For Quick Alerts
ALLOW NOTIFICATIONS  
For Daily Alerts

ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್‌ ರೆಸಿಪಿ

Posted By:
|

ನೀವು ಫ್ರೈಡ್‌ ರೈಸ್‌ ಇಷ್ಟಪಡುವುದಾದರೆ ಹಲವಾರು ರುಚಿಯಲ್ಲಿ ಸವಿಯಬಹುದು. ವೆಜ್‌ ಫ್ರೈಡ್‌ ರೈಸ್‌, ಎಗ್‌, ನಾನ್‌ವೆಜ್‌ ಫ್ರೈಡ್‌ ರೈಸ್‌ ಹೀಗೆ ನಾನಾ ರುಚಿಯಲ್ಲಿ ಮಾಡಿ ಸವಿಯಬಹುದು. ಇಲ್ಲಿ ನಾವು ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್ ರೆಸಿಪಿ ನೀಡಿದ್ದೇವೆ.

How To Make Corn Pulao

ಈ ಸ್ವೀಟ್‌ ಕಾರ್ನ್ ಫ್ರೈಡ್‌ರೈಸ್ ಬಾಯಿರುಚಿ‌ ಹೆಚ್ಚಿಸುವುದರ ಜೊತೆಗೆ ದಿನಚರಿ ಪೋಷಕಾಂಶ ಹಾಗೂ ನಾರಿನಂಶವಿರುವ ಆಹಾರವಾಗಿದೆ. ಬನ್ನಿ ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್ ಮಾಡುವುದು ಹೇಗೆ ಎಂದು ನೋಡೋಣ:

Corn Pulao Recipe, ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್‌ ರೆಸಿಪಿ
Corn Pulao Recipe, ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್‌ ರೆಸಿಪಿ
Prep Time
10 Mins
Cook Time
25M
Total Time
35 Mins

Recipe By: Reena TK

Recipe Type: Meal

Serves: 2

Ingredients
  • ಬೇಕಾಗುವ ಸಾಮಗ್ರಿ

    ಬಾಸುಮತಿ ಅಕ್ಕಿ-1 ಕಪ್

    ಸ್ವೀಟ್‌ ಕಾರ್ನ್ 1 ಕಪ್

    ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ

    ಸೋಯಾ ಸಾಸ್‌ 1 ಚಮಚ

    ವಿನೆಗರ್ 1 ಚಮಚ

    ಚಿಲ್ಲಿ ಸಾಸ್ 1 ಚಮಚ

    ಸ್ಪ್ರಿಂಗ್‌ಆನಿಯನ್‌ 2 ಚಮಚ

    2 ಚಮಚ ಎಣ್ಣೆ

    ರುಚಿಗೆ ತಕ್ಕ ಉಪ್ಪು

    ಹಸಿ ಮೆಣಸಿನಕಾಯಿ 2

Red Rice Kanda Poha
How to Prepare
  • {recipe}ತಯಾರಿಸುವುದು ಹೇಗೆ?

    1.ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಹಾಕಿ. ನಂತರ ಬೇಯಿಸಿ.

    2. ಸ್ವೀಟ್‌ ಕಾರ್ನ್‌ ಬೇಯಿಸಿ ಇಡಿ.

    3. ಪ್ಯಾನ್‌ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದಕ್ಕೆ ಈರುಳ್ಳಿ, 2 ಚಮಚ ಸ್ಪ್ರಿಂಗ್‌ ಆನಿಯನ್‌ ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ.ಈಗ ಸ್ವೀಟ್‌ ಕಾರ್ನ್ ಸೇರಿಸಿ ಅಧಿಕ ಉರಿಯಲ್ಲಿ ಫ್ರೈ ಮಾಡಿ.

    4. ಈಗ 2 ಚಮಚ ವಿನೆಗರ್, 2 ಚಮಚ ಸೋಯಾ ಸಾಸ್, 1 ಚಮಚ ಚಿಲ್ಲಿ ಸಾಸ್‌ ಹಾಕಿ 30 ನಿಮಿಷ ಆಡಿಸಿ.

    5. ಈಗ ಸ್ವೀಟ್‌ ಕಾರ್ನ್‌ ಹಾಕಿ ಮಿಶ್ರ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ.

    6. ಈಗ ಬೇಯಿಸಿದ ಅನ್ನ ಹಾಕಿ ಮಿಶ್ರ ಮಾಡಿದರೆ ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್‌ ರೆಡಿ.

    ಇದಕ್ಕೆ ಕ್ಯಾರೆಟ್‌, ಕ್ಯಾಪ್ಸಿಕಂ, ಬೀನ್ಸ್ ಇವೆಲ್ಲಾ ಸೇರಿಸಿದರೆ ಇನ್ನೂ ರುಚಿಯಾಗಿರುತ್ತದೆ.

Instructions
  • ಸೂಚನೆ: ಇದನ್ನು ಕಡಿಮೆ ಗ್ಯಾಸ್‌ ಉರಿಯಲ್ಲಿಟ್ಟು ತಯಾರಿಸಿ.
Nutritional Information
  • ಸರ್ವ್ ಸೈಜ್ - 1 ಬೌಲ್‌ (289ಗ್ರಾಂ)
  • ಕ್ಯಾಲೋರಿ - 313 ಕ್ಯಾ
  • ಕೊಬ್ಬು - 6.3ಗ್ರಾಂ
  • ಪ್ರೊಟೀನ್ - 6.5ಗ್ರಾಂ
  • ಕಾರ್ಬ್ಸ್ - 58.2ಗ್ರಾಂ
  • ನಾರಿನಂಶ - 1.3ಗ್ರಾಂ
[ 3.5 of 5 - 72 Users]
X
Desktop Bottom Promotion