Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ದಿಕ್ಕೆಡಿಸಿ ದಿಕ್ಕಾಪಾಲಾದ ಆಮ್ಲೆಟ್ ಘಮಲು

* ಯಶ್
ಮೊಟ್ಟೆ ಸಸ್ಯಾಹಾರಿಯೋ ಮಾಂಸಾಹಾರಿಯೋ ಅನ್ನುವುದು ಕೋಳಿ ಮೊದಲೋ ತತ್ತಿ ಮೊದಲೋ ಎನ್ನುವಷ್ಟು ಹಳೆಯದು. ಇದರ ಬಗ್ಗೆ ಚರ್ಚೆ ಪ್ರಾರಂಭವಾದರೆ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಯಾಕೆಂದರೆ, ವಾದ ಮಾಡುವವರು ತಾವು ಹೇಳಿದ್ದೇ ಸರಿ ಅಂತನೇ ವಾದಿಸ್ತಾರೆ ತಾನೆ. ಮೊಟ್ಟೆ ಸಸ್ಯಾಹಾರಿ ಅಂತ ಅಂದ್ಕೊಂಡೋರು ಸಸ್ಯಾಹಾರಿ ಅಂತಾನೇ ತಿಂತಾರೆ ತಾನೆ? ಲಾಜಿಕ್ ಥಿಂಕ್ ಮಾಡಿ.
ಕಟ್ಟಾ ಸಂಪ್ರದಾಯವಾದಿಗಳ ಮನೆಗಳಲ್ಲಿ ತಿನ್ನುವುದು ಹೋಗಲಿ 'ಮೊಟ್ಟೆ' ಅನ್ನುವ ಪದವನ್ನೂ ಬಳಸುವುದಿಲ್ಲ. ಮೊಟ್ಟೆ ಹಾಕಿರ್ತಾರೆ ಅಂತ ಬ್ರೆಡ್ಡು ತರುವುದಿಲ್ಲ, ಮೊಟ್ಟೆ ಹಾಕಿದ ಕೇಕು ತಿನ್ನುವುದಿಲ್ಲ. ಈ ದೃಷ್ಟಿಯಿಂದ ನೋಡಿದರೆ ಬೆಳ್ಳುಳ್ಳಿ ಮತ್ತು ಮೊಟ್ಟೆಗಳೆರಡೂ ಸಮಾನ ದುಃಖಿಗಳು ಅಂತ ಹೇಳಿದ್ರೆ ನೀವು ನಗಬಾರದು. ಎನಿವೇ, ಯಾರು ಏನಾದ್ರೂ ಮಾಡಿಕೊಳ್ಳಲಿ ಮೊಟ್ಟೆಯನ್ನು ನಾನು ಮಾತ್ರ ಸಸ್ಯಾಹಾರಿ ಅಂತಾನೇ ತಿಳಿದುಕೊಂಡು ಸಾಧ್ಯವಾದಷ್ಟೂ ಮನೇಲಿ ಹೇಳದೇ ಕದ್ದುಮುಚ್ಚಿ ತಿಂತಾನೇ ಬಂದಿದ್ದೀನಿ. ಇದೇ ಪದ್ಧತಿ ನಮ್ಮ ಮನೆತನದಲ್ಲೂ ಕೆಲವರು ಪರಂಪರಾಗತವಾಗಿ ಪಾಲಿಸಿಕೊಂಡು ಬಂದಿದ್ದಾರೆ ಅಂತ ಹೇಳಿದ್ರೆ ಉತ್ಪ್ರೇಕ್ಷೆಯಾಗಲಾರದು.
ಓವಲ್ ಶೇಪಿನಲ್ಲಿರುವ ಮೊಟ್ಟೆ ಏನೇ ಪೌಷ್ಟಿಕಾಂಶಗಳನ್ನು ನೀಡಲಿ, ಗಂಡ-ಹೆಂಡತಿಯರ ಮಧ್ಯೆ, ಕುಟುಂಬದಲ್ಲಿ ಏನೇ ಕಲಹಗಳಿಗೆ ಕಾರಣವಾಗಲಿ ನನ್ನ ಪಾಲಿಗೆ ಮಾತ್ರ ಕಣ್ಣು, ಕಿವಿ, ಮೂಗು ಮುಚ್ಚಿಕೊಂಡು ತಿನ್ನುವಂಥ ಒಂದು ಪದಾರ್ಥ. ಇರಲಿ, ಒಂದು ಸ್ವಾರಸ್ಯಕರ ಘಟನೆಯನ್ನು ಹೇಳುವುದೇ ಈ ಲೇಖನದ ಸದುದ್ದೇಶ. ಯಾರನ್ನೇ ಆಗಲಿ ಕೆಣಕುವುದು, ಕೆರಳಿಸುವುದು, ಚರ್ಚೆಗೆ ವೇದಿಕೆ ಕಲ್ಪಿಸುವುದು ಉದ್ದೇಶವಲ್ಲ.
ಒಂದು ಬಾರಿ ಏನಾಯಿತೆಂದರೆ, ನಾವು ನಾಲ್ಕು ಜನ ಬ್ರಹ್ಮಚಾರಿಗಳು ಮನೆಯ ಹಿರಿಯರು ಯಾರೂ ಇಲ್ಲದಾಗ ಒಟ್ಟಿಗೆ ಸೇರಿದ್ದೆವು. ಹೊಟೇಲಿಗೆ ಹೋಗಲು ಸಾಕಷ್ಟು ಕಾಸಿಲ್ಲದಿದ್ದರಿಂದ ಮತ್ತು ಬೇರೆ ಯಾವುದೇ ತಿಂಡಿ ತಯಾರಿಸಲು ಮನಸ್ಸಿಲ್ಲದಿದ್ದರಿಂದ ಮನೆಯಲ್ಲಿದ್ದ ಈರುಳ್ಳಿ, ಹಸಿಮೆಣಸಿನಕಾಯಿ, ಹಸಿಕೊಬ್ಬರಿ, ಹಸಿಶುಂಠಿ, ಕರವೇವು, ಕೊತ್ತಂಬರಿ ಸೇರಿಸಿ ನಾಲ್ಕಾರು ಮೊಟ್ಟೆಗಳನ್ನು ತಂದು ಆಮ್ಲೇಟ್ ತಯಾರಿಸುವ ವೈಲ್ಡ್ ಯೋಚನೆ ಎಲ್ಲರಿಗೆ ಹೊಳೆದಿತ್ತು.
ಸರಿ, ಇನ್ನೇನು ತಂದದ್ದೂ ಆಯಿತು ನಾಲ್ಕು ಮೊಟ್ಟೆ. ಒಬ್ಬ ಸೋಡಾಗ್ಲಾಸು ಈರುಳ್ಳಿ ಹೆಚ್ಚಿದರೆ, ಇನ್ನೊಬ್ಬ ಹಳಕುಹಳಕಾಗಿ ಕೊಬ್ಬರಿ ತುರಿಯುವ ಮತ್ತು ಮೆಣಸಿನಕಾಯಿ ಹೆಚ್ಚುವ ಜವಾಬ್ದಾರಿ ಹೊತ್ತಿದ್ದ, ಮತ್ತೊಬ್ಬ ಕೊತ್ತಂಬರಿ ತೊಳೆದು ಸಣ್ಣಗೆ ಹೆಚ್ಚುವ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡಿದ್ದ. ಎಲ್ಲರಿಗಿಂತ ಮೊಟ್ಟೆ ಪಳಗಿಸುವುದರಲ್ಲಿ ಅನುಭವಿ ಆಗಿದ್ದವ ಮೊಟ್ಟೆಯನ್ನು ನೀಟಾಗಿ ಒಡೆದು ಅದರಲ್ಲಿನ ಯೋಕನ್ನು ಬೇರ್ಪಡಿಸುವ ನೈಪುಣ್ಯತೆ ಅಗತ್ಯವುಳ್ಳ ಕೆಲಸಕ್ಕೆ ಕೈಹಾಕಿದ್ದ.
ಎಲ್ಲರ ಮೊಗದಲ್ಲಿ ಅದೇನೋ ವಿಚಿತ್ರ ಬಗೆಯ ಮುಗುಳ್ನಗು ಮನೆಮಾಡಿತ್ತು. ಮನೆಯಲ್ಲೇ ಮೊದಲಬಾರಿಗೆ ಆಮ್ಲೇಟ್ ಮಾಡುತ್ತಿರುವುದು ಆ ನಗುವಿಗೆ ಕಾರಣವಾಗಿತ್ತು. ಅಂಥಾ ಪ್ರವೀಣರಲ್ಲದಿದ್ದರೂ ಅಡುಗೆ ಮಾಡುವ ನೈಪುಣ್ಯತೆ ಎಲ್ಲರಲ್ಲೂ ತಕ್ಕಮಟ್ಟಿಗಿತ್ತು. ಒಡೆದ ಮೊಟ್ಟೆಯಲ್ಲಿ ಹೆಚ್ಚಿಟ್ಟುಕೊಂಡ ಎಲ್ಲ ಪದಾರ್ಥಗಳನ್ನು ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದು ದೊಡ್ಡ ಚಮಚದಿಂದ ಗಿರಗಿರನೆ ತಿರುಗಿಸಿ ದೋಸೆ ಮಾಡುವ ಹಂಚಿನ ಮೇಲೆ ಹುಯ್ದಾಗ ಪಕ್ಕದ ಮನೆಯವರು ದೋಸೆ ಮಾಡುತ್ತಿದ್ದೆವೇನೋ ಅಂದ್ಕೋಬೇಕು, ಅಂತ ನಾವು ಅಂದ್ಕೊಂಡಿದ್ದೆವು.
ಹಾಳಾದ್ದು, ವಾಸನೆ ಕೇಳಬೇಕಲ್ಲ. ಎಲ್ಲ ಬಾಗಿಲು, ಕಿಟಕಿಗಳನ್ನು ಭದ್ರವಾಗಿ ಮುಚ್ಚಿದ್ದರೂ ಅಕ್ಕಪಕ್ಕದ ಮನೆಯವರಿಗೆ ಮೂಗಿರುತ್ತದೆಂದು ನಾವೆಲ್ಲ ಮರೆತುಬಿಟ್ಟಿದ್ದೆವು. ಆ ವಾಸನೆ ನಾವು ಏನು ಮಾಡುತ್ತಿದ್ದೇವೆಂದು ತಿಳಿಸಲು ಹೆಚ್ಚು ಹೊತ್ತು ತೆಗೆದುಕೊಂಡಿರಲಿಲ್ಲ. ಆಮ್ಲೆಟ್ ವಾಸನೆ ದಿಕ್ಕಾಪಾಲಾಗಿತ್ತು, ನಮ್ಮನ್ನೆಲ್ಲ ದಿಕ್ಕೆಡಿಸಿತ್ತು. ಆದರೆ, ನಾವು ಮಾಡಿದ ಈ ಕೆಲಸಕ್ಕೆ ಯಾರೂ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ ಎಂಬುದು ಎಲ್ಲರ ಸಮಾಧಾನಕ್ಕೆ ಕಾರಣವಾಗಿತ್ತು. ಆದಿದ್ದಾಗಲಿ ಎದುರಿಸಿಯೇ ಬಿಡೋಣ ಎಂಬ ಹುಂಬ ಧೈರ್ಯದಿಂದ ಪಟ್ಟಾಗಿ ಕುಳಿತುಕೊಂಡು ಹರಟುತ್ತಾ ಆಮ್ಲೇಟನ್ನು ಎಲ್ಲರೂ ಮೆಂದಿದ್ದೆವು. ನಂತರ ಆಮ್ಲೇಟ್ ಮಾಡಲು ಬಳಸಲಾಗಿದ್ದ ಎಲ್ಲ ಪಾತ್ರೆಪಗಡಗಳನ್ನು ಯಾವುದೇ ಸಾಕ್ಷಿ ಉಳಿಯದಂತೆ ನೀಟಾಗಿ ತೊಳೆದುಹಾಕಿದ್ದೆವು, ಒಂದು ಮಾತ್ರ ಹೊರತುಪಡಿಸಿ.



Click it and Unblock the Notifications
