Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಕ್ಕರಿಯ ಪ್ರೇಯಸಿ ಭಯಂಕರ ಖಾರದ ರಂಜಕ

ಎಣ್ಣೆಗಾಯಿ ಪಲ್ಯ, ಝುಣಕ, ಮಾಟವಾಡಿ ಪಲ್ಯಗಳನ್ನು ಬದಿಗಿಟ್ಟರೆ ಭಕ್ಕರಿ ಯ ನಿಜವಾದ ಪ್ರೇಯಸಿ ಅಂದರೆ ರಂಜಕ ಅರ್ಥಾತ್ ಕೆಂಪು ಮೆಣಸಿನಕಾಯಿ ಖಾರ ಚಟ್ನಿ. ಬಾಯಿಗಿಟ್ಟಾಗ ನಾಲಿಗೆ ಚುರುಗುಟ್ಟುತ್ತಿರುತ್ತದೆ, ಕಣ್ಣಲ್ಲಿ ಮತ್ತು ಮೂಗಲ್ಲಿ ಬಳಬಳನೆ ನೀರು ಸುರಿಯುತ್ತಿರುತ್ತದೆ ಆದರೆ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ. ಈ ಖಾರದ ರುಚಿ ಆಪರಿಯದ್ದು. ಖಾರದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದರೆ ಆಗಾಗ ಬಟ್ಟಲಲ್ಲಿ ತೆಗೆದು ಅದಕ್ಕೆ ಹಸಿ ಕೊಬ್ಬರಿಯನ್ನು ತುರಿದು ಹಾಕಬಹುದು.
ಗದಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಚಟ್ನಿಯನ್ನು ಜರೂರ ಮಾಡಿರುತ್ತಾರೆ. ಇಷ್ಟವಿದ್ದವರು ಒಮ್ಮೆ ರುಚಿ ನೋಡಿ. ಮತ್ತೊಂದು ವಿಷಯವೇನೆಂದರೆ ಸರಿಯಾಗಿ ತಯಾರಿಸಿ ಭದ್ರವಾಗಿ ಬಾಟಲಿಯಲ್ಲಿ ಬಂಧಿಸಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ, ನೀರನ್ನು ಮಾತ್ರ ಸೋಂಕಿಸಲೇಬಾರದು.
ಈ ಚಟ್ನಿಗೆ ರಂಜಕ ಅಂತ ಯಾಕೆ ಕರೆಯುತ್ತಾರೆಂದು ನನಗಂತೂ ತಿಳಿದಿಲ್ಲ. ಬಲ್ಲವರು ತಿಳಿದಿದ್ದರೆ ನಮಗೂ ತಿಳಿಸಿದರು ಉಪಕಾರವಾಗುತ್ತದೆ. ನೆನಪಿರಲಿ, ಇದಕ್ಕೆ ಬ್ಯಾಡಗಿ ಮೆಣಸಿನಕಾಯಿಯನ್ನೇ ಬಳಸಬೇಕು, ಗುಂಟೂರು ಮೆಣಸಿನಕಾಯಿ ಬಳಸಬಾರದು.
ರಂಜಕ್ಕೆ ಬೇಕಾದ ಪದಾರ್ಥಗಳು :
ಒಣ ಬ್ಯಾಡಗಿ ಮೆಣಸಿನಕಾಯಿ 1 ಕಿ.ಗ್ರಾಂ.
ಹರಳುಪ್ಪು 1/4 ಕಿ.ಗ್ರಾಂ.
ಹುಣಸೆಹಣ್ಣು ಅರ್ಧ ಬಟ್ಟಲು
ಇಂಗು ಸಣ್ಣ ಡಬ್ಬಿ
ಮೆಂತೆಕಾಳು 2 ಚಮಚ
ಸಾಸಿವೆ ಸ್ವಲ್ಪ
ತಯಾರಿಸುವ ವಿಧಾನ :
ತಯಾರಿಸುವ ಮುನ್ನ ನಿಮ್ಮ ಕೈಗಳಿಗೆ ಅಜೀಬಾತ್ ನೀರು ಸೋಂಕಿರಬಾರದು. ನೀರು ಹತ್ತಿದ್ದರೆ ಕೆಲಸ ಕೆಟ್ಟಿತೆಂದೇ ಅರ್ಥ. ಸೋ, ಕೈ ಒಣಒಣ ಆಗಿರಲಿ.
ಒಣ ಬ್ಯಾಡಗಿ ಮೆಣಸಿನಕಾಯಿಯ ತುಂಬುಗಳನ್ನು ತೆಗೆದಿಟ್ಟು ಅದಕ್ಕೆ ಹರಳುಪ್ಪು ಮತ್ತು ಹುಣಸೆಹಣ್ಣನ್ನು ಸೇರಿಸಿಡಿ. ಎರಡು ಗಂಟೆ ಅದರ ತಂಟೆಗೆ ಹೋಗಬೇಡಿ. ನಂತರ, ಮೆಂತೆ ಮತ್ತು ಸಾಸಿವೆಗೆ ಇಂಗನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ಪುಡಿಪುಡಿ ಮಾಡಿಟ್ಟುಕೊಳ್ಳಿ. ಇಂಗು ಸ್ವಲ್ಪ ಹೆಚ್ಚೂಕಡಿಮೆಯಾಗಿದ್ದರೆ ತೊಂದರೆಯೇನಿಲ್ಲ. ಆರೋಗ್ಯಕ್ಕೂ ಒಳ್ಳೆಯದು.
ಇಷ್ಟೆಲ್ಲ ಮುಗಿದ ನಂತರ, ಬೆರೆಸಿಟ್ಟ ಬ್ಯಾಡಗಿ ಮೆಣಸಿನಕಾಯಿ ಮಿಶ್ರಣಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡ ಪದಾರ್ಥಗಳನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ಗಿರಿಗಿರಿ ಅನ್ನಿಸಿ. ಚಟ್ನಿ ತೀರ ಸಣ್ಣಗಾಗುವುದು ಬೇಡ, ತರಿತರಿಯಾಗಿದ್ದರೆ ಸಾಕು. ಅಷ್ಟೆ, ಬ್ರಹ್ಮಾಂಡ ಖಾರ ಬ್ಯಾಡಗಿ ಮೆಣಸಿನಕಾಯಿ ಚಟ್ನಿ ಅಥವಾ ರಂಜಕ ರೆಡಿ.
ಕಟಕು ಭಕ್ಕರಿಯನ್ನೇ ತಟ್ಟೆಯಾಗಿಸಿಕೊಂಡು ಮಧ್ಯದಲ್ಲಿ ಮುದ್ದೆ ರಂಜಕ ಹಾಕಿಸಿಕೊಂಡು ಖಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೇ ಸುಮ್ಮನೆ ಅದರ ರುಚಿಯನ್ನು ಆಸ್ವಾದಿಸಿ.



Click it and Unblock the Notifications
