುತ್ತದೆ. ಒಂದು ಬೊಡ್ಡೆಯಲ್ಲಿ ಮೂರ್ನಾಲ್ಕು ತಾಟಿನುಂಗು ಇರುತ್ತದೆ. ಇತ್ತೀಚೆಗೆ ಎಳನೀರಿನಂತೆ ಬೀದಿ ಬೀದಿಗಳಲ್ಲಿ ಕೊಚ್ಚಿ ತಾಜಾ-ತಾಜಾ ತಾಟಿನುಂಗು ಮಾರುತ್ತಾರೆ.
ತೆಂಗಿನ ಜಾತಿಗೆ ಸೇರಿದ Palmyra ಮರ ಸುಮಾರು 30 ಮೀಟರ್ ಎತ್ತರಕ್ಕೆ ಬೆಳೆಯುವುದು. ಇಂಡೋನೇಶಿಯಾದಲಿ ತಾಟಿನುಂಗಿನ ಸಕ್ಕರೆ ಉಪಯೋಗಿಸುತ್ತಾರೆ. ಇದಕ್ಕೆ ಗುಲ-ಜಾವಾ ಎನ್ನುತ್ತಾರೆ. ಕಾಂಬೋಡಿಯಾದ ರಾಷ್ಟ್ರೀಯ ಮರ. ಪ್ರಸಿದ್ಧ ಅಂಕೋರ್‌ವಾಟ್ ದೇಗುಲದ ಸುತ್ತ-ಮುತ್ತ ಕಾಣಬಹುದು. ಕಲ್ಪವೃಕ್ಷ ತೆಂಗಿನ ಮರದಂತೆಯೇ ತಾಟಿ ಮರದ ಗರಿ, ಬೊಡ್ಡೆ, ಕಾಯಿಗಳು ಬಲು ಉಪಯುಕ್ತ.
ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲಿ ಬೆಳೆಯುವ ತಾಟಿಯಿಂದ ಬೆಲ್ಲವೂ ತಯಾರು. ಈ ಬೆಲ್ಲ ಬಾಣಂತಿಯರಿಗೆ, ಮುಟ್ಟಿನ ತೊಂದರೆ ಇರುವವರಿಗೆ ಔಷಧಿ. ತಾಟಿನುಂಗಿನಲ್ಲಿ ಪೊಟಾಶಿಯಂ ಹಾಗೂ ನಾರಿನಂಶ ಹೆಚ್ಚಿದೆ. ತಿನ್ನಲು ಸುವೆಯಾದ ಇದರಲ್ಲಿ ಕೊಬ್ಬಿಲ್ಲ. ಎಚ್ಚರಿಕೆ ಬಾಯಾರಿಕೆ ನೀಗಿಸುವ ಈ ತಾಟಿನುಂಗಿಗೆ "ನೀರಾ"ದಲ್ಲೂ ಪಾಲುಂಟು.
ನಂಗಂತೂ ಸಿಂಗಪುರದಲ್ಲಿ ಹತ್ತು ವರುಷಗಳ ನಂತರ "ನುಂಗು" ಸಿಕ್ಕಿತು. ಬೆಂಗಳೂರು-ಮಂಗಳೂರಿನಲಿ ಕಮ್ಮಿ ಏನಿಲ್ಲ...ಬೇಸಿಗೆ ಬಂದಿದೆ.. ಜೆಲ್ಲಿಯಂತೆ ನುಣುಪಾದ ನುಂಗನ್ನು ತಿಂದು ಆನಂದಿಸಿ.



Click it and Unblock the Notifications
