Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ

ಪರೀಕ್ಷಾ ದಿನಗಳಲ್ಲಿ ದೇಹ ಮತ್ತು ಮನಸ್ಸುಗಳೆರಡೂ ಪರೀಕ್ಷೆಗೆ ಒಳಗಾಗುತ್ತವೆ. ವ್ಯಕ್ತಿಯೊಬ್ಬನ ಇಡೀ ದೇಹದ ವ್ಯವಸ್ಥೆ ಗಮನಾರ್ಹ ಪ್ರಮಾಣದ ಒತ್ತಡ ತಾಳಿಕೊಳ್ಳಬೇಕಾಗುತ್ತದೆ. ದೀರ್ಘ ಸಮಯದ ಒತ್ತಡ ಎದುರಿಸಲು ವ್ಯಕ್ತಿಯ ಆಂತರಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಬೇಕು. ಇದರಿಂದ ಅಧ್ಯಯನಕ್ಕೆ ಹೆಚ್ಚು ಗಮನ ನೀಡಲು, ಓದಿನಲ್ಲಿ ಮನಸ್ಸು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ ಎಂದು ವಿಮ್ಹಾನ್ಸ್‌ನ ಮನಶಾಸ್ತ್ರಜ್ಞ ಸಲಹಾ ತಜ್ಞ ಡಾ. ಜಿತೇಂದ್ರ ನಾಗ್ಪಾಲ್ ಅವರು ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ. ಸಮತೋಲಿತ ಆಹಾರ ಸೇವನೆ ಮೂಲಕ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಪೋಷಕಾಂಶಗಳಿಂದ ಕೂಡಿದ ಶಕ್ತಿವರ್ಧಕ ಪಾನೀಯ ಸೇವನೆಯೂ ತುಂಬ ಪ್ರಯೋಜನಕಾರಿಯಾಗಿರುತ್ತದೆ.
ದೇಹದ ಆಂತರಿಕ ಸಾಮರ್ಥ್ಯದ ನಿರ್ಲಕ್ಷ್ಯ ಸಲ್ಲ : ದೇಹದ ಆಂತರಿಕ ಸಾಮರ್ಥ್ಯ ತುಂಬ ಮಹತ್ವದ್ದು. ಅದರಲ್ಲೂ ಋತುಮಾನ ಏರಿಳಿತ ಸಂದರ್ಭಗಳಲ್ಲಿ ಹೆಚ್ಚು ಮಹತ್ವದ್ದು ಆಗಿರುತ್ತದೆ. ಪರೀಕ್ಷೆಗಳ ಮುಂಚೆ ಅಥವಾ ಪರೀಕ್ಷಾ ದಿನಗಳಲ್ಲಿ ದೈಹಿಕ ಆರೋಗ್ಯದಲ್ಲಿ ಹೆಚ್ಚುಕಡಿಮೆಯಾದರೆ, ಪರೀಕ್ಷೆಗಳಿಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದರೂ ಹಿಂದೆ ಬೀಳಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ದೇಹದ ಆಂತರಿಕ ಶಕ್ತಿಯನ್ನು ವೃದ್ಧಿಸಿಕೊಂಡಿರಬೇಕಾಗುತ್ತದೆ.
ಸರಿಯಾದ ಆಹಾರ ಸೇವನೆಯೇ ಮೂಲ ಮಂತ್ರ : ನೀವು ಸೇವಿಸುವ ಆಹಾರ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ದೈಹಿಕ ಚಟುವಟಿಕೆಗಳಂತೆ, ಸರಿಯಾದ ಆಹಾರ ಸೇವನೆಯು ದೇಹದ ಆಂತರಿಕ ಶಕ್ತಿ ಸಶಕ್ತವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತದೆ. ದೇಹದ ಪೋಷಕಾಂಶಗಳ ಬೇಡಿಕೆಯನ್ನು ಪೌಷ್ಟಿಕ ಶಕ್ತಿವರ್ಧಕ ಪಾನೀಯಗಳು ಸಮರ್ಥವಾಗಿ ಪೂರೈಸುತ್ತವೆ ಎಂದು ಭಾರತೀಯ ಆಹಾರಪಥ್ಯೆ ಸಂಘದ ಬೆಂಗಳೂರು ಘಟಕದ ಅಧ್ಯಕ್ಷರಾಗಿರುವ ಮತ್ತು ಅಪೊಲೊ ಆಸ್ಪತ್ರೆಯ ಮುಖ್ಯ ಪೋಷಕಾಂಶ ತಜ್ಞ ಡಾ. ಪ್ರಿಯಾಂಕಾ ರೋಹಟಗಿ ಅವರು ಅಭಿಪ್ರಾಯಪಡುತ್ತಾರೆ.
ಏನನ್ನು ಸೇವಿಸಬೇಕು
* ಮನೆಯಲ್ಲಿ ಸಿದ್ಧಪಡಿಸಿದ ಆಹಾರ
* ಹಣ್ಣು ಮತ್ತು ತರಕಾರಿ
* ಸಲಾಡ್ ಮತ್ತು ಬೇಯಿಸಿದ ಕುರುಕಲು ತಿಂಡಿ (ಸ್ನ್ಯಾಕ್ಸ್)
* ಹಾರ್ಲಿಕ್ಸ್‌ನಂತಹ ಪೋಷಕಾಂಶಯುಕ್ತ ಶಕ್ತಿವರ್ಧಕ ಪಾನೀಯ
* ಸಾಕಷ್ಟು ಪ್ರಮಾಣದಲ್ಲಿ ನೀರು
* ನಿಯಮಿತವಾಗಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ
ಏನನ್ನು ಸೇವಿಸಬಾರದು
* ತಂಬಾಕು ಉತ್ಪನ್ನಗಳು
* ವೈದ್ಯರು ಶಿಫಾರಸು ಮಾಡದ ಔಷಧಿಗಳು
ಸಾಧಾರಣ ಆಹಾರ
* ಬಾಹ್ಯ ಆಹಾರ
* ಕರಿದ ಮತ್ತು ತೈಲಭರಿತ ಸ್ನ್ಯಾಕ್ಸ್
ಸಮತೋಲಿತ ಆಹಾರ
* ಬೆಳಗಿನ ತಿಂಡಿ : ಪೂರ್ಣಪ್ರಮಾಣದ ಧಾನ್ಯ ಓಟ್ಸ್, 1 ಹಣ್ಣು, 1 ಮೊಟ್ಟೆ ಮತ್ತು 5ರಿಂದ 8 ಬಾದಾಮಿ.
* ಮಧ್ಯಾಹ್ನದ ಊಟದ ಮುಂಚೆ ಮಧ್ಯಂತರದಲ್ಲಿ - ಹಾರ್ಲಿಕ್ಸ್‌ನಂತಹ ಆರೋಗ್ಯಕರ ಪೇಯ, ಒಂದು ಲೋಟದಷ್ಟು ಹಣ್ಣಿನ ರಸ.
* ಊಟ : ಸೋಯಾ ಮತ್ತು ಗೋಧಿ ಹಿಟ್ಟಿನ 2 ಚಪಾತಿ. ಮೊಳಕೆ ಒಡೆದ ಕಾಳು 1 ಬಟ್ಟಲು, ಬೇಳೆ 1 ಬಟ್ಟಲು, ಮೊಸರು, ತರಕಾರಿ ಮತ್ತು ಸಲಾಡ್.
* ಚಹ : ಆರೋಗ್ಯಕರ ಪೇಯ, ಹಣ್ಣಿನ ರಸ, 8ರಿಂದ 10 ಒಣದ್ರಾಕ್ಷಿ ಅಥವಾ ತಾಜಾ ಹಣ್ಣಿನ ರಸ.
* ರಾತ್ರಿ ಊಟ : ಒಂದು ಬಟ್ಟಲು ಅಕ್ಕಿ, ಸೋಯಾ ಮತ್ತು ಗೋಧಿ ಹಿಟ್ಟಿನ 2 ಚಪಾತಿ. ಬೇಳೆ ಸಾರು ಅಥವಾ ಮೀನು. ತರಕಾರಿ ಮತ್ತು ಸಲಾಡ್
* ಊಟದ ನಂತರ : ಒಂದು ಲೋಟ ಹಾಲು ಅಥವಾ ಹಣ್ಣಿನ ರಸ.



Click it and Unblock the Notifications
