Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೋಸೆಗೆ ಬೇಕು ದೊಡ್ಡ ಮೆಣಸಿನಕಾಯಿ ತೊಕ್ಕು

ಬೇಕಾಗುವ ಪದಾರ್ಥಗಳು
ಹಸಿರಾಗಿರುವ ದೊಡ್ಡ ಮೆಣಸಿನಕಾಯಿ- 2 (ದೊಡ್ಡ ಸೈಜಿನವು)
ಅರಿಶಿನಪುಡಿಯ ಪೇಸ್ಟು- 1 ಟೀ ಚಮಚ
ಧನಿಯಾ- 2 ಟೀ ಚಮಚ
ಕಡಲೆ ಬೇಳೆ- 2 ಟೀ ಚಮಚ
ಕೆಂಪು ಒಣ ಮೆಣಸಿನಕಾಯಿ- 1 (ದೊಡ್ಡದು)
ಮೆಂತ್ಯ- 1 ಟೀ ಚಮಚ
ಸಾಸಿವೆ- 1 ಟೀ ಚಮಚ
ಇಂಗು- ಅರ್ಧ ಟೀ ಚಮಚ
ಎಣ್ಣೆ- ಒಂದು ಟೇಬಲ್ ಚಮಚ
ಮೆಣಸಿನ ಪುಡಿ- 1 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಬೀಜ ತೆಗೆದು, ದೊಡ್ಡ ಮೆಣಸಿನಕಾಯಿಗಳನ್ನು ತುರಿಯಿರಿ. ತುರಿಯನ್ನು ಸ್ವಲ್ಪ ಎಣ್ಣೆ ಸವರಿದ ಬಾಣಲೆಯಲ್ಲಿ ಬಾಡಿಸಿ. ತುರಿ ಮೃದುವಾಗುತ್ತದೆ. ಅರಿಶಿನದ ಪೇಸ್ಟಿನೊಟ್ಟಿಗೆ ದೊಡ್ಡ ಮೆಣಸಿನಕಾಯಿ ತುರಿಯನ್ನು ರುಬ್ಬಿಕೊಳ್ಳಿ- ಮಿಕ್ಸಿಯಲ್ಲಿ ರುಬ್ಬುವುದಕ್ಕಿಂತ ಒರಳಲ್ಲಿ ರುಬ್ಬಿದರೆ ರುಚಿ ಹೆಚ್ಚು. ಮೃದು ಪೇಸ್ಟಿನ ರೂಪಕ್ಕೆ ಬರುವವರೆಗೆ ರುಬ್ಬಿಕೊಂಡು, ಸಣ್ಣ ಬಟ್ಟಲಿಗೆ ತುಂಬಿಸಿಡಿ.
ಕಡಲೆಬೇಳೆ, ಮೆಂತ್ಯ, ಧನಿಯಾ, ಒಣ ಮೆಣಸಿನಕಾಯಿ, ಇಂಗು- ಎಲ್ಲವನ್ನು ಸಣ್ಣ ಬಾಣಲೆಯಲ್ಲಿ ಎಣ್ಣೆಯಿಲ್ಲದೆ ಹದವಾಗಿ ಹುರಿಯಿರಿ. ನಂತರ ಇವನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಎಣ್ಣೆಯನ್ನು ಕಾಯಿಸಿ, ಸಾಸಿವೆ ಹಾಕಿ. ಸಾಸಿವೆ ಚಿಟಿಗುಟ್ಟಲಿ. ಆಮೇಲೆ ದೊಡ್ಡ ಮೆಣಸಿನಕಾಯಿ ಪೇಸ್ಟನ್ನು ಅದಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು- ಮೆಣಸಿನ ಪುಡಿ ಹಾಕಿ. ಮಿಕ್ಸಿಗೆ ಹಾಕಿಟ್ಟುಕೊಂಡ ಪುಡಿಯನ್ನೂ ಸೇರಿಸಿ. ಚೆನ್ನಾಗಿ ಬೆರೆಸಿ.
ಇಷ್ಟು ಪ್ರಮಾಣದ ತೊಕ್ಕು ಮೂವರ ನಾಲಗೆ ರುಚಿ ತಣಿಸಬಲ್ಲದು. ಇಡ್ಲಿ, ದೋಸೆಯ ಜೊತೆಗೆ ಈ ತೊಕ್ಕು ಬಲು ರುಚಿ.



Click it and Unblock the Notifications
